(ಸೆಪ್ಟೆಂಬರ್ 22ರಂದು ಕರ್ನಾಟಕ ಮತ್ತು ತೆಲಂಗಾಣದ ರಾಷ್ಟ್ರೀಯ ಬಸವ ಧಳದ ಸದಸ್ಯರು ಶ್ರೀಶೈಲದಲ್ಲಿ ವಿಶ್ವಗುರು ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ ನಡೆಸಿದರು. ರಾಷ್ಟ್ರೀಯ ಬಸವ ಧಳದ ಬಳ್ಳಾರಿ ಘಟಕದ ರವಿ ಶಂಕರ್ ಕೆ. ವಿ. ತಮ್ಮ ಅನುಭವ ಹಂಚಿಕೊಂಡಿದ್ದಾರೆ.)
ಶ್ರೀಶೈಲ ಬಹಳ ಮುಖ್ಯವಾದ ಶರಣ ಕ್ಷೇತ್ರ. ಅಲ್ಲಮ ಪ್ರಭುಗಳು, ಅಕ್ಕ ಮಹಾದೇವಿಯವರೆಲ್ಲ ಲಿಂಗೈಕ್ಯವಾದ ಸ್ಥಳ ಇದು. ಸಿದ್ದರಾಮರಿಗೆ ಸಾಕ್ಷಾತ್ಕಾರವಾಗಿದ್ದೂ ಇಲ್ಲಿಯೇ.
ಈ ಭಾಗದಲ್ಲಿಯೇ 13ನೇ ಶತಮಾನದಲ್ಲಿ ಬಸವ ಪುರಾಣ ರಚನೆಯಾಗಿದ್ದು. ಮಲೆಯ ಮಹದೇಶ್ವರರು ಇಲ್ಲಿಂದಲೇ ಬಂದಿದ್ದು. ಪೂಜ್ಯ ಮತ್ತೆ ಮಹಾದೇವಿಯವರ ಕೃತಿ ತರಂಗಿಣಿಗೆ ಪ್ರೇರಣೆಯೂ ಶ್ರೀಶೈಲವೇ.

ಮಾತಾಜಿಯವರು ಶ್ರೀಶೈಲದಲ್ಲಿ ಒಂದು ಪೀಠ ಸ್ಥಾಪಿಸಲು ಪ್ರಯತ್ನಿಸಿದ್ದರು. ಅವರ ಪ್ರೇರಣೆಯಿಂದ 2018ರಿಂದ ಶ್ರೀಶೈಲದಲ್ಲಿ ವಿಶ್ವಗುರು ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಮಧ್ಯ ಎರಡು ವರ್ಷ ಕೋವಿಡ್ ಸಮಯದಲ್ಲಿ ನಿಂತಿತ್ತು ಅಷ್ಟೇ.
ಈ ವರ್ಷದ ಕಾರ್ಯಕ್ರಮಕ್ಕೆ ಸುಮಾರು 500 ಜನ ಭದ್ರಾವತಿ, ಶಿವಮೊಗ್ಗ, ಬೆಂಗಳೂರು ಬೆಂಗಳೂರು, ಅನಂತಪುರ, ಕರ್ನೂಲ್ ಮತ್ತೀತರ ಜಿಲ್ಲೆಗಳಿಂದ ಬಂದಿದ್ದರು. ಬೆಳಗ್ಗೆ ಇಷ್ಟಲಿಂಗ ಪೂಜೆ, ಗುರುಬಸವಾರ್ಚನೆ ಮಾಡಿ, ನಂತರ ವೇದಿಕೆ ಕಾರ್ಯಕ್ರಮ ನಡೆಸಿದೆವು. ಒಂದು ಸಣ್ಣ ಪಥ ಸಂಚಲನ ಕೂಡ ಮಾಡಿದೆವು.

ಪೂಜ್ಯ ಗಂಗಾ ಮಾತಾಜಿ, ಲಿಂಗಾಯತ ಮಠದ ಪೂಜ್ಯ ಪ್ರಭುದೇವರು, ಆಂಧ್ರದ ಪೂಜ್ಯ ಪಂಚಮ ಲಿಂಗೇಶ್ವರ ಸ್ವಾಮೀಜಿ, ಉಳವಿಯ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ನಮ್ಮಲ್ಲಿ ಕೆಲವರು 18 ಕಿಮೀ ದೂರ ದೋಣಿಯಲ್ಲಿ ಹೋಗಿ ಅಕ್ಕನ ಗವಿಗೂ ನೋಡಿ ಬಂದರು. ಕದಳಿಗೆ ಹೋಗುವಾಗ ದಾರಿಯಲ್ಲಿ ಅಕ್ಕನವರು ಇಷ್ಟಲಿಂಗ ಅನುಷ್ಠಾನ ಮಡಿದ ಕ್ಷೇತ್ರವಿದು.

ಮೊದಲು ಕದಳಿಗೂ ಹೋಗುತ್ತಾ ಇದ್ದೆವು. ಈಗ ಅಲ್ಲಿಗೆ ಬೇರೆ ಬೇರೆ ಕಾರಣಗಳಿಂದ ಬಿಡ್ತಾ ಇಲ್ಲ.
ತೆಲಂಗಾಣ ರಾಷ್ಟ್ರೀಯ ಬಸವ ದಳದ ಮುಖ್ಯಸ್ಥ ಶಂಕರ ಪಾಟೀಲ್ ಈ ಕಾರ್ಯಕ್ರಮಕ್ಕೆ ಸಕ್ರಿಯವಾಗಿ ದುಡಿಯುತ್ತಿದ್ದಾರೆ.



ಒಳ್ಳೆಯ ಕಾರ್ಯಕ್ರಮ
Good programme.