ಬೆಂಗಳೂರು
ಸಿರಿಗೆರೆಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಠದ ಶಿಷ್ಯರಿಗೆ “ಜಾತಿ ಸಮೀಕ್ಷೆಯಲ್ಲಿ ನಿಮ್ಮ ಧರ್ಮ ಹಿಂದೂ, ಜಾತಿ ಲಿಂಗಾಯತ ಎಂದು ಬರೆಯಿರಿ” ಎಂದು ಸೂಚಿಸಿದ್ದಾರೆ.
ಜೊತೆಗೆ ಜಾತಿಗಣತಿಯಲ್ಲಿ ಜನತೆಯ ಜಾತಿ ಉಪಜಾತಿ ಕೇಳುವುದು ಮುಂದೆ ದೊಡ್ಡ ಜಾತಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.
ಈ ಹೇಳಿಕೆಗಳನ್ನು ನೋಡಿದರೆ ಶ್ರೀಗಳಿಗೆ ಭಾರತ ಸಮಾಜದ ನಿಜವಾದ ಅರಿವಿನ ಕೊರತೆ ಇರುವಂತೆ ಭಾಸವಾಗುತ್ತಿದೆ.
ಶ್ರೀಗಳು ಈಗ ಹೇಳುತ್ತಿರುವ “ಹಿಂದೂ ಲಿಂಗಾಯತರ” ಮನೆಯೊಳಗೆ ಕೆಳಜಾತಿಯ ಜನರನ್ನು ಕರೆದುಕೊಂಡು ಹೋಗಿ ಪ್ರಸಾದ ಮಾಡಿಸುತ್ತಾರಾ?
ಲಿಂಗಾಯತರೇ ಅಧಿಕ ಸಂಖ್ಯೆಯಲ್ಲಿರುವ ಊರುಗಳಲ್ಲಿರುವ ದೇವಸ್ಥಾನಗಳಿಗೆ ಪ್ರವೇಶ ಮಾಡಿಸುವ ಪ್ರಯತ್ನ ಮಾಡಿಸುತ್ತಾರಾ? ನೋಡೋಣ. ನನಗೆ ಪರಿಚಯ ಮತ್ತು ಸ್ನೇಹವಿರುವ ಬ್ರಾಹ್ಮಣ ಗೆಳೆಯರನೇಕರು ಲಿಂಗಾಯತನಾದ ನನ್ನ ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ ಗುರುಗಳೇ.
ಅವರೆಲ್ಲಾ ಅನಕ್ಷರಸ್ಥರಲ್ಲ, ಬದಲಾಗಿ ಸ್ನಾತಕೋತ್ತರ ಮತ್ತು ಡಾಕ್ಟೋರಲ್ ಪದವೀಧರರು, ಇಂಜಿನಿಯರುಗಳು ಮತ್ತು ವೈದ್ಯರುಗಳು. ತಮ್ಮ ಜೊತೆ ವೇದಿಕೆಯಲ್ಲಿರುವ ಬಸವರಾಜ ಬೊಮ್ಮಾಯಿ ಅವರು ಕೂಡ ಅವರ ಕ್ಷೇತ್ರದಲ್ಲಿ ಸ್ಥಾನ ಪಡೆದಿರುವುದು, ಮತ್ತು ಚುನಾವಣೆಯಲ್ಲಿ ಮತ ಕೇಳುವುದು ಇದೇ ಜಾತಿ ಅಡಿಯಲ್ಲಿ ಗುರುಗಳೇ.
ಈ ತರಹದ ಜಾತಿ ಆಧಾರಿತ ಶ್ರೇಣೀಕೃತ ವ್ಯವಸ್ಥೆ ಈಗಲೂ ಇರುವುದರಿಂದಲೇ ಮತ್ತು ಈ ಜಾತಿ ವ್ಯವಸ್ಥೆ ನಮ್ಮ ಸಮಾಜದಿಂದ ಹೋಗುವವರೆಗೂ ಈಗ ನಡೆಯುತ್ತಿರುವ ಜಾತಿ ಗಣತಿ ಅಂದರೆ ಜಾತಿ ಆಧಾರಿತ ಶಿಕ್ಷಣ ಮತ್ತು ಅಭಿವೃದ್ಧಿಯ ಯೋಜನೆಗಳು ಬೇಕಾಗುತ್ತದೆ.
ತಾವು ಬಸವ ಪರಂಪರೆಯ ಹಿನ್ನೆಲೆಯಿಂದ ಬಂದಿರುವವರು ನೀವಾದರೂ ನಿಮ್ಮ ಕಾರ್ಯಕ್ಷೇತ್ರದಲ್ಲಿನ ಸಮಾಜದಲ್ಲಿ (ಸಾದು ಲಿಂಗಾಯತರು) ಜಾತಿ ವ್ಯವಸ್ಥೆ ನಿರ್ಮೂಲನ ಮಾಡುವ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಮಾಡಬಹುದಿತ್ತಲ್ಲ.
ಇಷ್ಟೊಂದು ದೊಡ್ಡ ಮಂಟಪ ಹಾಕಿಕೊಂಡು ವೈಭವೋಪೇತವಾಗಿ ಸಭೆ ಸಮಾರಂಭ ಮಾಡಿದ ಹಾಗಲ್ಲ ಜಾತಿ ನಿರ್ಮೂಲನೆ ಅನ್ನುವ ಅರಿವು ನಿಮಗೂ ಇದೆ ಅಂದುಕೊಂಡಿದ್ದೇನೆ. ಹೆಚ್ಚಿನ ವಿರಕ್ತ ಮಠಗಳಲ್ಲಿ ಜಾತಿ ಜಂಗಮರೇ ಮಠಾಧೀಶರಾಗಬೇಕು ಎನ್ನುವ ಅಲಿಖಿತ ಕಾನೂನು ಇದೆಯಲ್ಲವೇ? ಅದನ್ನೇ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆಗುತ್ತಿಲ್ಲ.
ಇಂತಹ ಸಂದರ್ಭದಲ್ಲಿ ಜಾತಿ ಗಣತಿ ಮಾಡಬಾರದು, ಅದರ ಆಧಾರದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಕೊಡಬಾರದು ಎಂದು ವಾದ ಮಾಡಲು ಹೇಗೆ ಸಾಧ್ಯ ಸ್ವಾಮೀಜಿಯವರೇ?
ಇವರಿಗೆ ಭಾರತೀಯ ಸಾಮಾಜಿಕ ಹಾಗೂ ಜಾತಿ ವ್ಯವಸ್ಥೆಯ ಅರಿವಿಲ್ಲದಂತೆ ಕಾಣುತ್ತಿದೆ
ಈ ಅರವು ಹೆಚ್ಚಿಸಿಕೊಳ್ಳಲು ಮಹಾತ್ಮ ಜೋತಿರಾವ ಫುಲೆ, ಡಾ. ಬಿ ಆರ್ ಅಂಬೇಡ್ಕರ, ಛತ್ರಪತಿ ಶಾಹುಮಹಾರಾಜ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರನ್ನ ಇನ್ನೊಮ್ಮೆ ಅಧ್ಯಯನ ಮಾಡಲಿ ಗುರುಗಳು.
ತಾವುಗಳು ಪೂರ್ಣ ಮಾಹಿತಿ ಇಲ್ಲದೇ ಈ ಅಭಿಪ್ರಾಯ ಸೂಚಿಸಿದ್ದೀರಿ.ಜಾತಿ ನಿರ್ಮೂಲನೆ ಸಾಧ್ಯ ಇಲ್ಲ ಅನ್ನುವ ಅರಿವು ಅವರ ಪೂರ್ವಜರಿಗೂ ಇತ್ತು ಅವರಿಗೂ ಇದೆ.ಏಕೆಂದರೆ ಜಾತಿ ವ್ಯವಸ್ಥೆ ಮೆದುಳನ್ನು ಹೊಕ್ಕಿರುವ ವಿಷಯ.ಬೇರೆ ಧರ್ಮದಲ್ಲಿ ಮುಖದ ಮೇಲಿನ ಬಟ್ಟೆಯನ್ನೇ ತೆಗೆಸಲು ಆಗುತ್ತಿಲ್ಲ, ಇನ್ನು ಮೆದುಳನ್ನು ಹೊಕ್ಕಿರುವ ವಿಷಯವನ್ನು ಹೋಗಲಾಡಿಸುವುದು ಸಾಧ್ಯವೇ?
ಯಾರೇ ಆದರೂ, ಒಬ್ಬ ವ್ಯಕ್ತಿ ಯಾವ ಹಿನ್ನೆಲೆಯಲ್ಲಿ ಆ ಮಾತು ಹೇಳಿದ್ದಾರೆ ಎಂದು ಪೂರ್ಣ ಮಾಹಿತಿ ತಿಳಿದು ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತ.*ಕೇವಲ ಹದಿನೈದು ಇಪ್ಪತ್ತು ಸೆಕೆಂಡ್ ರೀಲ್ಸ್ ,ಮತ್ತು ವಿಡಿಯೋ ಕ್ಲಿಪ್ ನೋಡಿ ಅದರ ಅಭಿಪ್ರಾಯದ ಮೇಲೆ ಅಭಿಪ್ರಾಯ ಮೂಡಿಸಿಕೊಳ್ಳಬಾರದು.*
ಅವರು ಲಿಂಗಾಯಿತ ಮಠಾಧಿಪತಿಗಳು ರಾಜ್ಯಾದ್ಯಂತ ನಡೆಸುತ್ತಿರುವ ಭರ್ಜರಿ ಪ್ರಚಾರದ “ಬಸವ ಸಂಸ್ಕೃತಿ ಅಭಿಯಾನದ” ಹಿನ್ನೆಲೆಯಲ್ಲಿ ಹೇಳಿರುವುದು. ಬಸವ ಸಂಸ್ಕೃತಿ ಅಭಿಯಾನದ ಅನ್ನುತ್ತಾ ಎಲ್ಲಾ ಸಭೆಗಳಲ್ಲೂ ಮೀಸಲಾತಿ ಕುರಿತೇ ಹೇಳುತ್ತಾರೆ. ಅವರಿಗೆ ನಿಜವಾಗಿಯೂ ತಾತ್ವಿಕವಾಗಿ ಬಸವ ತತ್ವದಲ್ಲಿ ನಂಬಿಕೆ ಇದ್ದರೆ ಮೀಸಲಾತಿ ಕೇಳಬಾರದು. ಜಾತಿಯಿಂದ ಲಿಂಗಾಯಿತರಾಗಿ ಕೇಳುವುದರಲ್ಲಿ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ.ಪೂರ್ಣ ವಿಡಿಯೋ ಅಂತರ್ಜಾಲದಲ್ಲಿ ಇದ್ದರೆ ನೋಡಿ.
ಶ್ರೇಣೀಕೃತ ಮತ್ತು ಜಾತಿ ಆಧಾರದಲ್ಲಿನ ಸಮಾಜದಲ್ಲಿ ಬದುಕುತ್ತಿದ್ದೇವೆ. ಊಟ ಮತ್ತು ಕುಡಿಯಲು ನೀರು ಕೊಡುವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಗೆ ಜಾತಿಯೇ ಒಂದು ದೊಡ್ಡ ಕಾರಣವಾಗಿದೆ. ಅದನ್ನು ಹೋಗಲಾಡಿಸಲು ಬಸವಣ್ಣನವರು ಮಾಡಿದ ಪ್ರಯತ್ನದಿಂದ ನಾವು ನೀವು ಈ ಸಮಾಜದಲ್ಲಿ ಅಲ್ಪ ಸ್ವಲ್ಪವಾದರೂ ಮರ್ಯಾದೆಯಿಂದ ಬದುಕುತ್ತಿದ್ದೇವೆ. ಅದೇ ಕಾರಣಕ್ಕೆ ನಮ್ಮೆಲ್ಲರ ಮಠ ಕೂಡ ತನ್ನ ಅಸ್ತಿತ್ವ ಕಂಡುಕೊಂಡಿರುವುದು. ಸುಮಾರು 900 ವರ್ಷಗಳೇ ಆಗುತ್ತಾ ಬಂತಲ್ಲ ಏಕೆ ಯಾರಿಗೂ ಜಾತಿ ನಿರ್ಮೂಲನೆ ಮಾಡಲು ಆಗುತ್ತಿಲ್ಲ. ಈವತ್ತಿನ ಸಂದರ್ಭದಲ್ಲಿ ಮೀಸಲಾತಿಯ ಅವಶ್ಯಕತೆಯಿದೆ. ಅಭಿಯಾನದ ಬಗ್ಗೆ ಅವರಿಗೆ ಅಸಮಾಧಾನವಿದ್ದರೆ ನೇರವಾಗಿ ಗುರುಗಳು ಹೇಳಬಹುದಿತ್ತು.
ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು, ಲಿಂಗಾಯತರು ಹಿಂದೂಗಳಲ್ಲ ಅಂತ ಭಾಷಣ ಮತ್ತು ಲೇಖನಗಳನ್ನು ಬರೆದಿದ್ದ ಪೂಜ್ಯರು, ಸೇಮೀಕ್ಷೆಯಲ್ಲಿ ಹಿಂದೂಗಳು ಎಂದು ಬರೆಯಿಸಬೇಕು ಅನ್ನುವ ಹೇಳಿಕೆ ಕೊಡುವ ಹಂತಕ್ಕೆ ಹೋಗಲು ಕಾರಣಗಳೇನು? ಈಗಾಗಲೇ ಲಿಂಗಾಯತ ಸಮಾಜವನ್ನು ವೀರಶೈವ ಪಂಚಾಚಾರ್ಯರು ಮತ್ತು ವೈದಿಕಶಾಹಿಗಳು ಕೇವಲ ರಾಜಕೀಯ ಮತ್ತು ಅಧಿಕಾರದ ಲಾಭಕ್ಕಾಗಿ ಹರಿದು ಮುಕ್ಕುತ್ತಿದ್ದಾರೆ. ಇಂತಹ ಗೊಂದಲದ ಗೂಡಾಗಿರುವ ಸಂದರ್ಭದಲ್ಲಿ ಪೂಜ್ಯರು ಪುನಃ ಲಿಂಗಾಯತರನ್ನು ಹಿಂದೂ ತೆಕ್ಕೆಗೆ ತಳ್ಳಿ ಶೂದ್ರರನ್ನಾಗಿ ಮಾಡುವ ಆಲೋಚನೆಯಲ್ಲಿದ್ದಾರೆಯೇ ಹೇಗೆ?
ಯಾವುದೇ ಒಂದು ವ್ಯವಸ್ಥೆ ಬದಲಾವಣೆ ಆಗಬೇಕು ಅಂದರೆ ಅದಕ್ಕೊಂದು ಮಾರ್ಗ ಇರುತ್ತದೆ.
ಮಧ್ಯದಲ್ಲಿ *ಸ್ವತಂತ್ರ ಧರ್ಮ* ಮಾನ್ಯತೆ ಪಡೆದಿರುವ ಧರ್ಮಗಳು ಯಾವುದೋ ಇನ್ನೊಂದು ವ್ಯವಸ್ಥೆಯಲ್ಲಿ ಗುರುತಿಸಿಕೊಂಡು ಇರುತ್ತವೆ. ಉದಾಹರಣೆಗೆ ಹಿಂದೂ ಧರ್ಮದಲ್ಲಿದ್ದ ಜೈನ್, ಮೊದಲು ಧರ್ಮ – ಹಿಂದೂ, ಜಾತಿ – ಜೈನ್ ಇದ್ದು, ಕಾಲಾಂತರದಲ್ಲಿ ಜೈನ ಜಾತಿ, ಧರ್ಮ (ಮತ)ಆಗಿ ಮಾನ್ಯತೆ ಪಡೆದಿದೆ.
ಹಾಗೇ *ಹಿಂದೂ – ಧರ್ಮ* ಭಾಗ ಆಗಿ *ಜಾತಿ – ಲಿಂಗಾಯಿತ* ,ಮುಂದೆ ಒಂದು ದಿನ ಅದೇ ದಾರಿಯಲ್ಲಿ ಸಾಗಬೇಕು.
ಸರ್ಕಾರಗಳು ವೀರಶೈವ ಲಿಂಗಾಯಿತ ಅಂತ ಕಳಿಸುತ್ತಿವೆ.
ನಾವು *ಜಾತಿ ಲಿಂಗಾಯಿತ* ಅಂತ ಬರೆದರೆ ಮುಂದೆ ಒಂದು ದಿನ ಲಿಂಗಾಯಿತ ಜಾತಿ ವಿಶಿಷ್ಟ ಬೇರೆ ಆಚರಣೆ ಹೊಂದಿವೆ, ಹಾಗಾಗಿ ಲಿಂಗಾಯಿತ ಮಾನ್ಯತೆ ಕೊಡಿ ಅನ್ನಬಹುದು.
ಸ್ವತಂತ್ರ ಧರ್ಮ ಅಂತ ಸಾಬೀತು ಪಡಿಸಬೇಕಾಗಿರುವುದು ಕೋರ್ಟ್ ನಲ್ಲಿ.
ಎರಡು ದಾರಿ ಇವೆ.
1) ಈಗಾಗಲೇ ಶಿಫಾರಸ್ಸು ಮಾಡಿರುವಂತೆಯೇ *ವೀರಶೈವ ಲಿಂಗಾಯಿತ* ಅಂತ ಬೇಕು ಅಂದರೆ, ಧರ್ಮ ಸ್ಥಾಪಕ,ಕಾಲ,ಗ್ರಂಥ ಇವುಗಳನ್ನು ಸಾಬೀತು ಪಡಿಸಬೇಕು.
ಬಸವಣ್ಣ, 12 ನೇ ಶತಮಾನ, ವಚನಸಾಹಿತ್ಯ ಅಂತ ಹೇಳಲು ವೀರಶೈವರು ಅಡ್ಡಿ ಆಗಿದ್ದಾರೆ.ಅದು ಸಾಧ್ಯ ಇಲ್ಲ. ವಾಪಾಸ್ ತರಿಸಿ ಮತ್ತೊಮ್ಮೆ ಪ್ರಯತ್ನ ಮಾಡಲು ಸರ್ಕಾರಗಳು ಸಹಕರಿಸಲ್ಲ.
2 ) ವೀರಶೈವವನ್ನೇ ಬಿಟ್ಟು ಹೋಗಬೇಕು. ಎಲ್ಲಾ ಉಪಜಾತಿಗಳು ಲಿಂಗಾಯಿತ ಜಾತಿ ನಂತರ (ಒಳಗೆ) ಉಪಜಾತಿ ಬರುವಂತೆ ಬರೆಯಿಸಿದಾಗ, ನಮ್ಮದೇ *ಲಿಂಗಾಯಿತ* ಜಾತಿಯನ್ನು *ಧರ್ಮ* ಶಿಫಾರಸ್ಸಿಗೆ ಕಳಿಸಲು ಒತ್ತಡ ಹೇರಬಹುದು.
ವೀರಶೈವ ಲಿಂಗಾಯಿತರು ಅವರ ಧರ್ಮಕ್ಕೆ ಬೇಕಿದ್ದರೆ ಹೋರಾಡಿಕೊಳ್ಳಲಿ. ರೇಣುಕಾರ್ಯ,ಕ್ರಿಸ್ತಪೂರ್ವ,ಸಿದ್ಧಾಂತ ಶಿಖಾಮಣಿ ಅಂತ ಬೇಕಿದ್ದರೆ ಸಾಬೀತು ಮಾಡಿಕೊಳ್ಳಲಿ.
ಎತ್ತರ ಕುರ್ಚಿ ಬೇಕು ಅನ್ನುತ್ತಿದ್ದವರು (ಐದು ಜನ), ಮೊನ್ನೆ ಹುಬ್ಬಳ್ಳಿಯಲ್ಲಿ ಎಲ್ಲರಂತೆ ಕುಳಿತಿದ್ದರು.ಅದು ಬದಲಾವಣೆಯ ಗಾಳಿ.ಮುಂದೆ ಒಂದುದಿನ ಅವರಿಗೂ ಅರ್ಥ ಆಗಿ ತಿಳಿದುಕೊಳ್ಳುತ್ತಾರೆ.
*ಆತುರಗಾರನಿಗೆ ಬುದ್ಧಿ ಮಟ್ಟ* ಎನ್ನುವಂತೆ ಸಧ್ಯ ಸಂವಿಧಾನ ಮಾನ್ಯತೆ ಇಲ್ಲದ ಧರ್ಮವನ್ನು ಹೇಳಿಕೊಳ್ಳುವ ಬದಲು, ಈಗ ಸರಿಯಾಗಿ ಜಾತಿ *ಲಿಂಗಾಯಿತ* ಅಂತ ಬರೆಯಿಸಿ ಮುಂದೆ *ಧರ್ಮ* ಮಾನ್ಯತೆ ಕೇಳುವುದು ಜಾಣ ನಡೆ.
ಹಾಗಾಗಿ ಆತುರ ಇಲ್ಲದೇ ಕಾನೂನು ತಜ್ಞರ ಸಲಹೆ ಪಡೆದು ನಿರ್ಧಾರ ಕೈಗೊಂಡಿರುವ *ಸಿರಿಗೆರೆ ಮಠ* ದ ನಡೆ ಸರಿ ಇದೆ.
ಅಧಿಕೃತ ಮಾನ್ಯತೆಗಾಗಿ ಹೋರಾಡಲು ಸಿದ್ಧತೆ ಮಾಡಿಕೊಳ್ಳಬೇಕು.ಮೊದಲು *ವೀರಶೈವ ಲಿಂಗಾಯಿತ* ಅಲ್ಲ *ಲಿಂಗಾಯಿತ ವೀರಶೈವ* ಅದನ್ನು ಸಾಧಿಸಿ ಮುಂದಿನದ್ದು.
ಎಲ್ಲಿಯ ವರೆಗೆ ಸರ್ಕಾರ *ವೀರಶೈವ ಲಿಂಗಾಯಿತ* ಅಂತ ಶಿಫಾರಸ್ಸು ಮಾಡುತ್ತದೋ ಅಲ್ಲಿಯ ವರೆಗೆ ಕಷ್ಟ.
ಹಾಗಾಗಿ ಮೊದಲು ಲಿಂಗಾಯಿತದ ಹಿಂದೆ ಇರುವ ವೀರಶೈವವನ್ನ ಇರಬೇಕಾದುದು ಅಲ್ಲಿ ಅಲ್ಲ ಅಂತ ಅದರ ಜಾಗ ಗೊತ್ತುಪಡಿಸಬೇಕು.
ಆಗ ನಡೆಯಲು ಅನುಕೂಲ ಆಗುತ್ತದೆ.
ಅದಕ್ಕೆ ಅಧಿಕೃತ ಮಾನ್ಯತೆಗಾಗಿ ಹೋರಾಡಲು ಸಿದ್ಧತೆ ಮಾಡಿಕೊಳ್ಳಬೇಕು.ಮೊದಲು *ವೀರಶೈವ ಲಿಂಗಾಯಿತ* ಅಲ್ಲ *ಲಿಂಗಾಯಿತ ವೀರಶೈವ* ಅದನ್ನು ಸಾಧಿಸಿ ಮುಂದಿನದ್ದು.
*ಲಿಂಗಾಯಿತ – ವೀರಶೈವ*
ಸರಿ
*ವೀರಶೈವ – ಲಿಂಗಾಯಿತ* ತಪ್ಪು.
ಈಗ ಮೊದಲು ಈ ಕೆಲಸ ಆಗಬೇಕು. ನಂತರ ಮಾನ್ಯತೆ ವಿಚಾರ.

Mallikarjun ಅವರೇ ಬಸವ ಸಂಸ್ಕೃತಿ ಅಭಿಯಾನದಲ್ಲಿ ಯಾವ ಒಬ್ಬ ಸ್ವಾಮೀಜಿಯು ಮೀಸಲಾತಿ ಬೇಕೆಂದು ಕೇಳಿಲ್ಲ. ನಮಗೆ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ಬೇಕೆಂದು ಹೇಳಿದ್ದಾರೆ. ನಮಗೆ ಮೀಸಲಾತಿ ಬೇಡ, ನಮ್ಮ ಸ್ವತಂತ್ರ ಧರ್ಮಕ್ಕೆ ಸಂವಿಧಾನಿಕ ಅಲ್ಪಸಂಖ್ಯಾತರ ಸ್ಥಾನಮಾನ ಬೇಕು. ಇದೊಂದೇ ನಮ್ಮ ಬೇಡಿಕೆ.
ಆ ಹಿನ್ನೆಲೆಯಲ್ಲಿ “ಲಿಂಗಾಯಿತ ಸ್ವತಂತ್ರ ಹೋರಾಟದ ಹಿಂದೆ ಪ್ರಯೋಜನ ದೃಷ್ಟಿ ಇದೆಯೇ ಹೊರತು,ತಾತ್ವಿಕ ದೃಷ್ಟಿ ಇಲ್ಲ.” ಎಂದು ಹೇಳಿರುವುದನ್ನೇ ಈ ರೀತಿ ವ್ಯತಿರಿಕ್ತ ಅಭಿಪ್ರಾಯ ಬರುವಂತೆ ಬರೆದಿದ್ದಾರೆ.
ಹೇಳೋದು ಮತ್ತು ಹೆಸರು ಇರುವುದು “ಬಸವ ಸಂಸ್ಕೃತಿ ಅಭಿಯಾನ” ಆದರೆ ನಿಜವಾಗಿಯೂ ಮಾಡುತ್ತಿರುವುದು “ಲಿಂಗಾಯಿತ ಜಾತಿ ಜಾಗೃತಿ ಅಭಿಯಾನ” ಅದನ್ನೇ ನೇರವಾಗಿ ನಾವು ಜಾತಿ ಜಾಗೃತಿ ಮಾಡುತ್ತಿದ್ದೇವೆ ಅಂದಿದ್ದರೆ ಚೆನ್ನಾಗಿತ್ತು .ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಅಭಿಯಾನ ಮಾಡುತ್ತಿದ್ದೇವೆ ಅಂದಿದ್ದರೆ ಇನ್ನೂ ಒಳ್ಳೆಯದಿತ್ತು.
ನೀವು ಹೇಳುತ್ತಿರುವ ವಿಷಯ ಸ್ವಲ್ಪ ಹಳೆಯದು. “ವೀರಶೈವ ಲಿಂಗಾಯತ” ಧರ್ಮದ ಮಾನ್ಯತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ತಿರಸ್ಕೃತಗೊಂಡನಂತರ ಕರ್ನಾಟಕ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ನೇಮಿಸಿದ್ದ ಸಮಿತಿಯ ಶಿಫಾರಸ್ಸಿನಂತೆ ವೀರಶೈವವನ್ನು ಹೊರತುಪಡಿಸಿ “ಲಿಂಗಾಯತ” ಧರ್ಮಕ್ಕೆ ಮಾನ್ಯತೆ ಕೊಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ತನ್ನ ಶಿಫಾರಸ್ಸನ್ನು ಕಳುಹಿಸಿತ್ತು. ಸಂಘಪರಿವಾರದ ಅಂಗವಾಗಿರುವ ಬಿಜೆಪಿ ಸರ್ಕಾರ ಅದರ ಹಿಂದೂ ಧರ್ಮ ರಾಜಕಾರಣದ ಕಾರಣಕ್ಕಾಗಿ ತಿರಸ್ಕರಿಸದೆ ಕೆಲವು ಕಾರಣಗಳಿಗಾಗಿ ಮಾನ್ಯ ಮಾಡುವುದು “ಕಷ್ಟಸಾಧ್ಯ” ಎಂದು ಹಿಂದೆ ಕಳುಹಿಸಿದೆ. ಆ ಕಾರಣಗಳಿಗೆ ಸೂಕ್ತ ಪ್ರತಿಕ್ರಿಯೆಗಳೊಟ್ಟಿಗೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಾಗಿದೆ. ಈ ಹಂತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಹೆಚ್ಚಿನ ಒತ್ತಡ ತರಲು ಲಿಂಗಾಯತ ಸಮಾಜ ಒಂದು ದೊಡ್ಡ ಹೆಜ್ಜೆ ಇಡುವುದರ ಮೂಲಕ ಕ್ರಾಂತಿಕಾರಕ ಹೆಜ್ಜೆಗಳನ್ನು ಇಡಲೇ ಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. ಈ ಕಾರಣಕ್ಕಾಗಿ ಇತರೆ ಧರ್ಮದ ಸ್ಥಳದಲ್ಲಿ “ಲಿಂಗಾಯತ” ಎಂದು ಬರೆಸುವುದು ಈ ಸಂಧರ್ಭದಲ್ಲಿ ಹೆಚ್ಚು ಸೂಕ್ತವಾಗಿದೆ. ಲಿಂಗಾಯತ ಸಮಾಜದ ಮಠಾಧೀಶರುಗಳು ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಂದೇ ಕಂಠದಿಂದ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಮಾಡುವ ಸುಸಂದರ್ಭವಿದು. ಇಂತಹ ನಿರ್ಣಾಯಕ ಸಂದರ್ಭದಲ್ಲಿ ಗೊಂದಲಗಳನ್ನು ಸೃಷ್ಟಿಸಿದರೆ ಮತ್ತು ಆ ಮೂಲಕ ತಮ್ಮ ತಮ್ಮ ಭಕ್ತ ಸಮೂಹಗಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರೆ ಮುಂದೆ ಸಮಾಜ ಕ್ಷಮಿಸುವುದಿಲ್ಲ ಅನ್ನುವ ಅರಿವು ಇರುವುದು ಒಳ್ಳೆಯದು.