‘ಸಾವಿಗೆ ಸವಾಲು ಹಾಕಿದ್ದ ಬಸವಾದಿ ಶರಣರು’

ಜಮಖಂಡಿ

‘ಕಾಯಕಯೋಗಿಗಳಾಗಿದ್ದ 12ನೇ ಶತಮಾನದ ಬಸವಾದಿ ಶರಣರು ಯಾರ ಋಣದಲ್ಲಿಯೂ ಇರಲಿಲ್ಲ. ಹಾಗಾಗಿ ಅವರು ಸಾವಿಗೂ ಹೆದರಿರಲಿಲ್ಲ. ಅವರು ಸಾವಿಗೂ ಸವಾಲು ಹಾಕಿದ್ದರು’ ಎಂದು ಬಸವ ಕೇಂದ್ರದ ಅಧ್ಯಕ್ಷ, ವಕೀಲ ರವಿ ಯಡಹಳ್ಳಿ ಹೇಳಿದರು.

ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಅಂಗವಾಗಿ ಡಾಲರ್ಸ್ ಕಾಲೋನಿಯ ಉದ್ಯಾನವನದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ‘ಮರಣವೇ ಮಹಾನವಮಿ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಓಲೆಮಠದ ಆನಂದ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ ಮಾತನಾಡಿ, ಮೂಢನಂಬಿಕೆ, ಕಂದಾಚಾರಕ್ಕೆ ಅಂಟಿಕೊಳ್ಳಬಾರದು. ಸಮಾಜದಲ್ಲಿ ಪರಿವರ್ತನೆ ತರುವಂತಹ ಬದುಕು ನಮ್ಮದಾಗಬೇಕು ಎಂದರು.

ಪ್ರದೀಪ ಮೆಟಗುಡ್ಡ, ಸ್ನೇಹಲೋಕ ಉದ್ಯಾನವನದ ಅಧ್ಯಕ್ಷ ಸಚಿನ್ ಸೋನಾರ ಇದ್ದರು. ದೀಪಾ ಯಡಹಳ್ಳಿ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಪಿಡಿಒ ಅಶೋಕ ಜನಗೌಡ ಸ್ವಾಗತಿಸಿದರು. ರಾಜು ವಾರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಮೇಶ ದಾನಗೌಡ ನಿರೂಪಿಸಿದರು. ಪ್ರೊ.ರಾಜಶೇಖರ ಹೊಸಟ್ಟಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *