ಮೈಸೂರು
‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಸಿಕ್ಕಿದ್ದರೆ ಸಮುದಾಯದ ಉಪಪಂಗಡಗಳಿಗೆ ಸೌಲಭ್ಯ ಸಿಕ್ಕಿ ಸಮುದಾಯದ ಜನಸಂಖ್ಯೆ ಶೇ 17ರಿಂದ 30ರಷ್ಟು ಆಗುತ್ತಿತ್ತು’ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ಆಯೋಜಿರುವ ಮೂರು ದಿನಗಳ ‘ವೀರಶೈವ ಲಿಂಗಾಯತ ಬಿಸಿನೆಸ್ ಕಾಂಕ್ಲೇವ್’ನಲ್ಲಿ ಮಾತನಾಡಿದರು.
‘ಮೀಸಲಾತಿ ಕಾರಣಕ್ಕಾಗಿ ಲಿಂಗಾಯತ ಉಪ್ಪಾರ, ಕುಂಬಾರ, ಕುರುಬ, ಹಡಪದ, ಬಣಜಿಗ, ಗಾಣಿಗ, ಸಾದರ, ರೆಡ್ಡಿ ಮೊದಲಾದ ಉಪ ಪಂಗಡಗಳು ಲಿಂಗಾಯತ ಬದಲು ಹಿಂದೂ ಎಂದೇ ಬರೆಸಿವೆ. ಹೀಗಾಗಿ ಜಾತಿಗಣತಿಯಲ್ಲಿ ಸಮುದಾಯದ ಉಪ ಪಂಗಡಗಳು ಹರಿದು ಹಂಚಿಹೋಗಿವೆ’ ಎಂದು ಹೇಳಿದರು.
‘ಸ್ವತಂತ್ರ ಧರ್ಮ ಹೋರಾಟವನ್ನು ವಿರೋಧಿಸಿದವರಿಗೆ ಈಗ ಅರ್ಥವಾಗಿದೆ. ವೀರಶೈವ ಮಹಾ ಅಧಿವೇಶನದಲ್ಲಿ ಕಾಶಿ ಸ್ವಾಮೀಜಿ ಅವರಿಗೂ ಇದನ್ನೇ ಹೇಳಿರುವೆ. ಸುತ್ತೂರು, ಸಿದ್ದಗಂಗೆ, ಗದಗ ಸೇರಿದಂತೆ ಎಲ್ಲ ಮಠಗಳ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಿರ್ಣಯ ತೆಗೆದುಕೊಳ್ಳಬೇಕು. ಒಗ್ಗಟ್ಟಾಗಿದ್ದರೆ ಮಾತ್ರ ರಾಜಕೀಯ ಶಕ್ತಿಯಾಗಿ ಉಳಿಯುತ್ತೇವೆ. ಇಲ್ಲದಿದ್ದರೆ ನಿರಾಶರಾಗಿ ಹೋಗುತ್ತೇವೆ’ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ರಾಜ್ಯ ಶಾಸಕ ಗಣೇಶ್ ಪ್ರಸಾದ್, ನಿತೀಶ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
ಎಸ್.ಬಿ.ಪಾಟೀಲರು ಹಳೆಯ ಗಣತಿಯ ಗೆಜೆಟ್ ಗಳಲ್ಲಿ ಇರುವ ವಿಚಾರವನ್ನ ಉಲ್ಲೇಖಿಸಿ ಬಹಳ ಮಾತನಾಡಿದರು. ನನಗೇನು ಭಯವಿಲ್ಲ ನಾನು ಸತ್ಯವನ್ನೆ ಹೇಳುತಿದ್ದೇನೆ ಎಂದರು.
ಸ್ವತಂತ್ರ ಧರ್ಮದ ಮಾನ್ಯತೆಯಾದರೆ ಎಲ್ಲಾ ಒಳಪಂಗಡಗಳಿಗೂ ಅನುಕೂಲವಾಗಿ
.ಒಗ್ಗಟ್ಟಾಗಿ ಇರುತ್ತೇವೆ ಅಂದರು
ರಾಜಕೀಯ ನಾಯಕರಲ್ಲಿ ನಮ್ಮ ಲಿಂಗಾಯತ ಸಮಾಜಕ್ಕೆ ಇನ್ನೂ ವಿಶ್ವಾಸ ಇರುವುದೆ ನಮ್ಮ ಎಂ ಬಿ ಪಾಟೀಲ ಅವರಲ್ಲಿ ಯಾಕೆ ಲಿಂಗಾಯತ ಧರ್ಮದ ಬಗ್ಗೆ ಗುರು ಬಸವಣ್ಣನವರ ಬಗ್ಗೆ ಕಳಕಳಿ ಇರುವವರು ಒಬ್ಬರೆ ಶರಣ ಎಂ ಬಿ ಪಾಟೀಲ 2018 ರಲ್ಲಿ ಕೂಡಲಸಂಗಮದ ಶರಣ ಮೇಳದಲ್ಲಿ ಡಾ: ಮಾತಾಜಿ ಸ್ಪಷ್ಟವಾಗಿ ಹೆಳಿದ್ದಾರೆ ರಾಜಕೀಯದಲ್ಲಿ ಲಿಂಗಾಯತ ನಾಯಕ ಶರಣ ಎಂ ಬಿ ಪಾಟೀಲ ಅಂತ ಅದನ್ನ ಲಕ್ಷಾಂತರ ಶರಣರು ಒಪ್ಪಿದ್ದಾರೆ
ಎಂ ಬಿ ಪಾಟೀಲರ ಅಬಿಪ್ರಾಯ ಸರಿಯಾಗಿದೆ
ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಸಿಕ್ಕಿದ್ದರೆ ಸಮುದಾಯದ ಉಪಪಂಗಡಗಳಿಗೆ ಸೌಲಭ್ಯ ಸಿಕ್ಕಿ ಸಮುದಾಯದ ಜನಸಂಖ್ಯೆ ಶೇ ೧೭ರಿಂದ ೩೦ರಷ್ಟು ಆಗುತ್ತಿತ್ತು’ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದ ವಿಚಾರ ಸ್ಪಟಿಕದಂತೆ ಅತ್ಯಂತ ಪಾರದರ್ಶಕ ಹಾಗೂ ಸತ್ಯವಾಗಿದೆ.
ಬಸವ ಸ್ವತಂತ್ರ ಲಿಂಗಾಯತ ಧರ್ಮ ಆದರೆ ಲಿಂಗಾಯತ ಧರ್ಮದ ಉಪ ಪಂಗಡಗಳಿಗೆ ಈಗಿರುವ ಮಿಸಲಾತಿ ಜೋತೆಗೆ ಅಲ್ಪಸಂಖ್ಯಾತ ಸ್ಥಾನಮಾನ ದಲ್ಲಿಯು ಅವರಿಗೆ ದೊಡ್ಡ ಭವಿಷ್ಯ ಇದೆ. ಜೈ ಬಸವ ಇಷ್ಟ ಲಿಂಗಾಯತ ಧರ್ಮ.
ಸೂತ್ತೂರ ಶ್ರೀ ಗಳು ಸೇರಿ ಯಲ್ಲಾ ಮಠಾಧೀಶರು,ಲಿಂಗಾಯತ ಧರ್ಮ ಮಾನ್ಯತೆ ಪಡೆಯುವ ವಿಚಾರದಲ್ಲಿ ಒಗ್ಗಟ್ಟು ಪ್ರದಶ೯ನ ಮಾಡಬೆಕು.