ನಂಜನಗೂಡು:
ತಾಲ್ಲೂಕಿನ ದೇವಿರಮ್ಮನಹಳ್ಳಿಯ ಪಾಳ್ಯ ಗ್ರಾಮದ ವೃತ್ತಕ್ಕೆ ಕಿತ್ತೂರು ರಾಣಿ ಚೆನ್ನಮ್ಮನ ಸಂಸ್ಥಾನದ ವೀರಯೋಧ, ಶಬ್ಧವೇದಿ ವಿದ್ಯೆಯ ಪ್ರವೀಣ ಬೆಳವಡಿ ಯಲ್ಲಣ್ಣ ಅವರ ಹೆಸರಿನ ವೃತ್ತದ ನಾಮಕರಣ ಫಲಕವನ್ನು ನಂಜನಗೂಡು ಕ್ಷೇತ್ರದ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ಅವರು ಈಚೆಗೆ ಉದ್ಘಾಟನೆ ಮಾಡಿದರು.
ಸ್ವಾತ್ರಂತ್ರ್ಯ ಹೋರಾಟಗಾರ ಯಲ್ಲಣ್ಣನವರ ವೃತ್ತ ಉದ್ಘಾಟನೆ ಮಾಡಿರುವುದು ಬಹಳ ಸಂತೋಷವೆಂದು ಕಳಲೆ ಕೇಶವಮೂರ್ತಿ ಮಾತನಾಡಿದರು.

ವೃತ್ತ ನಾಮಕರಣಕ್ಕೆ ಕಾರಣ
ಬೆಳವಡಿ ಯಲ್ಲಣ್ಣನವರು ಸಂಗೊಳ್ಳಿ ರಾಯಣ್ಣನಂತೆ ಮಹಾನ್ ಯೋಧನಾಗಿದ್ದವರು. ಕಿತ್ತೂರು ಸಂಸ್ಥಾನದಲ್ಲಿದ್ದವರಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವಿಷಯ ತಿಳಿದ ಶರಣರ ಸಂಘಗಳ ಒಕ್ಕೂಟದ ಮಾರ್ಗದರ್ಶಕರು ಬಸವಯೋಗೇಶ ಅವರು ದೇವಿರಮ್ಮನಹಳ್ಳಿ ಪಾಳ್ಯ ಗ್ರಾಮದ ಯುವ ಮಿತ್ರರು, ಮುಖಂಡರು, ಪಂಚಾಯಿತಿಯ ಸದಸ್ಯರು, ಭೋವಿ ಸಮುದಾಯದ ಸಂಘಟನೆಯ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಯಲ್ಲಣ್ಣನವರ ಸಾಹಸ ಯಶೋಗಾದೆಯನ್ನ ಅವರ ಮುಂದಿಟ್ಟ ಕ್ಷಣವೇ ಎಲ್ಲರೂ ಸಂತೋಷದಿಂದ ಒಪ್ಪಿ ವೃತ್ತಕ್ಕೆ ಹೆಸರನ್ನು ಇಡಲಾಗಿದೆ.
ರಾಷ್ಟ್ರದ ಇತಿಹಾಸದಲ್ಲೇ ಮೊದಲು
ಸ್ವಾತಂತ್ರ್ಯ ಹೋರಾಟಗಾರ ಬೆಳವಡಿ ಯಲ್ಲಣ್ಣನವರ ಹೆಸರನ್ನ ಒಂದು ವೃತ್ತಕ್ಕೆ ನಾಮಕರಣ ಮಾಡಿ ಗೌರವಿಸಿರುವುದು ರಾಷ್ಟ್ರದಲ್ಲಿಯೇ ಮೊದಲು ಎಂದು ಮಾರ್ಗದರ್ಶಕರಾದ ಬಸವಯೋಗೇಶ ಅವರು ಹೆಮ್ಮೆಯಿಂದ ತಿಳಿಸಿದರು.
ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಪ್ರಯುಕ್ತ ನಾಮಕರಣ ಮಾಡುವ ಮುಖಾಂತರ ಶರಣ ಗೌರವ ಸಮರ್ಪಣೆ ಮಾಡಲಾಯಿತು. ಕಾರ್ಯಕ್ರಮಗಳ ನಂತರ ಊರಿನ ಹಲವು ಮುಖಂಡರು ಮಾತನಾಡಿ ಸಂಭ್ರಮ ಹಂಚಿಕೊಂಡರು.

ವಿಶೇಷವೆಂದರೆ 2024 ಸಿದ್ದರಾಮೇಶ್ವರರ ಜಯಂತಿ ಪ್ರಯುಕ್ತ ಬಸವ ಯೋಗೇಶ್ ಅವರ ಮಾರ್ಗದರ್ಶನದಲ್ಲಿ ಗುಂಡ್ಲುಪೇಟೆ-ಊಟಿ ರಸ್ತೆಯಿಂದ ತಮ್ಮ ಗ್ರಾಮ ಪಾಳ್ಯಕ್ಕೆ ಹೋಗುವ ರಸ್ತೆಗೆ ಶರಣ ಶಿವಯೋಗಿ ಸಿದ್ದರಾಮೇಶ್ವರರ ಮುಖ್ಯ ರಸ್ತೆ ಹಾಗೂ ವೃತ್ತವನ್ನು ಇದೆ ಗ್ರಾಮದ ಆರ್. ಪಾಪಣ್ಣ, ಬಾಲಾಜಿಯವರು ಮತ್ತು ಗ್ರಾಮಸ್ಥರು ಆಯೋಜಿಸಿ, ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ ಧ್ರುವನಾರಾಯಣರವರಿಂದ ನಾಮಫಲಕ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಆಯೋಜಕರು ದೇವಿರಮ್ಮನಹಳ್ಳಿ ಪಾಳ್ಯ ಗ್ರಾಮದ ಯೋಗೇಶ್ ಜೆ.ಮಧುಸೂದನ ಎಂ.
ಸುಧಾಕರ್ ಜೆ, ಸೂರ್ಯಪ್ರಕಾಶ್ ಎಂ, ಆಕಾಶ್ ಕೆ, ಮನೋಜ್ ಆರ್, ತಾಲೂಕು ಭೋವಿ ಸಮಾಜದ
ಗೌರವಾಧ್ಯಕ್ಷರಾದ ಮಹದೇವು ಭೋವಿ, ಅಧ್ಯಕ್ಷರಾದ ಬಾಲಾಜಿ, ಉಪಾಧ್ಯಕ್ಷರಾದ ಹರೀಶಕುಮಾರ, ಮತ್ತು ಶಿವರಾಜ, ಸಂಘಟನಾ ಕಾರ್ಯದರ್ಶಿ ಆರ್. ಪಾಪಣ್ಣ. ಪ್ರಧಾನ ಕಾರ್ಯದರ್ಶಿ ವಸಂತಕುಮಾರ, ಖಜಾಂಜಿ ಕಾಳಪ್ಪ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ್.

ಹಾಗೆ ಬಸವ ಮಾಸ ಸಮಿತಿಯ ಅಧ್ಯಕ್ಷರಾದ ಆಯರಹಳ್ಳಿ ಪ್ರಭುಸ್ವಮಣ್ಣ, ದೇವಿರಮ್ಮನಹಳ್ಳಿ ಪರಮೇಶ, ಮುದ್ದಹಳ್ಳಿ ಅಶೋಕ್, ಕಲ್ಪುರ ಮಹೇಶ್ ಭಾಗವಹಿಸಿದ್ದರು
ಗ್ರಾಮದ ಮುಖ್ಯಸ್ಥರಾದ ತಿಮ್ಮರಸು, ತಿಮ್ಮ ಭೋವಿ, ಸೋಮಣ್ಣ ಟಿ, ಮಹೇಶ್, ಉಮೇಶ್, ಸ್ವಾಮಿ, ಮಣಿಕಂಠ, ಪರಮೇಶ್, ಕೃಷ್ಣ, ಜಯರಾಮು ಮತ್ತಿತರರು ಇದ್ದರು.

ಉತ್ತಮ ಕಾರ್ಯ