ಕ್ರಾಂತಿಯೋಗಿ ಬಸವಣ್ಣನವರು ಹೋರಾಟವನ್ನೇ ಮಾಡಲಿಲ್ಲ, ಅಪಾಯ ಬಂದಾಗ ಹೇಡಿಯಂತೆ ಹೊಳೆಗೆ ಹಾರಿಕೊಂಡರು ಅನ್ನುವ ಅರ್ಥದಲ್ಲಿ ಮಾತನಾಡಿರುವ ಶಾಸಕ ಬಸವನ ಗೌಡ ಪಾಟೀಲ ಯತ್ನಾಳ್ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಯತ್ನಾಳ್ ಅವರ ಹೇಳಿಕೆ ಖಂಡಿಸಿ ಹಳಿಯಾಳದ ಸುಮಾ ಅಂಗಡಿ ತಮ್ಮ ವಿಡಿಯೋ ಪ್ರತಿಕ್ರಿಯೆ ನೀಡಿದ್ದಾರೆ.