ತುಮಕೂರು
ಸಿದ್ದಗಂಗಾ ಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಬೃಹತ್ ಎಲ್ಇಡಿ ಪರದೆ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ 112ನೇ ಮನ್ ಕಿಬಾತ್ ಕಾರ್ಯಕ್ರಮವನ್ನು ಮಠದ ಸಾವಿರಾರು ವಿದ್ಯಾರ್ಥಿಗಳು ಭಾನುವಾರ ವೀಕ್ಷಿಸಿದರು.
ಮಕ್ಕಳ ಜೊತೆ ಕಾರ್ಯಕ್ರಮ ವೀಕ್ಷಿಸಿ ಮಠದ ಕಿರಿಯ ಸ್ವಾಮಿಗಳಾದ ಶಿವಸಿದ್ದೇಶ್ವರಸ್ವಾಮೀಜಿ ದೇಶದ ಸಂಸ್ಕೃತಿ ,ಪರಂಪರೆ ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಮಾತನಾಡಿದರು ಎಂದು ಹೇಳಿದರು.
ದೇಶದ ಬೆಳವಣಿಗೆ, ಅಭಿವೃದ್ಧಿ ಮಾನವ ಸಂಪನ್ಮೂಲದಿಂದ ಸಾಧ್ಯ, ಹಾಗಾಗಿ ಮಕ್ಕಳು ಶಿಕ್ಷಣ ಪಡೆದು ಮುಂದುವರೆಯಬೇಕು. ಪರಂಪರೆ ಉಳಿಸಬೇಕು, ಎಂದು ಹೇಳಿದರು.
ಸಂಭ್ರಮದಿಂದ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯನ್ನು ಹಬ್ಬದಂತೆ ಮನೆಯ ಮೇಲೆ ತ್ರಿವರ್ಣಧ್ವಜ ಹಾರಿಸಿ ಆಚರಿಸಬೇಕೆಂಬ ಮಹತ್ವದ ಮಾತುಗಳನ್ನು ಪ್ರಧಾನಮಂತ್ರಿ ಆಡಿದರೆಂದು ಸ್ವಾಮಿಗಳು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದಗಂಗಾ ಮಠದಲ್ಲಿ ಹಾಜರಿದ್ದು ಶಾಸಕ ಜೀ.ವಿ.ಗಣೇಶ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ ಹೆಬ್ಬಾರ ಕೂಡ ಮನ್ ಕಿ ಬಾತ್ ವೀಕ್ಷಿಸಿದರು.