ಶೂನ್ಯದಿಂದ ಬಂದದ್ದು ವಿಶ್ವ, ಇದು ವೈಜ್ಞಾನಿಕ ಸತ್ಯ: ಪ್ರೊ.ಜಿ.ಬಿ.ಹಳ್ಳಾಳ

ಹುಬ್ಬಳ್ಳಿ :
ಶ್ರೀ ಗುರು ಬಸವ ಮಂಟಪದಲ್ಲಿ ಬಸವ ಕೇಂದ್ರದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಪ್ರೊ.ಜಿ.ಬಿ. ಹಳ್ಯಾಳ
ಮಾತನಾಡುತ್ತ ಶೂನ್ಯದಿಂದ ಬಂದದ್ದು ವಿಶ್ವ. ಇದು ವೈಜ್ಞಾನಿಕ ಸತ್ಯ ಹಾಗೆ ಶೂನ್ಯ, ಬಯಲು, ಲಿಂಗ ನಮ್ಮ ದೇವರು. ಅದಕ್ಕೆ ಆಕಾರ ಇಲ್ಲ, ಗಂಡೂ ಅಲ್ಲ ಹೆಣ್ಣೂ ಅಲ್ಲ. ದೇವರು ಜ್ಯೋತಿ ಸ್ವರೂಪ. ನಮ್ಮ ದೇವರಿಗೆ ಹುಟ್ಟು ಸಾವಿಲ್ಲ, ತಂದೆ ತಾಯಿ ಇಲ್ಲ. ಎಂದು ಹೇಳಿದರು.

ನಮಗೆ ಹುಟ್ಟು ಸಾವು ಇದೆ. ದೇವರಿಗೆ ಇಲ್ಲ. ಹುಟ್ಟು ಸಾವು ಇದ್ದದ್ದು ದೇವರಲ್ಲ,
ಈ ಮಹಾ ವಿಶ್ವಕ್ಕೆ ಆದಿ, ಮಧ್ಯ, ಆಧಾರವಿಲ್ಲ ಅಂತ್ಯವಿಲ್ಲ. ದೇವರಿಗೂ ಆದಿ ಅಂತ್ಯವಿಲ್ಲ.
ದೇವರ ಇರುವಿಕೆಯು ನಮ್ಮ ಬುದ್ಧಿಗೆ ನಿಲುಕದ್ದು ಅದಕ್ಕೆ ವೇದ, ಶಾಸ್ತ್ರಗಳ ಪಂಡಿತರು ದೇವರು ಹೇಗಿದ್ದಾನೆಂದು ಹೇಳಲಿಲ್ಲ ಎಂದರು.

ವಚನ ಪ್ರಾರ್ಥನೆಯು ನೀಲಾಂಬಿಕಾ ಬಳಗದ ಶರಣೆಯರಿಂದ ನಡೆಯಿತು.
ಅಧ್ಯಕ್ಷತೆಯನ್ನು ಸುಲೋಚನಾತಾಯಿ ಭೂಸನೂರ ವಹಿಸಿದ್ದರು.
ಅನ್ನಪೂರ್ಣತಾಯಿ ಪಾಟೀಲ,ಬಸವರಾಜ ಲಿಂಗಶೆಟ್ಟರ್, ಸುಧೀರ ಸಾದರಹಳ್ಳಿ ಉಪಸ್ಥಿತರಿದ್ದರು.
ಅನಿತಾ ಕುಬಸದ ಅವರು ಶರಣು ಸಮರ್ಪಣೆ ಮಾಡಿದರು.
ನಿರೂಪಣೆಯನ್ನು ನಿರ್ಮಲಾತಾಯಿ ಬುರ್ಲಬಡ್ಡಿ ನಿರ್ವಹಿಸಿದರು.

ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Share This Article
1 Comment
  • ಮನುವ್ಯಾದಿಗಳು ಶರಣರು ಮತ್ತು ವಚನ ಸಾಹಿತ್ಯಕ್ಕೆ ತಮ್ಮ ಕರಿನೆರಳು ಬೀಳಿಸಿದ್ದಾರೆ,, ಮುಂದಿನ ಪೀಳಿಗೆಗೆ ವಚನಸಾಹಿತ್ಯವನ್ನು ರಕ್ಷಣೆ ಮಾಡಬೇಕಾದ ಸಂಕಷ್ಟ ಸಮಯ ಬಂದಿದೆ,, ಗ್ರಾಮೀಣ ಮಟ್ಟದಲ್ಲಿ ಈ ಅರಿವು ಅಭಿಮಾನದ ತುರ್ತು ಅಗತ್ಯ ಇದೆ,, ಸಂದರ್ಭ ಬಂದರೆ ಕಲ್ಯಾಣ ಕ್ರಾಂತಿಯಂಥ ಹೋರಾಟಕ್ಕೂ ಸಿದ್ಧ ಆಗಬೇಕಾದ ‌ ಸನ್ನಿವೇಶ ಬರಬಹುದು,, ಬಿಜ್ಜಳನ ವಂಶಸ್ಥರನ್ನು ಹಿಮ್ಮೆಟ್ಟಿಸಲು ಸಿದ್ಧರಾಗಿ

Leave a Reply

Your email address will not be published. Required fields are marked *