ಸುಳ್ಳುಸುದ್ದಿ ಹಬ್ಬಿಸುವ ಖದೀಮರಿಗೆ ಮಠದಲ್ಲಿ ಪ್ರವೇಶವಿಲ್ಲ: ಸಿರಿಗೆರೆ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಸಿರಿಗೆರೆ:

‘ತರಳಬಾಳು ಬೃಹನ್ಮಠದ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಅಂಥ ಖದೀಮರಿಗೆ ಇನ್ನು ಮುಂದೆ ಮಠಕ್ಕೆ ಪ್ರವೇಶವಿಲ್ಲ’ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಸಿರಿಗೆರೆ ಸಮೀಪದ ಕೊಳಹಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಬಸವೇಶ್ವರ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸುಳ್ಳು ಸುದ್ದಿ ಹಬ್ಬಿಸುತ್ತಿರುವುದನ್ನು ನೋಡಿಕೊಂಡು ಮೌನವಾಗಿರಲು ಸಾಧ್ಯವಿಲ್ಲ. ಇಂತಹ ಪರಿಪಾಠವನ್ನು ಕೂಡಲೇ ನಿಲ್ಲಿಸಬೇಕು. ಘನತೆ ಹೊಂದಿರುವ ಪೀಠದ ವಿರುದ್ಧ ದಾವಣಗೆರೆಯ ರೆಸಾರ್ಟ್‌ನಲ್ಲಿ ಸಭೆ ನಡೆಸಿದ್ದು ನನಗೆ ನೋವು ತಂದಿದೆ. ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಇಂತಹ ಸಭೆಯಲ್ಲಿ ಭಾಗವಹಿಸುತ್ತಾರೆಂದು ಭಾವಿಸಿರಲಿಲ್ಲ’ ಎಂದರು.

“ಜನರ ಕಷ್ಟಕ್ಕೆ ನೆರವಾಗುವ ನಾವು ಪೂರ್ವಾಶ್ರಮದ ತಾಯಿ ಅನಾರೋಗ್ಯದ ಸಂದರ್ಭದಲ್ಲಿಯೂ ನಾವು ಅವರಿಗೆ ನೆರವು ನೀಡಿಲ್ಲ” ಎಂದು ಭಾವುಕರಾದರು.

‘ಗುರುವಿನ ಪರವಾಗಿ ಚಿಂತಕರು, ಹೋರಾಟಗಾರರು, ರೈತರು ಸದಾ ನಿಲ್ಲುತ್ತಾರೆ’ ಎಂದು ಸಾಧು ಸದ್ಧರ್ಮದ ಎಚ್.ಆರ್.‌ಬಸವರಾಜಪ್ಪ ತಿಳಿಸಿದರು.

Share This Article
Leave a comment

Leave a Reply

Your email address will not be published. Required fields are marked *