ಮೈಸೂರು
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಜರುಗಿದ ಸಾಮೂಹಿಕ ವಿವಾಹದಲ್ಲಿ 155 ಜೋಡಿಗಳು ನವಜೀವನಕ್ಕೆ ಸೋಮವಾರ ಕಾಲಿಟ್ಟರು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಿದರು.
3 ಲಿಂಗಾಯತ, 84 ಪರಿಶಿಷ್ಟ ಜಾತಿ, 22 ಪರಿಶಿಷ್ಟ ಪಂಗಡ, 22 ಹಿಂದುಳಿದ ವರ್ಗ, 23 ಅಂತರ್ಜಾತಿ, 3 ಅಂಗವಿಕಲ, 17 ತಮಿಳುನಾಡಿನ ಜೋಡಿಗಳು ವಿವಾಹವಾದರು.
2000 ರಿಂದ 2024ರ ವರೆಗೆ ಶ್ರೀ ಕ್ಷೇತ್ರದ ಸಾಮೂಹಿಕ ವಿವಾಹದಲ್ಲಿ 3,194 ಜೋಡಿಗಳು ಸತಿಪತಿಗಳಾಗಿದ್ದಾರೆ.
