ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಅಲ್ಲ ಎನ್ನಲು 9 ಕಾರಣಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಪ್ರಗತಿ ಪರ ಚಿಂತಕರಾದ ಆರ್ ಕೆ ಹುಡಗಿ, ಕಾಶಿನಾಥ ಅಂಬುಲಗಿ, ಶ್ರೀಕಾಂತ ಸ್ವಾಮಿ, ಮಾರುತಿ ಗೋಖಲೆ ನೀಡಿರುವ ಜಂಟಿ ಹೇಳಿಕೆ

ಕಲಬುರ್ಗಿ

ಸಿದ್ದರಾಮಯ್ಯ ಬಸವ ವಿರೋಧಿ ಲಿಂಗಾಯತ ವಿರೋಧಿಯೇ? ಯಾರಾದರೂ ಒಪ್ಪುತ್ತಾರ?

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಮೇಲೆ ಬಸವ ಪರ ಹಾಗು ಲಿಂಗಾಯತ ಪರ ಹಲವಾರು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ, ಹಿಂದೆ ನಮ್ಮದೇ ಲಿಂಗಾಯತ ಮುಖ್ಯಮಂತ್ರಿ ಆಗಿದ್ದವರು ಇಂತಹ ದೊಡ್ಡ ನಿರ್ಣಯ ತೆಗೆದುಕೊಳಲ್ಲೂ ಸಾಧ್ಯ ಆಗಿಲ್ಲ. ಆದರೆ ಕೆಲವು ಆರೆಸಸ್ ಮುಖಂಡರು ಮತ್ತು ಬಿಜೆಪಿಯಲ್ಲಿ ಇರುವ ಲಿಂಗಾಯತ ಸ್ವಯಂಘೋಷಿತ ಮುಖಂಡರು ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಬಸವ ವಿರೋಧಿ ಎಂದು ಆಪಾದನೆ ಮಾಡುತ್ತಿರುವದು 2024 ವರ್ಷದ ದೊಡ್ಡ ಹಾಸ್ಯ, ಮತ್ತು ಲಿಂಗಾಯತ ಸಮುದಾಯಕ್ಕೆ ಬಸವ ಅಭಿಮಾನಿಗಳಿಗೆ ದಾರಿ ತಪ್ಪಿಸುತ್ತಿರುವ ಕುತಂತ್ರಿಗಳು, ಲಿಂಗಾಯತ ವಿರೋಧಿಗಳು, ಮೋಸಗಾರರು, ಬಸವ ದ್ರೋಹಿಗಳು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಮೊದಲನೇ ಮತ್ತು ಎರಡನೇ ಅವಧಿಯಲ್ಲಿ ತೆಗೆದುಕೊಂಡ ನಿರ್ಣಯಗಳು:

1) ಸಿದ್ದರಾಮಯ್ಯ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ್ದು ಬಸವ ಜಯಂತಿಯಂದು ಒಂದು ಇತಿಹಾಸ. ಭಾರತ ದೇಶದ ಇತಿಹಾಸದಲ್ಲಿ ಬಸವ ಜಯಂತಿ ದಿವಸ ಯಾವೊಬ್ಬ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಮಾಡಿಲ್ಲ. ಬಸವಣ್ಣನವರ ದಾಸೋಹ ತತ್ವಕ್ಕೆ ಅನುಗುಣವಾಗಿ ಹಸಿದ ಬಡ ಜನರಿಗೆ ಉಚಿತ ಅಕ್ಕಿ ವಿತರಿಸುವ ಮಹತ್ವ ನಿರ್ಣಯ ತೆಗೆದುಕೊಂಡರು.

2) ಸಿದ್ದರಾಮಯ್ಯ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದ್ದು ದೇಶದ ಪ್ರಥಮ ಮಹಿಳಾ ಕವಿಯತ್ರಿ ಅಕ್ಕಮಹಾದೇವಿ ಮತ್ತು ಲಿಂಗಾಯತ ಧರ್ಮ ಶರಣರಿಗೆ ಕೊಟ್ಟ ಗೌರವ.

3) ಸಿದ್ದರಾಮಯ್ಯ ಎಲ್ಲಾ ಸರಕಾರಿ ಅರೆ ಸರಕಾರಿ ಶಾಲಾ ಕಾಲೇಜು ಮತ್ತು ಕಚೇರಿಯಲ್ಲಿ ಬಸವಣ್ಣನವರ ಫೋಟೋ ಅಳವಡಿಸಲು ಆದೇಶ. ಇದು ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರ ನಂತರ ಬಸವಣ್ಣನವರಿಗೆ ಸರಕಾರ ಕೊಟ್ಟ ಗೌರವ.

4) ಸಿದ್ದರಾಮಯ್ಯ ಬಸವಕಲ್ಯಾಣದಲ್ಲಿ ಜಗತ್ಪ್ರಸಿದ್ಧ ನೂತನ ಅನುಭವ ಮಂಟಪ ಕಟ್ಟಡ ನಿರ್ಮಾಣ ಮಾಡಲು ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು, ಅದಕ್ಕೆ ಸನ್ಮಾನ್ಯ ಶ್ರೀ ಗೋ ರು ಚೆನ್ನಬಸಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ವರದಿ ತೆಗೆದುಕೊಂಡು. ಕಟ್ಟಡ ನಿಲ ನಕ್ಷೆ ತಯ್ಯಾರಿ ಮಾಡಿ ಅದಕ್ಕೆ ಅನುಮೋದನೆ ಕೊಟ್ಟಿದ್ದರು. ಇವಾಗ ಕಟ್ಟಡ ಮುಗಿಯುವ ಹಂತದಲ್ಲಿ ಇದೆ.

ಹಳೆಯ ಚಿತ್ರ

5) ಸಿದ್ದರಾಮಯ್ಯ ಲಿಂಗಾಯತ ಧರ್ಮ ಮಾನ್ಯತೆ ಹಾಗು ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಮಾನ್ಯತೆಗೆ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರಕ್ಕೆ ಶಿಫಾರಸು ಮಾಡಿದ್ದು 12 ನೇ ಶತಮಾನದ ಬಸವಾದಿ ಶರಣರ ಕ್ರಾಂತಿಗೆ ಲಿಂಗಾಯತ ಧರ್ಮಕ್ಕೆ 21 ನೇ ಶತಮಾನದಲ್ಲಿ ಬಸವ ಧರ್ಮಕ್ಕೆ ಮಾನ್ಯತೆ ಮುಖಾಂತರ ಜಯ ಸಿಕ್ಕಿದ್ದು 900 ವರ್ಷಗಳ ಹೋರಾಟಕ್ಕೆ ಅದ್ಭುತ ಜಯ ಸಿಕ್ಕಿದ್ದು. ಬಿಜೆಪಿ ಕಾಂಗ್ರೆಸ್ ಪಕ್ಷದ ಲಿಂಗಾಯತ ನಾಯಕರು ವಿರೋಧ ಮಾಡಿದರು ಹೆದರದೆ ನಿರ್ಣಯ ತೆಗೆದುಕೊಂಡಿದ್ದು ಇದರ ಸಂಪೂರ್ಣ ಶ್ರೇಯಸ್ಸು ಸಿದ್ದರಾಮಯ್ಯ ಅವರಿಗೆ ಹೋಗುತ್ತದೆ.

ನಾನು, ಪೂಜ್ಯ ಮಾತೆ ಮಹಾದೇವಿ, ಪೂಜ್ಯ ಚೆನ್ನಬಸವಾನಂದ ಸ್ವಾಮೀಜಿ ಡಾ ಹೆಚ್ ಸಿ ಮಹಾದೇವಪ್ಪ ಮಾನ್ಯ ಸಚಿವರ ಮುಖಾಂತರ 2014ರಲಿ ಸಿದ್ದರಾಮಯ್ಯ ಅವರಿಗೆ ಭೇಟಿ ಆದಾಗ ಅವರು ನಮಗೆ ಹೇಳಿದ್ದು, ಬಸವ ಧರ್ಮ ಲಿಂಗಾಯತ ಧರ್ಮದ ಪರವಾಗಿ ಪಕ್ಷಾತೀತವಾಗಿ ಲಿಂಗಾಯತ ನಾಯಕರೇ ವಿರೋಧ ಮಾಡುತ್ತಾರೆ, ಆದರಿಂದ ಎಚ್ಚರ ವಹಿಸಿ ಹೋರಾಟ ಮಾಡಿ ಎಂದು ಕಿವಿ ಮಾತು ಹೇಳಿದರು, ನಮಗೆ ಆಶ್ಚರ್ಯ ಆಗಿತ್ತು, ಹೋರಾಟಕ್ಕೆ ವಿರೋಧ ಮಾಡಿದು ನಮ್ಮವರೇ, ಅದು ಮುಂದೆ ಸತ್ಯ ಆಯಿತು.

6) ಸಿದ್ದರಾಮಯ್ಯ ಅವರು ಬಸವಾದಿ ಶರಣರ ವಚನಗಳನ್ನು ಸರಕಾರ ವತಿಯಿಂದ ಒಂದೇ ಪುಸ್ತಕದಲ್ಲಿ ಮುದ್ರಿಸಿ ರಿಯಾಯತಿ ದರದಲ್ಲಿ ಸಂಪೂರ್ಣ ರಾಜ್ಯಕ್ಕೆ ಒದಗಿಸಿಕೊಟ್ಟಿದ್ದು. ಅವರಿಗೆ ಇರುವ ಬಸವಾದಿ ಶರಣರ ಬಗ್ಗೆ ಇರುವ ಅಭಿಮಾನ ಪ್ರೀತಿ ಕಾಳಜಿ ಎತ್ತಿ ತೋರಿಸುತ್ತದೆ.

7) ಸಿದ್ದರಾಮಯ್ಯ ಲಿಂಗಾಯತ ಕಿತ್ತೂರ ರಾಣಿ ಚೆನ್ನಮ್ಮ ಅವರ ಬ್ರಿಟಿಷ ವಿರುದ್ಧ ಹೋರಾಟ ಮಾಡಿದ್ದ ದೇಶದ ಪ್ರಥಮ ವೀರ ರಾಣಿಯವರ ನೆನಪಿಗಾಗಿ ಆ ಭಾಗಕ್ಕೆ ಮುಂಬೈ ಕರ್ನಾಟಕ ಹೆಸರು ತೆಗೆದು ಹಾಕಿ ” ಕಿತ್ತೂರ ಕರ್ನಾಟಕ” ಎಂದು ನಾಮಕರಣ ಮಾಡಿದ್ದು ಒಂದು ಅಭೂತಪೂರ್ವ ನಿರ್ಣಯ. ಬೆಳಗಾವಿ ಮಹಾರಾಷ್ಟ್ರ ಸೇರಿಸಬೇಕು ಎನ್ನುವ ಏಕೀಕರಣ ಸಮಿತಿಗೆ ಕೊಟ್ಟ ದೊಡ್ಡ ಪೆಟ್ಟು.

8) ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆದ ಮೇಲೆ ಬಸವಣ್ಣನವರನ್ನು ” ಕರ್ನಾಟಕ ರಾಜ್ಯ ಸಾಂಸ್ಕೃತಿಕ ನಾಯಕ” ಎಂದು ಐತಿಹಾಸಿಕ ಘೋಷಣೆ ಮಾಡಿ ಬಸವ ವಿರೋಧಿಗಳಿಗೆ ಒಳ ಏಟು ಕೊಟ್ಟರು.

9) ಬೆಳಗಾಂವಿ ವಿಧಾನ ಸೌಧ ವಿಧಾನ ಸಭೆಯಲ್ಲಿ ಅನುಭವ ಮಂಟಪ ಚಿತ್ರ ಅನಾವರಣಗೊಳಿಸಿದ್ದು ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಪ್ರಥಮ.

ಇದೆಲ್ಲವೂ ತಡೆದುಕೊಳ್ಳಲಾರದ ಕೆಲವು ಮೂಲಭೂತವಾದಿಗಳು ಅಂದಿನಿಂದ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ, ಅದಕ್ಕೆ ನಮ್ಮದೇ ಬಿಜೆಪಿ ಪರ ಲಿಂಗಾಯತ ಸ್ವಾಮೀಜಿಗಳು ಮತ್ತು ಬಿಜೆಪಿ ಲಿಂಗಾಯತ ನಾಯಕರನ್ನು ಬಳಸಿಕೊಳ್ಳುತ್ತಿದ್ದಾರೆ. ಪಂಚಮಸಾಲಿ ಜಗದ್ಗುರು ಪೂಜ್ಯ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸೌಲಭ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದು ವೀರಾವೇಶದಿಂದ ಹೋರಾಟ ಮಾಡಿದ್ದವರು, ಸಿದ್ದರಾಮಯ್ಯ ಪರಮಾಪ್ತರು ಆಗಿದ್ದರು.

ಆರೆಸಸ್ ಬಿಜೆಪಿ ಲಿಂಗಾಯತ ಬಸವ ವಿರೋಧಿಗಳ ಬಲೆಗೆ ಬಿದ್ದು, ಅವರ ಮಾತಿನಂತೆ ಪಂಚಮಸಾಲಿ ಅವರಿಗೆ 2ಎ ಮೀಸಲಾತಿ ಹೋರಾಟ ಮಾಡಲು ಒಪ್ಪಿಕೊಂಡು ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಮೀಸಲಾತಿ ಹೋರಾಟಕ್ಕೆ ಹಿನ್ನಡೆ ಮಾಡುವ ಕುತಂತ್ರದಲ್ಲಿ ಭಾಗಿಯಾಗಿದ್ದು ದುರದೃಷ್ಟ. ನಾವೆಲ್ಲರೂ ಲಿಂಗಾಯತರು ಪಂಚಮಸಾಲಿ ಜಗದ್ಗುರು ಮೃತ್ಯುಂಜಯ ಸ್ವಾಮೀಜಿಯವರಿಗೆ ಬಹಳ ಗೌರವ ಕೊಡುತಿದ್ದೆವು. ಮಾನ್ಯತೆಗೆ ಶಿಫಾರಸ್ಸು ಮಾಡಿದ್ದಾಗ ಜಯಮೃತ್ಯುಂಜಯ ಸ್ವಾಮೀಜಿ ಸಿದ್ದರಾಮಯ್ಯ ಅವರಿಗೆ ಹೊಗಳಿದ್ದೇ ಹೊಗಳಿದ್ದು, ಅವರನ್ನು ಲಿಂಗಾಯತ ನಾಯಕ ಎಂದು ಬಿರುದು ಕೊಟ್ಟಿದ್ದರು, ಇವಾಗ ಆರೆಸಸ್ ಬಿಜೆಪಿ ಲಿಂಗಾಯತ ಬಸವ ವಿರೋಧಿ ನಾಯಕರ ಕುಮ್ಮಕ್ಕಿಗಿ ಬಲಿಯಾಗಿ ಸಿದ್ದರಾಮಯ್ಯ ಅವರನ್ನು ಬಸವ ವಿರೋಧಿ ಲಿಂಗಾಯತ ವಿರೋಧಿ ಎಂದು ಹೇಳುತ್ತಿರುವುದು ನಿಂದನೀಯ ಖಂಡನೀಯ.

ಯಾವ ಆರೆಸಸ್ ಬಿಜೆಪಿ ನಾಯಕರು ಬಸವ ಧರ್ಮ ಲಿಂಗಾಯತ ಧರ್ಮಕ್ಕೆ ವಿರೋಧ ಮಾಡಿದ್ದರು ಅವರೆಲ್ಲ ಇಂದು ಪಂಚಮಸಾಲಿ ಹೋರಾಟಕ್ಕೆ ಬೆಂಬಲ ಕೊಡುತ್ತಿರುವದು ನೋಡಿದರೆ ಲಿಂಗಾಯತ ಬಸವ ವಿರೋಧಿ ಕುತಂತ್ರ ಎಂದು ಎದ್ದು ಕಾಣುತ್ತಿದೆ. ಈ ಬಸವ ಲಿಂಗಾಯತ ವಿರೋಧಿಗಳು ಇಂದು ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಅನ್ನುತ್ತಿರುವದು ಹಾಸ್ಯಾಸ್ಪದ. ಯತ್ನಾಳ ಎಂಬ ಬಸವ ವಿರೋಧಿ ಹೊಂಬ ಆರೆಸಸ್ ಬಿಜೆಪಿ ನಾಯಕನ ನೇತೃತ್ವದಲ್ಲಿ ಬಸವ ಮೃತ್ಯುಂಜಯ ಸ್ವಾಮೀಜಿ ಹೋರಾಟ ಮಾಡುತ್ತಿರುವದು ಖಾವಿಗೆ ಅವಮಾನ ಮಾಡುತ್ತಿದ್ದಾರೆ.

ಇನ್ಮುಂದೆ ಇದೆ ತರಹ ಸಿದ್ದರಾಮಯ್ಯ ಅವರಿಗೆ ಬಸವ ವಿರೋಧಿ, ಲಿಂಗಾಯತ ವಿರೋಧಿ ಎಂದು ಹೇಳಿಕೆ ಕೊಟ್ಟರೆ ಸ್ವಾಮೀಜಿ ವಿರುದ್ಧ ಮತ್ತು ಆರೆಸಸ್ ಬಿಜೆಪಿ ನಾಯಕರ ವಿರುದ್ಧ ರಾಜ್ಯದಂತೆ ಲಿಂಗಾಯತ ಧರ್ಮ ಬಸವ ಸಂಘಟನೆಗಳ ಸೇರಿ ಹೋರಾಟ ಮಾಡುತ್ತೇವೆ.

Share This Article
Leave a comment

Leave a Reply

Your email address will not be published. Required fields are marked *