ಶಿವಮೊಗ್ಗದಲ್ಲಿ ಸಾವಿರಕ್ಕೂ ಹೆಚ್ಚು ಗಾಯಕರಿಂದ ಸಮೂಹ ವಚನ ಗಾಯನ

ಬಸವ ಮೀಡಿಯಾ
ಬಸವ ಮೀಡಿಯಾ

ಶಿವಮೊಗ್ಗ

ಇಲ್ಲಿನ ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳವರು ಬಹು ವರ್ಷಗಳ ಹಿಂದೆ ಕಂಡ ಕನಸು: ಸಾವಿರದ ವಚನ.

ಸ್ವಾಮೀಜಿಯವರ ಕನಸಿಗೆ ಕೈಜೋಡಿಸಿದ್ದ ಹಲವರ ಕನಸು ಕನಸಾಗಿಯೇ ಉಳಿದಿತ್ತು. ಗಾನಗಾರುಡಿಗ ಮೇರು ಪ್ರತಿಭೆ ಸಿ. ಅಶ್ವಥ್‌ ಸಂಯೋಜಿಸಿದ ವಚನಗಳನ್ನು ಒಂದೇ ವೇದಿಕೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಹಾಡುವ ಈ ಕಾರ್ಯಕ್ರಮಕ್ಕೆ ಈಗ ಕಾಲ ಕೂಡಿ ಬಂದಿದೆ.

‘ಬಸವೋತ್ಸವ-೨೦೨೫’ರ ಅಂಗವಾಗಿ ನಡೆಯುವ ಈ ಕಾರ್ಯಕ್ರಮಕ್ಕೆ ಶಿವಮೊಗ್ಗದ ಹಿರಿಯ ಸಂಗೀತ ವಿದ್ವಾಂಸರು, ಸಂಗೀತಗಾರರು, ಗಾಯಕರು ಮಾರ್ಗದರ್ಶಕರಾಗಿದ್ದು, ಕಾರ್ಯಕ್ರಮದ ಸಹಭಾಗಿಗಳಾಗುತ್ತಿದ್ದಾರೆ.

ಈ ಕಾರ್ಯಕ್ರಮ ಮೇ 09 ಕ್ಕೆ ಶಿವಮೊಗ್ಗದಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಆಯ್ಕೆಗೊಂಡ ಗಾಯಕರನ್ನು ಸೇರಿಸಿ ಸಾಕಷ್ಟೂ ಅಭ್ಯಾಸವೂ ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಈ ಕೆಳಗಿನ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಿ.

https://saavirada-vachana-reg.web.app

ಆಯ್ಕೆಯಾದವರು ಅಭ್ಯಾಸಕ್ಕೆ ಬರುವುದು ಕಡ್ಡಾಯ. .

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
2 Comments
  • ತಮ್ಮ ಶರಣರ ಸಾವಿರ ವಚನದ ಗಾಯನ ಅಭಿಯಾನಕ್ಕೆ ಮಂಗಳವಾಗಲು ಹಾರೈಸುತ್ತಾ, ತಮ್ಮೆಲ್ಲರಿಗೂ ಶರಣು ಶರಣಾರ್ಥಿ.

  • ಯಜಮಾನರ ಮೊಮ್ಮಗಳು ನಟಿ ಮತ್ತು ಗಾಯಕಿ ಬಿ ಜಯಶ್ರೀ ರವರು ಈ ಸಾಮೂಹಿಕ ಸಾವಿರವಚನಗಳ ಗಾನಸಮೂಹದಲ್ಲಿ ಭಾಗಿಯಾಗಿರುವುದು ನಮಗೆ ಹೆಮ್ಮೆಯ ಜತೆಗೆ ಸಂತೋಷವನ್ನುಂಟುಮಾಡುತ್ತಿದೆ. ವಂದನೆಗಳೊಂದಿಗೆ.

Leave a Reply

Your email address will not be published. Required fields are marked *