ಲಿಂಗಾಯತ ಧರ್ಮದ ಮೂಲ: ಶರಣರ ಪ್ರೇರಣೆಯಾದ ತಮಿಳು ಪುರಾತನರು

ಲಿಂಗಾಯತ ಧರ್ಮದ ಮೂಲ

ಶರಣರ ಪ್ರೇರಣೆಯಾದ ತಮಿಳು ಪುರಾತನರು

ಶರಣರ ಮೇಲೆ ನಾಥರ ಪ್ರಭಾವ

ನಾಥರಿಗಿಂತ ಭಿನ್ನವಾಗಿ ಬೆಳೆದ ಶರಣರು

ವೇದ ಆಗಮಗಳು ಶರಣ ತತ್ವದ ಮೂಲವೆಂಬ ವಾದವಿದೆ. ಇದಕ್ಕೆ ಯಾವುದೇ ಆಧಾರವಿಲ್ಲ. ಕೆಲವು ಆಗಮಗಳ ಕೊನೆಯಲ್ಲಿ ಶರಣ ತತ್ವ ಜೋಡಿಸಿ ಒಂದು ಕಲ್ಪಿತ ಇತಿಹಾಸ ಸೃಷ್ಟಿಸುವ ಪ್ರಯತ್ನವಷ್ಟೇ.

ವಚನಗಳು ಯಾವುದೇ ಸಂಸ್ಕೃತ ಸಾಹಿತ್ಯದಿಂದ ಹುಟ್ಟಲಿಲ್ಲ. ಶರಣರಿಗೆ ಸ್ವಲ್ಪ ಮಟ್ಟಿಗೆ ಪ್ರೇರಣೆಯಾಗಿದ್ದು ತಮಿಳಿನ ಪುರಾತನರು ಮತ್ತು ಜಾತ್ಯತೀತವಾಗಿದ್ದ ಪ್ರಾಚೀನ ನಾಥ ಪಂಥ.

ತಮಿಳುನಾಡಿನ ೬೩ ಪುರಾತನರು ೧೦ನೇ ಶತಮಾನಕ್ಕಿಂತ ಮುಂಚೆ ಬದುಕ್ಕಿದ್ದವರು. ತಮಿಳು ಶೈವ ಪರಂಪರೆಯನ್ನು ಬೆಳೆಸಿದ ಅನೇಕ ಪುರಾತನರು ಹಿಂದುಳಿದ ಮತ್ತು ದಲಿತ ಜಾತಿಗಳಿಂದ ಬಂದಿದ್ದರು.

ಪುರಾತನರು ರಚಿಸಿದ ತಮಿಳು ಭಕ್ತಿ ಸಾಹಿತ್ಯವೇ ‘ತೆವಾರಂ’. ತಮಿಳು ವೈಷ್ಣವ ಆಚಾರ್ಯರು ಇವರನ್ನು ಬದಿಗಿರಿಸಿ ಸಂಸ್ಕೃತ ಭಾಷೆಯ ಆಗಮ ನಿಷ್ಠ ಸಿದ್ದಾಂತ ಸಾಹಿತ್ಯ ಬೆಳೆಸಿದರು.

ಬಸವಣ್ಣನವರೂ ಸೇರಿದಂತೆ ಅನೇಕ ಶರಣರು ತಮ್ಮ ವಚನಗಳಲ್ಲಿ ಪುರಾತನರನ್ನು ನೆನೆಯುತ್ತಾರೆ. ಆಚಾರ್ಯರ ಆಗಮ ನಿಷ್ಠ ಸಂಸ್ಕೃತ ಸಾಹಿತ್ಯದ ಬದಲು ಶರಣರು ಪುರಾತನರ ದೇಶೀ ಸಾಹಿತ್ಯ ಮನ್ನಿಸಿದರು.

ಶರಣರ ಮೇಲಾದ ಪುರಾತನರ ಪ್ರಭಾವ ಅನೇಕ ಶಾಸನಗಳಲ್ಲಿಯೂ ಕಾಣುತ್ತವೆ. ಅರ್ಜುನವಾಡ ಶಾಸನದಲ್ಲಿ ಬಸವಣ್ಣನವರ ವಂಶಸ್ಥ ಹಾಲ ಬಸವಿದೇವ ಭಕ್ತಿಯಿಂದ ಪುರಾತನರನ್ನು ಸ್ಮರಿಸುತ್ತಾನೆ.

(‘ತಮಿಳು ಪುರಾತನ ಶೈವ ಪಂಥ – ನಾಥ ಪಂಥ-ಶರಣ ಪಂಥ’
ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)

Share This Article
Leave a comment

Leave a Reply

Your email address will not be published. Required fields are marked *