ನುಡಿದರೆ ಮುತ್ತಿನ ಹಾರದಂತಿರಬೇಕು, ಸದನದಲ್ಲಿ ಕೀಳು ಮಾತು ಬೇಡ: ಸಿದ್ದರಾಮಯ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ ʼಅಹುದಹುದೆʼನಬೇಕು
ನುಡಿಯೊಳಗಾಗಿ ನಡೆಯದಿದ್ದರೆ,
ಕೂಡಲಸಂಗಮದೇವನೆಂತೊಲಿವನಯ್ಯಾ?

ಬಸವಣ್ಣನವರ ಪ್ರಸಿದ್ದ ವಚನ ಹೇಳುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ‘ಕರಿಮಣಿ ಮಾಲೀಕ’ ಪದಗಳ ಬಳಕೆಯನ್ನು ಸೋಮವಾರ ಖಂಡಿಸಿದರು.

ವಿರೋಧ ಪಕ್ಷ ನಾಯಕರಾದ ಅಶೋಕ್ ಹಾಗೂ ಸುನೀಲ್ ಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯ ಸ್ಥಾನಕ್ಕೆ ನಡೆಯುತ್ತಿರುವ ಜಗ್ಗಾಟದ ಬಗ್ಗೆ ಮಾತನಾಡುತ್ತ ಕರಿಮಣಿ ಮಾಲೀಕ ಯಾರು? ಎಂದು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅಶೋಕ್ ಹಾಗೂ ಸುನೀಲ್ ಕುಮಾರ್ ಕರಿಮಣಿ ಮಾಲೀಕ ಯಾರು ಎಂದು ಪ್ರಶ್ನಿಸಿದ್ದಾರೆ. ನನ್ನ ಹಾಗೂ ಬಹುತೇಕ ಸದಸ್ಯರ ಪ್ರಕಾರ ಇವು ಅರ್ಥಹೀನ ಮಾತುಗಳು. ಹಿರಿಯ ಸದಸ್ಯರಿಂದ ಇಂಥ ಮಾತುಗಳ ನಿರೀಕ್ಷೆ ಇರಲಿಲ್ಲ ಎಂದು ಹೇಳಿದರು.

ಸದನದಲ್ಲಿ ಜನರ ಅಭಿರುಚಿ ಹೆಚ್ಚಿಸುವಂತೆ ಮಾತನಾಡಬೇಕು. ಸದನದಲ್ಲಿ ನಡೆಯುವ ಚರ್ಚೆಗಳು ಬಸವಣ್ಣನವರು ಹೇಳಿದಂತೆ ನುಡಿದರೆ ಮುತ್ತಿನ ಹಾರದಂತೆ ಇರಬೇಕು ಎಂದು ಹೇಳುತ್ತಾ ವಚನದ ಕೆಲವು ಸಾಲುಗಳನ್ನು ಸ್ಮರಿಸಿಕೊಂಡರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
2 Comments
  • ಒಬ್ಬ ಅನ್ಯಧರ್ಮಿಯ ಮುಖ್ಯ ಮಂತ್ರಿಗಳು ಇದನ್ನು ಹೇಳುತ್ತಿರಬೇಕಾದರೆ, ಏನಾಗಿದೆ ನಮ್ಮ ಲಿಂಗಾಯತ ರಾಜಕಾರಣಿಗಳಿಗೆ ಈ ರೀತಿ ಕೌಂಟರ್ ಅಟ್ಯಾಕ ಕೊಡದಿರಲು? ನಿಜವಾಗಲೂ ಸಿಧ್ದರಾಮಯ್ಯನವರು ಅಪ್ರತಿಮ ಬಸವಾಭಿಮಾನಿಗಳು.

    • Sri C M of karnataka is a well educated & lawyer his political carrier 5 decades he is not a sunday monday person

Leave a Reply

Your email address will not be published. Required fields are marked *