ವಚನ ಸಾಹಿತ್ಯ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಅಥಣಿ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಅಥಣಿ:

ಅರಿವು, ಆಚಾರ, ಅನುಭಾವಗಳನ್ನು ತಿಳಿಸುವ ವಚನಸಾಹಿತ್ಯವನ್ನು ನಾವು ಮುಂದಿನ ಜನಾಂಗಕ್ಕೆ ತಿಳಿಪಡಿಸಲು ಇಂತಹ ಬಸವ ಸಂಸ್ಕೃತಿ ಮೇಳವು ಸಹಕಾರಿಯಾಗಿದೆ ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.

ಅವರು ರವಿವಾರ ೪ರಂದು ಜರುಗಿದ ಮೋಟಗಿಮಠದ ಲಿಂ. ಚನ್ನಬಸವ ಶಿವಯೋಗಿಗಳ ೧೦೧ನೇ ಸ್ಮರಣೋತ್ಸವ ನಿಮಿತ್ಯ ಹಮ್ಮಿಕೊಂಡ ಪೂಜ್ಯರ ಭಾವಚಿತ್ರ ಮತ್ತು ಪಲ್ಲಕ್ಕಿ ಉತ್ಸವದ ನೇತೃತ್ವವಹಿಸಿ ಮಾತನಾಡಿದರು.

ಬಸವಾದಿ ಶರಣರ ವಚನ ಸಾಹಿತ್ಯವನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಅವರು, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವಚನ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ. ಪ್ರತಿ ಮನೆಯಲ್ಲೂ ವಚನ ಸಾಹಿತ್ಯವನ್ನು ತಿಳಿಪಡಿಸುವ ಉದ್ದೇಶವೇ ಬಸವ ಸಂಸ್ಕೃತಿ ಮೇಳ, ಗಡಿನಾಡ ನುಡಿ ಹಬ್ಬದ ಆಶಯವಾಗಿದೆ. ಅರಿವು, ಆಚಾರ, ಅನುಭಾವಗಳನ್ನು ತಿಳಿಪಡಿಸುವುದು ಭಕ್ತರಿಗೆ ಸಹಕಾರಿಯಾಗಿದೆ ಎಂದ ಅವರು, ಇಂದಿನ ಆಧುನಿಕತೆಯಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯ ವೈಭವ ಮರೆಯಾಗಬಾರದು. ಅದನ್ನು ಮುನ್ನಡೆಸಿ ಮುಂದಿನ ಪೀಳಿಗೆಗೆ ನಾವು ದಾರಿದೀಪವಾಗುವಂತೆ ಮುನ್ನಡೆಯಬೇಕೆಂದರು.

ಪಲ್ಲಕ್ಕಿ ಉತ್ಸವ :

ಶ್ರೀಮಠದ ಚನ್ನಬಸವ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ ನೆರವೇರಿತು. ಬಸವಾದಿ ಶಿವಶರಣರ ಹಾಗೂ ಪೂಜ್ಯರ ಭಾವಚಿತ್ರ – ಮಹಾಮೂರ್ತಿಯನ್ನಿಟ್ಟ ಪಲ್ಲಕ್ಕಿ ಉತ್ಸವವು ಸಕಲ ವಾದ್ಯವೃಂದಗಳೊಂದಿಗೆ ಬಸವ ಜಯಘೋಷಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಶ್ರೀಮಠ ತಲುಪಿತು.

ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹಲ್ಯಾಳದ ಗುರುಸಿದ್ದ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಮರುಳಸಿದ್ದ ಸ್ವಾಮೀಜಿ, ಪ್ರಭುಕುಮಾರ ಸ್ವಾಮೀಜಿ, ವೀರೇಶ್ವರ ದೇವರು ಸೇರಿದಂತೆ ಮುಕ್ತಾಯಿ ಮಹಿಳಾ ಬಳಗ, ಚನ್ನಬಸವ ಯುವಕ ಸಂಘ, ಅಥಣೀಶ ಯುವವೇದಿಕೆ ಸದಸ್ಯರು ಇತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *