ಸಿದ್ದರಾಮಯ್ಯ ನವರೇ ಏಕೆ ಟಾರ್ಗೆಟ್?

ಹೌದು ರಾಜ್ಯ ರಾಜಕೀಯದಲ್ಲಿ ಈಗ ನಡೆಯುತ್ತಿರುವ ಗದ್ದಲ ಮೂಡ ಹಗರಣದ ವಿಷಯ.

ಮೂಡದ ಬೈಲಾ ಪ್ರಕಾರ ಸಿದ್ದರಾಮಯ್ಯ ಅವರ ಪತ್ನಿಗೆ ಕೊಟ್ಟ ನಿವೇಶನ ಅಕ್ರಮವಲ್ಲ ಅಂತ ಮೂಡದ ಅಧಿಕಾರಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ.

ಒಂದು ವೇಳೆ ಮೂಡದಲ್ಲಿ ಹಗರಣ ನಡೆದಿದ್ದರೂ ಅದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ ಹಾಗಾಗಿ ಬಿಜೆಪಿ ಸರ್ಕಾರವೇ ಈ ಹಗರಣದ ರುವಾರಿ ಅನ್ನಬಹುದು.

ಹಾಗೆ ನೋಡುವುದಾದರೆ ದೇಶದ ಬಹಳಷ್ಟು ರಾಜಕಾರಣಿಗಳು ಹಗರಣ ಮಾಡಿ ಭ್ರಷ್ಟಾಚಾರ ಮಾಡಿ ಕಳಂಕ ಹೊತ್ತಿದ್ದಾರೆ
ಆದರೆ ಸಿದ್ದರಾಮಯ್ಯನವರೇ ವಿರೋಧಿಗಳಿಗೆ ಏಕೆ ಟಾರ್ಗೆಟ್ ಅಂತ ಸ್ವಲ್ಪ ಚಿಂತಿಸೋಣ.

ಸಿದ್ದರಾಮಯ್ಯ ಏಕೆಂದರೆ ಆತ ಅಪ್ಪಟ ಬಸವಣ್ಣನವರ ಅನುಯಾಯಿಗಳು, ಅಂಬೇಡ್ಕರ್ ಅವರ ಆಶಯಗಳನ್ನು ಪಾಲಿಸುವವರು ಇದಕ್ಕಾಗಿ ಇವರು ಟಾರ್ಗೆಟ್.

ಕರ್ನಾಟಕದಲ್ಲಿ ಸಾಕಷ್ಟು ಜನ ಬೇರೆ ಬೇರೆ ಪಕ್ಷದಲ್ಲಿ ಲಿಂಗಾಯತ ನಾಯಕರು ಇದ್ದಾರೆ ಆದರೆ ಅವರಾರು ನಾನು ಬಸವಣ್ಣನವರ ಅನುಯಾಯಿ ಅಂತ ಎದೆ ತಟ್ಟಿಕೊಂಡು ಹೇಳೇ ಇಲ್ಲ.

ಅಷ್ಟೇ ಅಲ್ಲ ಬಸವಾದಿ ಶರಣರ ವಿಚಾರಗಳನ್ನು ಜನಮಾನಸಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರಷ್ಟು ಬದ್ಧತೆ ಆಗಲಿ ಕಳಕಳಿ ಆಗಲಿ ಲಿಂಗಾಯತ ಸಮುದಾಯದ ಯಾವ ರಾಜಕಾರಣಿಗಳು ಮಾಡಲಿಲ್ಲ.

ಸಂವಿಧಾನ ಬದಲಾಯಿಸುವ, ಸಂವಿಧಾನಕ್ಕೆ ಅಪಮಾನ ಮಾಡುವ ಮಾತುಗಳು ಬಂದಾಗ ಯಾವ ರಾಜಕಾರಣಿಗಳು ಪ್ರತಿಕ್ರಿಯೆ ನೀಡದೇ ಇದ್ದಾಗ ಸಿದ್ದರಾಮಯ್ಯ ಅವರು ಗಟ್ಟಿ ದನಿಯಲ್ಲಿ ಏಕಾಂಗಿ ಆಗಿ ಅರ್ಭಟನೆ ಮಾಡಿದರು
ಸಂವಿಧಾನ ಬದಲಾವಣೆಗಳಿಗೆ ಕೈ ಹಾಕಿದರೆ ರಕ್ತಕ್ರಾಂತಿ ಆಗುತ್ತದೆ ಅಂತ.

ಈ ಎರಡೂ ವಿಚಾರಗಳ ಜೊತೆಗೆ ಬಸವಣ್ಣನವರನ್ನುಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡಿದರು ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ ಮಾಡಿದರು.

ಇವು ಅಕ್ಷರಶಃ ಸನಾತನ ವಾದಿಗಳನ್ನು ಕಂಗೆಡಿಸಿದವು. ಬಸವಣ್ಣನವರ ವಿಚಾರಗಳು ಜನರಿಗೆ ತಲುಪಿದರೆ ಸನಾತನಿಗಳ ಆಟ ಬಂದ್ ಆಗುತ್ತದೆ. ಅದಕ್ಕಾಗಿ ಅವರು ವಚನ ದರ್ಶನ ಅಂತ ಪುಸ್ತಕ ಇಟ್ಟುಕೊಂಡು ಜನರನ್ನು ಮತ್ತೆ ತಮ್ಮ ಗಲಾಮರನ್ನಾಗಿ ಮಾಡಿಕೊಳ್ಳುವ ಹುನ್ನಾರ.

ಜೊತೆಗೆ ಸಿದ್ದರಾಮಯ್ಯ ಅವರನ್ನು ಸುಳ್ಳು ಹಗರಣದ ಮೂಲಕ ಕಟ್ಟಿ ಹಾಕಿದರೆ ಸಿದ್ದರಾಮಯ್ಯ ಅವರಂತ ಸಾಮಾಜಿಕ ಕಳಕಳಿ ಇರುವ ವ್ಯಕ್ತಿ ಯಾರೂ ಇಲ್ಲ ಎಂಬುದು ಅವರ ನಂಬಿಕೆ.

ಜನರನ್ನು ಕೇವಲ ಕೋಮುವಾದದ ಉನ್ಮದದಲ್ಲಿ ತೇಲಿಸಿ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಅವರ ಕೆಟ್ಟ ಆಲೋಚನೆಗೆ ಸಿದ್ದರಾಮಯ್ಯ ಅವರೇ ಅಡ್ಡಿ ಆಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಿದರೆ ಸನಾತನಿಗಳು ಸುರಕ್ಷಿತ ಎಂಬ ಭಾವನೆ ಅವರದು.

ಈ ಎಲ್ಲಾ ದೃಷ್ಟಿಯಿಂದ ಸಿದ್ದರಾಮಯ್ಯ ಟಾರ್ಗೆಟ್ ಆಗಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು