ಒಂದು ಪ್ರಖ್ಯಾತ ಕಲಾವಿದರ ತಂಡ 20 ಅಡಿ ಉದ್ದ ಮತ್ತು 10 ಅಡಿ ಅಗಲದ ಚಿತ್ರವನ್ನು ಕ್ಯಾನ್ವಾಸ್ ಮೇಲೆ ತೈಲ ಮಾಧ್ಯಮದಲ್ಲಿ ರಚಿಸಿದ್ದಾರೆ
ಬೆಳಗಾವಿ
ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರು ಸ್ಥಾಪಿಸಿದ ‘ವಿಶ್ವದ ಮೊದಲ ಸಂಸತ್ತು’ ಅನುಭವ ಮಂಟಪದ ಬೃಹತ್ ತೈಲವರ್ಣ ಚಿತ್ರ ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ ಅನಾವರಣಗೊಳ್ಳಲಿದೆ.
20 ಅಡಿ ಉದ್ದ ಮತ್ತು 10 ಅಡಿ ಅಗಲದ ಈ ವಿಶೇಷ ಚಿತ್ರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಲಿದ್ದಾರೆ. ಯು.ಟಿ.ಖಾದರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಯಾಗಿರುವರು.
ಒಂದು ಪ್ರಖ್ಯಾತ ಕಲಾವಿದರ ತಂಡ ಚಿತ್ರವನ್ನು ಕ್ಯಾನ್ವಾಸ್ ಮೇಲೆ ತೈಲ ಮಾಧ್ಯಮದ ಮೂಲಕ ರಚಿಸಿದ್ದಾರೆ. ಇದು ಬೆಂಗಳೂರು ಚಿತ್ರಕಲಾ ಪರಿಷತ್ತಿನ ಶ್ರೀ ಸತೀಶರಾವ ಶಿವಮೊಗ್ಗ, ಶ್ರೀಕಾಂತ ಹೆಗಡೆ ಸಿದ್ಧಾಪುರ, ಶೇಷಾದ್ರಿಪುರಂ ಕೆನ್ ಸ್ಕೂಲ್ ಕಲಾಶಾಲೆಯ ಶ್ರೀ ಅಶೋಕ ಯು. ಜಗಳೂರು, ರಾಜಾ ರವಿವರ್ಮ ಕಲಾ ಶಾಲೆಯ ಶ್ರೀಮತಿ ರೂಪಾ ಎಂ.ಆರ್. ಶ್ರೀ ವೀರಣ್ಣ ಮಡಿವಾಳಪ್ಪ ಬಬ್ಲಿ, ಬೈಲಹೊಂಗಲ ಮತ್ತು ಶ್ರೀ ಮಹೇಶ ನಿಂಗಪ್ಪ ದಫಲಾಪುರ, ಜಮಖಂಡಿ ಅವರ ಪರಿಶ್ರಮದ ಫಲ.
ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪವನ್ನು ಜನಮಾನಸದಲ್ಲಿ ಉಳಿಸುವ ಈ ಪ್ರಯತ್ನ ಬಿ.ಎಲ್.ಶಂಕರ ನೇತೃತ್ವದಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾಸಕರಿಗೆ ಪತ್ರ ಬರೆದಿರುವ ಸಭಾಧ್ಯಕ್ಷ ಯು.ಟಿ. ಖಾದರ್ ಅನುಭವ ಮಂಟಪ ಸಾಂಸ್ಕೃತಿಕ ನಾಯಕ ಬಸವಣ್ಣನವರ ನೇತೃತ್ವದಲ್ಲಿ ಸ್ಥಾಪಿಸಲಾಗಿದ್ದ ಪ್ರಪಂಚದ ಮೊದಲ ಸಂಸತ್ತಾಗಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.
ಅನುಭವ ಮಂಟಪವು ಸರ್ವಜನಾಂಗದ ಶರಣರಾದ ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಮೇದಾರ ಕೇತಯ್ಯ, ಬಹುರೂಪಿ ಚೌಡಯ್ಯ, ಕೇತಲದೇವಿ, ದುಗ್ಗಳೆ, ಕಾಳವ್ವ ಹೀಗೆ ಸಮಾಜದ ಎಲ್ಲಾ ವರ್ಗಗಳ ಜನರ ಆಚಾರ-ವಿಚಾರಗಳ ಚಿಂತನ-ಮಂಥನದ ಕೇಂದ್ರವಾಗಿತ್ತು, ಅಲ್ಲಮಪ್ರಭು ಅದರ ಮೊದಲ ಸಭಾಧ್ಯಕ್ಷರಾಗಿದ್ದರು, ಎಂದು ಪತ್ರದಲ್ಲಿ ಹೇಳಿದ್ದಾರೆ.
ಉತ್ತಮಕಾಯ೯ ಶ್ಲಾಘನೀಯ,
ತಡವಾಗಿಯಾದರೂ ಕನಾ೯ಟಕ ಸರ್ಕಾರದ ಈ ಕಾಯ೯ಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
ಒಳ್ಳೆಯ ಕೆಲಸ.
Realy great
Super job , Congratulations 🎉🎉🎉👏
ಅಲ್ಲಮಪ್ರಭು ಬಸವೇಶ್ವರ ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು ಎಂಬುದು ಇತಿಹಾಸ.. ಇಂದು ಕಾಂಗ್ರೆಸ್ ಸ್ಮರಣಾರ್ಥ ತೈಲ ಚಿತ್ರಪಟವನ್ನು ಸುವರ್ಣ ಸೌಧದಲ್ಲಿ ಹಾಕುತ್ತಿರುವುದು ಶ್ಲಾಘನೀಯವಾದ ವಿಚಾರವೇ ಸರಿ… ಅದರಂತೆ ಅಂದಿನ ಅನುಭವ ಮಂಟಪದಲ್ಲಿ ನಡೆಯುತ್ತಿದ್ದಂತಹ ಚರ್ಚೆಗಳು ಸಾಮಾಜಿಕವಾಗಿ ಜನರನ್ನ ಮುಖ್ಯ ವಾಹಿನಿಗೆ ತರುವಂತ ಉದ್ದೇಶವಾಗಿತ್ತು… ಆತರ ಚರ್ಚೆಗಳು ಇಂದಿನ ಸಂಸತ್ತಿನಲ್ಲಿ ನಡೆಯಬೇಕು ಎಂಬುದು ನಮ್ಮ ಆಶಯ.. ಅದರ ಔಚಿತ್ಯವೂ ಕೂಡ
🙏🙏🙏🙏🙏🙏
ತುಂಬಾ ಚೆನ್ನಾಗಿದೆ. Visionof democracy ಎನ್ನುವುದರ ಮೂಲಕ ಪ್ರಜಾಪ್ರಭುತ್ವದ ನಿಜರೂಪವನ್ನು ಚಿತ್ರಿಸಲಾಗಿದೆ. ಆದರೆ ಒಂದು ಅಂಶ ಅಧ್ಯಕ್ಷ ಸ್ಥಾನ ವಹಿಸಿರುವ ಅಲ್ಲಮಪ್ರಭುವಿಗೆ ಕಾವಿ ಧರಿಸಿರುವುದು ಯಾಕೋ ಸರಿ ಕಾಣುವುದಿಲ್ಲ. ಶಾಂತಿಯ ಸಂಕೇತವಾದ ಬಿಳಿಯ ಬಟ್ಟೆಯನ್ನು ಧರಿಸಿದ್ದರೆ ಇನ್ನೂ ಉತ್ತಮವಾದ ಸಂದೇಶ ರವಾನೆಯಾಗುತ್ತಿತ್ತು. ಕಾವಿಯನ್ನು ಬಳಸಿರುವುದು ಸನಾತನಿಗಳ ವಿಕ್ಕತ ವ್ಯಾಖ್ಯಾನಗಳಿಗೆ ಅವಕಾಶ ಕೊಟ್ಟಂತಾಗಿದೆ. ಎಲ್ಲ ವಚನಕಾರರು ವೃತ್ತಿಪರರು ಯಾರು ಆಧ್ಯಾತ್ಮವನ್ನು ವೃತ್ತಿಯನ್ನಾಗಿ ಬಳಸಿರುವ ಅಂಶ ಕಾಣುವುದೇ ಇಲ್ಲ. ಆದುದರಿಂದ ಈ ಕಲೆಯ ನಿರ್ಮಾತೃಗಳು ಈ ಬದಲಾವಣೆಯನ್ನು ತಂದಲ್ಲಿ ಹೆಚ್ಚಿನ ಅರ್ಥ ವ್ಯಾಪ್ತಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ.