ವಿಶ್ವ ಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿರುವ ಶಾಸಕ ಬಸವನ ಗೌಡ ಯತ್ನಾಳ್ ವಿರುದ್ಧ ಎದ್ದಿರುವ ಆಕ್ರೋಶಕ್ಕೆ ಬಿಜೆಪಿ ಶಾಸಕ ಶರಣು ಸಲಗರ ಮತ್ತು ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ದನಿಗೂಡಿಸಿದ್ದಾರೆ.
ಬಸವಕಲ್ಯಾಣ/ಬೆಂಗಳೂರು
ಶರಣು ಸಲಗರ
ಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಮಾತಾಡಿರುವ ಬಸವರಾಜ ಪಾಟೀಲ ಯತ್ನಾಳ ಅವರು ಕ್ಷಮೆ ಕೇಳದಿದ್ದರೆ ಶರಣರ ಕಾರ್ಯಕ್ಷೇತ್ರದ ಶಾಸಕನಾದ ನಾನು ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.
ಈ ಸಂಬಂಧ ಅವರು ಪ್ರಕಟಣೆ ಹೊರಡಿಸಿದ್ದು, ಯತ್ನಾಳರ ಮಾತುಗಳಿಂದ ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಸಮಾಜದ ಬಸವಾಭಿಮಾನಿಗಳಿಗೆ ನೋವಾಗಿದೆ ಎಂದಿದ್ದಾರೆ.
ಮುಂದಿನ ಸಲ ಯತ್ನಾಳ್ ಸೋಲದಿದ್ದರೆ, ಪೀಠ ತ್ಯಾಗ ಮಾಡುವೆ ಎಂದು ರವಿವಾರ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಡಾ. ಶಿವಾನಂದ ಶ್ರೀ ಹೇಳಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶರಣು ಸಲಗರ ಸಹ ಪ್ರಕಟಣೆ ನೀಡಿದ್ದಾರೆ.
ವಿಜಯಾನಂದ ಕಾಶಪ್ಪನವರ್
ಯತ್ನಾಳ್ ವಿಶ್ವಗುರು ಬಸವಣ್ಣ ಬಗ್ಗೆ ಹೇಡಿ ಎಂಬ ರೀತಿ ಮಾತಾಡಿದ್ದನ್ನು ಖಂಡಿಸುತ್ತೇನೆ. ಇಂತಹ ಹೇಳಿಕೆ ನಿಲ್ಲಿಸದಿದ್ದರೆ ಬಸವ ಅನುಯಾಯಿಗಳು ಹೋರಾಟ ಮಾಡಲಿದ್ದಾರೆ ಎಂದು ಕರ್ನಾಟಕ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಎಚ್ಚರಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯತ್ನಾಳ್ ಅವರದ್ದು ವಿನಾಶಕಾಲೇ ವಿಪರೀತ ಬುದ್ಧಿ. ಅವರು ವಿನಾಶ ಆಗಿಯೇ ಆಗುತ್ತಾರೆ. ಅವರು ಪದೇ ಪದೇ ಮಹಾಪುರುಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಅವಮಾನ ಮಾಡುವ ರೀತಿ ಹೇಳಿಕೆ ನೀಡುವುದು ಖಂಡನೀಯ ಎಂದರು.
ಯತ್ನಾಳ್ ಲಿಂಗಾಯತ ಪಂಚಮಸಾಲಿ ಧರ್ಮದಲ್ಲಿ ಜನಿಸಿ ಈ ರೀತಿ ಮಾತನಾಡುವುದು ಸರಿಯಲ್ಲ. ಯತ್ನಾಳ್ ಕ್ಷಮೆ ಕೇಳುವುದಕ್ಕೂ ಅರ್ಹರಲ್ಲ. ಅವರು ಎಲ್ಲರ ಬಗ್ಗೆಯೂ ಮಾತನಾಡ್ತಾರೆ. ಹೇಳಿಕೆಗಳನ್ನು ನಿಲ್ಲಿಸದೇ ಇದ್ದರೆ ಬಸವ ಅನುಯಾಯಿಗಳು ಹೋರಾಟ ಮಾಡುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ರಾಜಕೀಯ ಬಹಿಷ್ಕಾರಕ್ಕೆ ಕರೆ ಕೊಡಿ
ಜೈ ಬಸವೇಶ್ವರ.
ಕೇಸರಿ ನಶೆಯ ಅಮಲಿನಲ್ಲಿ ತಂದೆಯನ್ನೆ ಬಲಿ ಕೊಟ್ಟು ಹಾದರಕ್ಕೆ ಹುಟ್ಟಿದವರ ತರ ಮಾತ್ನಾದ್ತಾ ತಮ್ನ ಬೇಳೆ ಬೇಯಿಸಿಕೊಳ್ಲುತ್ತಾ ಸಾಗಿರುವ ರಾಜಕಾರಣಿಗಳಲ್ಲಿ
ಧರ್ಮದ ಅಭಿಮಾನ ದೂರದ ಮಾತು .ಇವರು ಇಂತಹ ಮಾತುಗಳನ್ನು ಆಡ್ತಾ ಎಲ್ಲರಿಗೂ ಕೇಸರಿ ಸುತ್ತುವ ಹಂಬಲ.
ಯೋಗ್ಯ ಮಾತನಾಡಿದ್ದಾರೆ ಕಾಶಪ್ಪನವರು
ಮನೂವಾದಿಗಳನ್ನು ಕುಷಿ ಪಡಿಸಲು ತನ್ನಸ್ವಧಮ೯ವನ್ನೇ ಮರೆತು ಧಮ೯ಗುರು ಬಸವಣ್ಣನವರನ್ನೇ ಹಿಯಾಳಿಸಿ ಮಾತನಾಡಿ ರೋಡು ,ಕಷಮಿಸಲಾಗದ ತಪ್ಪು ,ಹರಕೆಯ ಕರಿಯನ್ನು ರಾಜಕೀಯವಾಗಿ ಬಲಿ ತೆಗೆದುಕೊಳ್ಳಲೇ ಬೆಕು.