ಸಿರಗುಪ್ಪ
ಶರಣ ದಂಪತಿ ಇಂದುಮತಿ-ಯಲ್ಲನಗೌಡ ಅವರ ಸೀಮಂತ ಕಾರ್ಯಕ್ರಮ ಇತ್ತೀಚೆಗೆ ಸಿರಗುಪ್ಪ ತಾಲೂಕಿನ ಗುಂಡಿಗನೂರು ಗ್ರಾಮದಲ್ಲಿ ಬಸವತತ್ವದಂತೆ ನಡೆಯಿತು.


ಕಾರ್ಯಕ್ರಮದಲ್ಲಿ ಗುರುಬಸವ ಪೂಜೆ, ಸಾಮೂಹಿಕ ಇಷ್ಟಲಿಂಗ ಪೂಜೆ, ವಚನ ಗಾಯನ ಮತ್ತು ಅನುಭಾವ ಗೋಷ್ಠಿ ನೆರವೇರಿತು.


ಪೂಜ್ಯ ಬಸವರಾಜಪ್ಪ ಶರಣರು ವೆಂಕಟಾಪುರ, ಪೂಜ್ಯ ಬಸವಭೂಷಣ ಸ್ವಾಮೀಜಿ, ಹೊಸಪೇಟೆಯ ಬಸವ ಕಿರಣ ಶರಣರು ಕಾರ್ಯಗಳನ್ನು ನಡೆಸಿಕೊಟ್ಟು, ಅನುಭಾವ ನೀಡಿದರು.

ಸಿರಗುಪ್ಪ ಬಸವ ಬಳಗದ ಸದಸ್ಯರು, ಅಂದ್ರಾಳ, ಗಂಗಾವತಿ, ಬಳ್ಳಾರಿ ರಾಷ್ಟ್ರೀಯ ಬಸವ ದಳದ ಸದಸ್ಯರು, ಸಿರಿಗೆರೆ, ಮುದ್ದಟನೂರು ಮತ್ತು ಸುತ್ತಮುತ್ತಲಿನ ಗ್ರಾಮದ ಶರಣರು ಹಾಗೂ ಯಲ್ಲನಗೌಡರ ಬಂಧು ಬಳಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
