ತಲೆ ಮೇಲೆ ವಚನ ಸಾಹಿತ್ಯ ಕಟ್ಟು ಹೊತ್ತು ನಡೆದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಣ್ಣ ಈ ಭೂಮಿಯ ಸಂಪತ್ತು

ಬೀದರ್‌

23ನೇ ವಚನ ವಿಜಯೋತ್ಸವದ ಅಂಗವಾಗಿ ನಗರದಲ್ಲಿ ಲಿಂಗಾಯತ ಧರ್ಮ ಗ್ರಂಥ ವಚನ ಸಾಹಿತ್ಯದ ಭವ್ಯ ಮೆರವಣಿಗೆ ಬುಧವಾರ ನಡೆಯಿತು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ, ಶಿವಯೋಗೇಶ್ವರ ಮಹಾಸ್ವಾಮಿ, ಶಿವಾನಂದ ಮಹಾಸ್ವಾಮಿ, ಡಾ.ಗಂಗಾಂಬಿಕಾ ಅಕ್ಕ ಅವರುಗಳು ನೂರಾರು ಶರಣ–ಶರಣೆಯರು ಜೊತೆ ಬಿಳಿ ವಸ್ತ್ರ ಧರಿಸಿ, ತಲೆ ಮೇಲೆ ವಚನ ಸಾಹಿತ್ಯದ ಕಟ್ಟು ಹೊತ್ತು ಹೆಜ್ಜೆ ಹಾಕಿದರು.

ನಗರದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಬಸವಗಿರಿ ತಲುಪಿತು. ಹೂವಿನಿಂದ ಅಲಂಕೃತವಾದ ವಚನ ಗ್ರಂಥ ಹೊತ್ತ ರಥವು ಮೆರವಣಿಗೆಯ ಕೇಂದ್ರ ಬಿಂದುವಾಗಿತ್ತು. ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಸಿದ್ಧರಾಮ, ಚೆನ್ನಬಸವಣ್ಣ ವೇಷಧಾರಿಗಳು ಮುಂಚೂಣಿಯಲ್ಲಿದ್ದು ಗಮನ ಸೆಳೆದವು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು “‘ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ’ ವಚನವನ್ನು ಪಠಿಸಿ, ಬಸವಣ್ಣನವರು ಜಗತ್ತಿಗೆ ನೀಡಿದ ಕಾಯಕ ಸಿದ್ಧಾಂತ ಅತ್ಯಂತ ಮಹತ್ವದ್ದಾಗಿದೆ” ಎಂದರು.

ಜಿಲ್ಲಾ ಪಂಚಾಯತ ಸಿಇಒ ಡಾ.ಗಿರೀಶ ಬದೋಲೆ ವಚನ ಪಠಣ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. “ಬಸವಣ್ಣನವರು ಬರೆದ ವಚನಗಳಿಗೆ ಡಾ.ಅಂಬೇಡ್ಕರ್‌ ಅವರು ಕಾನೂನು ರೂಪ ಕೊಟ್ಟು ಸಂವಿಧಾನ ರಚಿಸಿದರು. ಬಸವಣ್ಣ ಈ ಭೂಮಿಯ ಸಂಪತ್ತು, ಇವನಮ್ಮವ ಇವನಮ್ಮವ ಎಂದು ಎಲ್ಲರನ್ನೂ ಜೊತೆಗಿಟ್ಟುಕೊಂಡ ಮಹಾಮಾನವತವಾದಿʼ ಎಂದು ಹೇಳಿದರು.

ಸಾನಿದ್ಯವಹಿಸಿದ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಜನ ಬದುಕಲೆಂದು ಬಸವಾದಿ ಶರಣರು ಪ್ರಾಣತ್ಯಾಗ ಮಾಡಿ ವಚನ ಸಾಹಿತ್ಯವನ್ನು ಸಂರಕ್ಷಿಸಿದ್ದಾರೆ. ಕಲ್ಯಾಣ ಕ್ರಾಂತಿಯ ಫಲವಾಗಿ ಸ್ವಾತಂತ್ರ್ಯ, ಸಮಾನತೆಗೆ ಬೆಲೆ ಬಂದಿದೆ, ಎಂದರು.

ವಚನ ವಿಜಯೋತ್ಸವ ಮೆರವಣಿಗೆ ಸಮಿತಿ ಅಧ್ಯಕ್ಷ ಜಯರಾಜ ಖಂಡ್ರೆ ದಂಪತಿ ಗುರು ಪೂಜೆಗೈದರು.

ಮೆರವಣಿಗೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಬಸವರಾಜ ಧನ್ನೂರು ಸೋಮಶೇಖರ ಗಾದಗಿ, ಬಸವರಾಜ ಪಾಟೀಲ ಅಷ್ಟೂರ, ಬವಸರಾಜ ಬುಳ್ಳಾ, ಬಸವರಾಜ ಭತಮುರ್ಗೆ, ಸುರೇಶ ಚನ್ನಶೆಟ್ಟಿ, ಬಾಬುವಾಲಿ, ಆನಂದ ದೇವಪ್ಪ, ಬಸವಣಪ್ಪ ನೇಳಗಿ, ರಾಜೇಂದ್ರಕುಮಾರ ಗಂದಗೆ, ರಾಜೇಂದ್ರ ಜೊನ್ನಿಕೇರಿ, ಪ್ರಕಾಶ ಟೊಣ್ಣೆ, ಶಶಿಧರ ಹೊಸಳ್ಳಿ, ಸಂತೋಷ ಪಾಟೀಲ ಮುಂತಾದವರು ಭಾಗವಹಿಸಿದರು. ಸುರೇಶ ಸ್ವಾಮಿ ನಿರೂಪಿಸಿದರು. ರವಿ ಪಾಪಡೆ ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *