ಶಿವಮೊಗ್ಗ
ರಾಷ್ಟ್ರೀಯ ಬಸವದಳ ಟ್ರಸ್ಟ್ ಆಶ್ರಯದಲ್ಲಿ ನಗರದ ಗಾಂಧಿ ಉದ್ಯಾನವನದ ಬಳಿ ಇರುವ ಗುರು ಬಸವಣ್ಣನವರ ಪುತ್ಥಳಿ ಆವರಣದಲ್ಲಿ ಬಸವಣ್ಣನವರ 830ನೇ ಲಿಂಗೈಕ್ಯ ಸಂಸ್ಮರಣೆಯ ಬಸವ ಪಂಚಮಿ ಕಾರ್ಯಕ್ರಮ ನಡೆಯಿತು.
ರಾಷ್ಟ್ರೀಯ ಬಸವದಳ ಟ್ರಸ್ಟ್ ಗೌರವಾಧ್ಯಕ್ಷ, ಕೈಗಾರಿಕೋದ್ಯಮಿ ಹಾಲಪ್ಪನ ಮಾತನಾಡಿ, ಗುರುಬಸವಣ್ಣನವರು ವಿಶ್ವಕ್ಕೆ ಆದರ್ಶ ಪುರುಷರಾಗಿದ್ದಾರೆ. ಅವರ ಸಂದೇಶ ಮಾರ್ಗದಲ್ಲಿ ಸಾಗುವ ಪ್ರಾಮಾಣಿಕ ಪ್ರಯತ್ನವೇ ನಾವು ಅವರಿಗೆ ಸಲ್ಲಿಸುವ ಅರ್ಥಪೂರ್ಣ ನಮನಗಳು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೂಡಲಸಂಗಮ ಬಸವಧರ್ಮ ಪೀಠದ ಬಸವತತ್ತ್ವ ಪ್ರಚಾರಕಿ ಶಾಂತ ಕುಮಾರಿ ಜಗತ್ತಿನ ಶ್ರೇಷ್ಠ ದಾರ್ಶನಿಕ ಗುರು ಬಸವಣ್ಣನವರು ಇಷ್ಟಲಿಂಗ ಯೋಗದ ಮೂಲಕ ಮನಸ್ಸಿನ ವಿಕಾಸವನ್ನು ಕಾಣುವುದರ ಮೂಲಕ ಪರಮಾತ್ಮ ತತ್ತ್ವದೊಳಗೆ ಸಾಮರಸ್ಯದ ಅನುಭೂತಿ ಕಾಣಬಹುದು ಎನ್ನುವ ಯೋಗ ಸಂದೇಶವನ್ನು ನೀಡಿದವರು ಎಂದು
ತಿಳಿಸಿದರು.
ರತ್ನಮ್ಮ ವಿರೂಪಾಕ್ಷ ಪ್ರಾರ್ಥನೆ ನಡೆಸಿಕೊಟ್ಟರು. ಸಾಮೂಹಿಕ ಗುರು ಬಸವ ಮಂತ್ರ ಪಠಣ ಮಾಡಲಾಯಿತು. ಯೋಗೀಶ್ ನಿರ್ವಿಕಲ್ಪ ಪ್ರಾಸ್ತಾವಿಕ ಮಾತನಾಡಿದರು. ಶಿವರುದ್ರಪ್ಪ, ಶಿವಕುಮಾರ್, ಮಲ್ಲನಗೌಡ, ನಾಗರತ್ನಮ್ಮ, ಮಂಜುಳಮ್ಮ, ಲತಾ, ಅನುಸೂಯಮ್ಮ, ಜ್ಯೋತಿ ಶಿವರಾಜ್ ಮುಂತಾದವರಿದ್ದರು.