ಸಿಂಧನೂರು ಗ್ರಾಮಗಳಲ್ಲಿ ಅಭಿಯಾನಕ್ಕೆ ಭರ್ಜರಿ ಪ್ರಚಾರ

ಸಿಂಧನೂರು

ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ, ಸೆಪ್ಟೆಂಬರ್ 5ರಂದು ರಾಯಚೂರು ನಗರದಲ್ಲಿ ನಡೆಯುವ “ಬಸವ ಸಂಸ್ಕೃತಿ ಅಭಿಯಾನ” ಕಾರ್ಯಕ್ರಮದ ಆಶಯ, ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಕುರಿತು ಅರಿವು ನೀಡಿ ಜನರನ್ನು ಆಹ್ವಾನಿಸಲಾಯಿತು.

ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು, ಸುವರ್ಣಗಿರಿ ವಿರಕ್ತಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಇವರ ಸಾನಿಧ್ಯದಲ್ಲಿ, ಬಸವಪರ ಹಾಗೂ ಲಿಂಗಾಯತ ಸಂಘಟನೆಗಳ ಮುಖಂಡರು ಗ್ರಾಮ ಗ್ರಾಮಗಳಿಗೆ ತೆರಳಿ, ಸಭೆ ಮಾಡುವುದರ ಮೂಲಕ ಅಭಿಯಾನದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.

ಗ್ರಾಮಗಳಾದ ಒಳಬಳ್ಳಾರಿ, ಗಿಣಿವಾರ, ಬಾದರ್ಲಿ, ಹರೇಟನೂರು, ಅಲಬನೂರು, ಬೆಳಗುರ್ಕಿ, ಗೋಮರ್ಸಿ, ಉದ್ಬಾಳ, ಯಡಗಿನಾಳ, ಪುಲಮೇಶ್ವರದಿನ್ನಿ, ಚಿತ್ರಾಲಿ, ಆಯನೂರು, ಪುಲಗುಂಚಿ, ಗೋನವಾರ, ಜುಮತಿ, ರಾಗಲಪರ್ವಿ, ವಲಕಮದಿನ್ನಿ, ಯದ್ದಲದೊಡ್ಡಿ ಮತ್ತಿತರ ಕಡೆ ಸಭೆಗಳನ್ನು ಸಂಘಟಿಸಲಾಗಿತ್ತು.

ಬಸವರಾಜಪ್ಪ ಕುರಕುಂದಿ, ಕರೇಗೌಡ ಪೊಲೀಸಪಾಟೀಲ, ಚಂದ್ರೇಗೌಡ ಹರೇಟನೂರ, ಬಸವಲಿಂಗಪ್ಪ ಬಾದರ್ಲಿ, ಅಮರೇಶ ಗುರಿಕಾರ, ಶರಣಬಸಪ್ಪ ಸಾಹುಕಾರ ಚಾಂದಪಾಶಾ ಮತ್ತಿತರ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.

ಉದಯಗೌಡ ಗಿಣಿವಾರ, ಮಾರುತಿ ಸಾವುಕಾರ, ವೀರನಗೌಡ ಗದ್ರಟಗಿ, ಅಂಬಣ್ಣ ನಾಯಕ, ಶರಣಪ್ಪ ಹಾವಿನಾಳ, ಚಂದ್ರಯ್ಯಸ್ವಾಮಿ ಹಿರೇಮಠ, ಸುಖಮುನಿಸ್ವಾಮಿ ಬಾದರ್ಲಿ, ಮಲ್ಲಿಕಾರ್ಜುನ ಹಾವಿನಾಳ, ಅಂಬಣ್ಣ ನಾಯಕ ಬಾದರ್ಲಿ, ಹುಸೇನಪ್ಪ ನಾಯಕ, ಚಂದ್ರೇಗೌಡ ಹರೇಟನೂರ, ಶಿವಪ್ಪ ಹರೇಟನೂರ, ನಾಗನಗೌಡ ಮೇಟಿ, ರಾಜಶೇಖರ ಕುಂಬಾರ, ಚನ್ನಬಸಪ್ಪ ಅಗಸಿಮುಂದಿನ, ಮಹಾಂತೇಶ ಅಲಬನೂರ, ಮಲ್ಲಿಕಾರ್ಜುನ ರಂಗಾಪುರ, ಬಸನಗೌಡ ಗೋಮರ್ಶಿ, ವೀರೇಶ ಗೋಮರ್ಶಿ, ಬಸವರಾಜಗೌಡ ಉದ್ಬಾಳ, ಬಾಲಾಜಿ ಉದ್ಬಾಳ ಮತ್ತಿತರ ಮುಖಂಡರು ಗ್ರಾಮಗಳ ಸಭೆಗಳಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *