‘ತುಳಿತಕ್ಕೊಳಗಾದ ಬಹುಜನರು ಸ್ವೀಕರಿಸಿದ ಲಿಂಗಾಯತ ಧರ್ಮ’

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ :

ಚನ್ನಬಸವಾಶ್ರಮದಲ್ಲಿ ಶರಣ ಮಡಿವಾಳ ಮಾಚಿದೇವ ಹಾಗೂ ಶರಣ ಡೋಹರ ಕಕ್ಕಯ್ಯನವರ ಜಯಂತಿ ಮತ್ತು ೩೨೦ನೇ ಮಾಸಿಕ ಶರಣ ಸಂಗಮ ಕಾರ್ಯಕ್ರಮವು ಪೂಜ್ಯ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಭಕ್ತಿಭಾವದಿಂದ ನಡೆಯಿತು.

ಸಾನಿಧ್ಯ ವಹಿಸಿದ ಪೂಜ್ಯರು ಮಾತನಾಡಿ, ವಿಶ್ವಗುರು ಬಸವಣ್ಣನವರು ೧೨ನೇ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಆ ಧರ್ಮದ ಮೂಲಾಧಾರ ದಯೆ ಆಗಿದ್ದು, “ದೇಹವೇ ದೇವಾಲಯ” ಹಾಗೂ “ಕಾಯಕವೇ ಕೈಲಾಸ” ಎಂಬ ಮಹತ್ವದ ತತ್ವಗಳನ್ನು ಸಮಾಜಕ್ಕೆ ನೀಡಿದರು.

ತುಳಿತಕ್ಕೊಳಗಾದ ಬಹುಜನರು ಈ ಧರ್ಮವನ್ನು ಸ್ವೀಕರಿಸಿ ಸಮಾನತೆ ಮತ್ತು ಸ್ವಾಭಿಮಾನವನ್ನು ಗಳಿಸಿದರು. ಆ ಶರಣರಲ್ಲಿ ಶರಣ ಮಡಿವಾಳ ಮಾಚಿದೇವ ಹಾಗೂ ಶರಣ ಡೋಹರ ಕಕ್ಕಯ್ಯ ಅಗ್ರಗಣ್ಯರಾಗಿದ್ದರು ಎಂದು ಹೇಳಿದರು.

ಡೋಹರ ಕಕ್ಕಯ್ಯನವರು ತೊಗಲು ಹದಮಾಡುವ ಕಾಯಕವನ್ನು ಮಾಡುತ್ತ, ಅನುಭವಮಂಟಪದಲ್ಲಿ ಭಾಗಿಯಾಗಿ ಅಮೂಲ್ಯ ವಚನಗಳನ್ನು ರಚಿಸಿದರು. ಮಡಿವಾಳ ಮಾಚಿದೇವರು ಜನರ ಬಟ್ಟೆ ತೊಳೆಯುವ ಕಾಯಕದ ಜೊತೆಗೆ ಸಮಾಜದಲ್ಲಿದ್ದ ಮೂಢನಂಬಿಕೆಗಳನ್ನು ದೂರಮಾಡಿ ಶರಣ ತತ್ವವನ್ನು ಜನರಲ್ಲಿ ಬಿತ್ತಿದರು ಎಂದು ವಿವರಿಸಿದರು.

ಸಮ್ಮುಖ ವಹಿಸಿದ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಮಾತನಾಡಿ, ೧೨ನೇ ಶತಮಾನದಲ್ಲಿ ಶರಣರು ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು.

ಶರಣ ಕಕ್ಕಯ್ಯನವರು ತಮ್ಮ ವಚನದಲ್ಲಿ “ಬಸವಣ್ಣನವರು ಮುಟ್ಟಿ ಪಾವನ ಮಾಡಿ ಎನ್ನ ಕರಸ್ಥಲದಲ್ಲಿ ಲಿಂಗವ ಕೊಟ್ಟು ಎನ್ನ ಶುದ್ಧ ಮಾಡಿದರು; ಬಸವಗುರುವಿನ ಕರುಣೆಯಿಂದ ಪ್ರಭುದೇವ ಶ್ರೀಪಾದವ ಕಂಡು ಧನ್ಯನಾದೆ” ಎಂದು ಸ್ಮರಿಸಿದ್ದಾರೆ ಎಂದು ತಿಳಿಸಿದರು.

ಮಡಿವಾಳ ಮಾಚಿದೇವರು ಶರಣ ಸಂಕುಲಕ್ಕೆ ಗಣಾಚಾರ ಕಲಿಸಿ, ಸತ್ಯಶುದ್ಧ ಕಾಯಕದ ನಾಯಕರಾಗಿ ವೀರ ಘಂಟಾನಾದ ಬಾರಿಸುತ್ತ ರಾಜಬೀದಿಯಲ್ಲಿ ಸ್ವಾಭಿಮಾನ ಮೆರೆದವರು ಎಂದು ಪ್ರಶಂಸಿಸಿದರು.

ಸಮಾರಂಭವನ್ನು ಸೋಮನಾಥಪ್ಪ ಅಷ್ಟೂರೆ ಉದ್ಘಾಟಿಸಿದರು. ವೈ.ಆರ್. ಇಂಗಳೆ ಅನುಭಾವ ನೀಡಿದರು. ದೋಸೆಪಲ್ಲಿ ಗ್ರಾಮ ಪಂಚಾಯತ ಸರಪಂಚರಾದ ದತ್ತು ಬಿರಾದಾರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವರಾಜ ಮರೆ, ಚಂದ್ರಶೇಖರ ಬಿರಾದಾರ, ಚಂದ್ರಕಾಂತ ಬಿರಾದಾರ, ವಿಲಾಸ ಬಕ್ಕಾ, ಅಶೋಕ ಬಾವುಗೆ,  ಬಲಭೀಮಯ್ಯ ಸ್ವಾಮಿ, ಬಾಬುರಾವ ಜಲ್ದೆ, ಸಿದ್ರಾಮಯ್ಯ ಸ್ವಾಮಿ, ಶಿವಾನಂದ ಗುಂದಗಿ, ಚಂದ್ರಕಾಂತ ಡೋಣಗಾಪುರೆ, ಪ್ರಭು ಡಿಗ್ಗೆ, ರೇಖಾ ಶಿವರಾಜ ಜ್ಯೋತೆಪ್ಪ, ಸುನೀತಾ ಮಹಾದೇವಪ್ಪ ಮಮ್ಮಾ, ಪುಷ್ಪಾವತಿ ಶಿವರಾಜ ಗಂದಗೆ, ರಾಜಕುಮಾರ ಬಿರಾದಾರ ತೊಗಲೂರು,  ಕಪಿಲ ಕಲ್ಯಾಣೆ, ಈಶ್ವರ ರುಮ್ಮಾ, ಸಂತೋಷ ಬಿ.ಜಿ. ಪಾಟೀಲ, ಪ್ರಶಾಂತ ಕಾಕನಾಳೆ, ಶಿಕುಮಾರ ಕಮಠಾಣೆ, ಬಸವರಾಜ ಮಣಕೋಜಿ,  ಶ್ರೀಮಂತ ಪಾಟೀಲ, ಕಲ್ಯಾಣರಾವ ಕುಂಬಾರಗೇರೆ, ದೀಲಿಪ ಮಡಿವಾಳ, ಸತೀಶ ಮಡಿವಾಳ, ಸಂತೋಷ ಮಡಿವಾಳ, ಶಿವು ಮಡಿವಾಳ, ಬಸವರಾಜ ಚಿಕ್ಕಲಚಂದಾ, ಮನೋಹರ ಕಾವಳೆ,  ಮಾರುತಿ ಗಾಯಕವಾಡ, ಧೋಂಡಿಬಾ ಕಾವಳೆ, ಶಿವಾಜಿ ಕಾವಳೆ,  ರಮೇಶ ಗಜಕೋಶ, ಲಕ್ಷ್ಮಣರಾವ ಖರಟಮೂಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ದೀಪಕ ಠಮಕೆ ಕಾರ್ಯಕ್ರಮವನ್ನು ನಿರೂಪಿಸಿದರು. ರಾಜು ಜುಬರೆ ಹಾಗೂ ಮಹಾಂತೇಶ ಕುಂಬಾರ ವಚನ ಗಾಯನ ನೆರವೇರಿಸಿದರು. ಶರಣ ಅಂಬಿಗರ ಚೌಡಯ್ಯನವರ ಕುರಿತ ಕಿರು ನಾಟಕವು ನೋಡುಗರ ಮನ ರಂಜಿಸಿತು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *