ಸ್ವರ್ಗಕ್ಕೆ ಹೋಗಲು ಸಂಸ್ಕೃತ ವೀಸಾವಿದ್ದಂತೆ, ಸ್ವರ್ಗಕ್ಕೆ ಹೋಗಬಯಸುವವರು ಸಂಸ್ಕೃತ ಭಾಷೆಯನ್ನು ಕಲಿಯಬೇಕು, ಎಂದು ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪುತ್ತಿಗೆ ಶ್ರೀಗಳ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ.
ಪರ್ಯಾಯ ಶ್ರೀಪುತ್ತಿಗೆ ಮಠ, ಶ್ರೀಕೃಷ್ಣ ಮಠದ ವತಿಯಿಂದ ರವಿವಾರ ರಾಜಾಂಗಣದಲ್ಲಿ ನಡೆದ ಶ್ರೀಕೃಷ್ಣ ಮಾಸೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡುತ್ತಿದ್ದರು.
ಸಂಸ್ಕೃತ ಭಾಷೆಯಲ್ಲಿ ಮಾತನಾಡುತ್ತಾ ಸಂಸ್ಕೃತ ಸರಳ, ಸುಂದರ ಮತ್ತು ಸುಲಭವಾದ ಭಾಷೆಯಾಗಿದ್ದು, ಇದು ವಿಶ್ವಭಾಷೆ, ದೇವಭಾಷೆಯಾಗಿದೆ. ಎಲ್ಲಾ ಭಾಷೆಗಳ ಮೂಲ ಮತ್ತು ಜನನಿ ಸಂಸ್ಕೃತವಾಗಿದೆ.
ಸರ್ವ ಭಾಷೆಗಳಿಗೆ ಮೂಲ ಸಂಸ್ಕೃತ. ತುಳು, ಕನ್ನಡ, ಮಲಯಾಳಂ ಹಿಂದಿ, ತಮಿಳ್, ತೆಲುಗು ಭಾಷೆಗಳು ಹುಟ್ಟಿಕೊಂಡಿರುವುದೇ ಸಂಸ್ಕೃತದಿಂದ. ಪಿತಾದಿಂದ ಫಾದರ್, ಮಾತಾದಿಂದ ಮದರ್ ಹುಟ್ಟಿಕೊಂಡಿದೆ. ಸಮಗ್ರವೂ ಸಂಸ್ಕೃತ ಭಾಷೆಯಿಂದ ಹುಟ್ಟಿಕೊಂಡಿದೆ, ಎಂದು ಹೇಳಿದರು.