ಸೊಲ್ಲಾಪುರ
ಇಲ್ಲಿಯ ಬಸವಕೇಂದ್ರದಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವಪರ ಸಂಘಟನೆಗಳ ಸಭೆಯಲ್ಲಿ ಸಾಂಸ್ಕೃತಿಕ ನಾಯಕ, ಜ್ಞಾನಜ್ಯೋತಿ ಮಹಾತ್ಮ ಬಸವಣ್ಣವರ ಕುರಿತು ಹಗುರವಾಗಿ ಮಾತನಾಡಿದ ಕರ್ನಾಟಕದ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳರವರ ಹೇಳಿಕೆಯನ್ನು ಭಾನುವಾರ ಖಂಡಿಸಲಾಯಿತು. ಅವರ ನಡೆ ವಿರುದ್ಧ ಘೋಷಣೆ ಕೂಗಲಾಯಿತು.
ಬಸವ ಸೆಂಟರದ ಅಧ್ಯಕ್ಷ ರಾಜಕುಮಾರ ಮಾಯನಾಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಪಾಟೀಲರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಯಿತು.
ಜಾಗತಿಕ ಲಿಂಗಾಯತ ಮಹಾಸಭಾದ ಸೊಲ್ಲಾಪುರ ಜಿಲ್ಲಾ ಅಧ್ಯಕ್ಷ ಶಿವಾನಂದ ಗೋಗಾವ ಮಾತನಾಡಿ, ಜಗತ್ತಿನ ಜ್ಞಾನ ಜ್ಯೋತಿಯಾಗಿರುವ ಮಹಾತ್ಮ ಬಸವಣ್ಣನವರು ಮನುಕುಲದ ಉದ್ಧಾರಕರು. ಸರ್ವ ಮನುಕುಲಕ್ಕೆ ಒಳಿತನ್ನು ಬಯಸಿದ ಮಹಾತ್ಮರು ಅಂಥವರ ಬಗ್ಗೆ ಸ್ವತ: ಲಿಂಗಾಯತರಾಗಿ, ಬಸವಣ್ಣನವರ ನಾಡಿನವರೇ ಆದ, ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಬೇಜವಾಬ್ದಾರಿಯುತವಾಗಿ, ಬಸವಣ್ಣನವರ ಕುರಿತು ಮಾತನಾಡಿದ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು.
ಅವರಿಗೆ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ಪಕ್ಷದವರು ಅವರನ್ನು ತಕ್ಕ ಶಾಸ್ತಿ ಮಾಡಬೇಕು. ಇಲ್ಲವಾದರೆ ತಾವು ಮಹಾರಾಷ್ಟ್ರದಲ್ಲಿ ತೀವ್ರವಾದ ಪ್ರತಿಭಟನೆ ಮಾಡುವದಾಗಿ ಹೇಳಿದರು.
ಮಹಿಳಾ ಘಟಕದ ಅಧ್ಯಕ್ಷೆ ರಾಜಶ್ರೀ ಥಳಂಗೆ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಮುಲಗೆ, ಚನ್ನವೀರ ಭದ್ರೇಶ್ವರಮಠ, ಬಸವ ಬ್ರಿಗೇಡ್‌ನ ಅಮಿತ್ ರೋಡಗೆ ಸೇರಿದಂತೆ ಹಲವರು ಮಾತನಾಡಿದರು.
ಉಪಾಧ್ಯಕ್ಷ ರಾಜೇಂದ್ರ ಖಸಗಿ, ನಗರ ಅಧ್ಯಕ್ಷ ವಿಜಯಕುಮಾರ ಭಾವಿ, ಯುವ ಘಟಕ ಅಧ್ಯಕ್ಷ ಶಿವರಾಜ ಕೊಟಗಿ, ಶಿವರಾಯ ತೇಲಿ, ರಾಜಕುಮಾರ ಲೋಕಾಪುರೆ, ಅಮಿತ ಕಲಶೆಟ್ಟಿ, ಮೀನಾಕ್ಷಿ ಬಾಗಲಕೋಟೆ, ಬಸವರಾಜ ಲೋಹಾರ, ಡಾ. ಸಿಂದಗಿ, ಮಹಾದೇವಿ ತೇಲಿ ಸೇರಿದಂತೆ ಹಲವರು ಇದ್ದರು.
ಶರಣ ತತ್ವ ಕಮ್ಮಟ
ದಾವಣಗೇರಿಯ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ, ಬಸವದಳ ದಾವಣಗೆರೆ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಸೊಲ್ಲಾಪುರ ಮತ್ತು ಬಸವಪರ ಸಂಘಟನೆಗಳ ಸಹಯೋಗದಲ್ಲಿ ಡಿ ೨೭ ರಿಂದ ೩೦ ರವರೆಗೆ ಇಲ್ಲಿಯ ಲಿಂಗಶೆಟ್ಟಿ ಸಾಂಸ್ಕೃತಿಕ ಸಭಾಭವನದಲ್ಲಿ ಶರಣ ತತ್ವ ಕಮ್ಟಟ ಹಮ್ಮಿಕೊಂಡಿದ್ದು ಅದನ್ನು ಯಶಸ್ಸಿಗೊಳಿಸುವಂತೆ ಮಾಡಬೇಕಾದ ಯೋಜನೆಗಳು ಕುರಿತಂತೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು.
ಇದೆ ರೀತಿ ಹೋರಾಟ ಮುಂದುವರಿಯಲಿ ತಮಗೆಲ್ಲ ಶರಣುಗಳು🙏🙏