ಹೊಳಲ್ಕೆರೆ:
ಶ್ರೀಗುರು ಸಿದ್ದರಾಮೇಶ್ವರರ 853ನೇ ಜಯಂತಿ ಮಹೋತ್ಸವ, ವಾಲ್ಮೀಕಿ ಮೈದಾನದ ಜಿ. ಬಸಪ್ಪ ಮಹಾಮಂಟಪದಲ್ಲಿ ಜನವರಿ 14 ಮತ್ತು 15ರಂದು ನಡೆಯಲಿದೆ.
14ರಂದು ಬೆಳಿಗ್ಗೆ 7.30ಕ್ಕೆ ಷಟಸ್ಥಲ ಧ್ವಜಾರೋಹಣವನ್ನು ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಮಾಡಲಿದ್ದಾರೆ. ನಂದಿ ಧ್ವಜಾರೋಹಣವನ್ನು ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಬಿ.ಕೆ. ಚಂದ್ರಶೇಖರ ಮಾಡುವರು.
15ರಂದು ಮಧ್ಯಾಹ್ನ 2:30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಾಣೇಹಳ್ಳಿ ಮಠದ ಪಂಡಿತ ಶಿವಾಚಾರ್ಯ ಸ್ವಾಮೀಜಿ, ಮತ್ತಿತರ ಪೂಜ್ಯರು ವಹಿಸುವರು. ಸಮಾರೋಪ ನುಡಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಆಡಲಿದ್ದಾರೆ.
ಶ್ರೀ ಗುರು ಸಿದ್ಧರಾಮೇಶ್ವರ ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಸರ್ವರಿಗೂ ಸ್ವಾಗತ ಕೋರಿದೆ.

