ಕಲಬುರಗಿ:
‘ವಚನ ದರ್ಶನ’ ಪುಸ್ತಕ ಹಾಗೂ ‘ಶರಣರ ಶಕ್ತಿ’ ಚಲನಚಿತ್ರದ ಮೂಲಕ ಶರಣರ ತೇಜೋವಧೆ, ಚಾರಿತ್ರ್ಯ ಹರಣ ಮಾಡುವುದಕ್ಕೆ ಮನುವಾದಿಗಳು ಯತ್ನಿಸುತ್ತಿದ್ದಾರೆಂದು ಬೆಂಗಳೂರು, ಬಸವ ಗಂಗೋತ್ರಿಯ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಆರೋಪಿಸಿದ್ದಾರೆ.
ವಚನ ದರ್ಶನ ಪುಸ್ತಕದಲ್ಲಿ ಲೇಖಕರು, ಬಸವಾದಿ ಶರಣರು ಬರೆದ ವಚನಗಳು ವೇದ, ಉಪನಿಷತ್ತಿನ ಅನುವಾದ ಎಂಬಂತೆ ವಿವರಣೆ ನೀಡಿದ್ದಾರೆ, ಇದು ಖಂಡನೀಯವಾಗಿದೆ ಎಂದರು. ಲಿಂಗಾಯತ ಒಂದು ಸ್ವತಂತ್ರ ಧರ್ಮ. ಪರಿಪೂರ್ಣ ಧರ್ಮವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಬಸವ ಭಕ್ತರೆಲ್ಲರೂ ಜಾಗೃತರಾಗಿ ಹೋರಾಟ ಮಾಡಬೇಕು ಮತ್ತು ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವವರೆಗೆ ಹೋರಾಟ ನಡೆಸಬೇಕು ಎಂದು ಅವರು ಕರೆ ನೀಡಿದ್ದಾರೆ.
TAGGED:ವಚನ ದರ್ಶನ ವಿವಾದ