ತರಳಬಾಳು ಹುಣ್ಣಿಮೆ ಮಹೋತ್ಸವ: ಭಜನಾ ಸ್ಪರ್ಧೆ, ತಂಡಗಳಿಗೆ ಆಹ್ವಾನ

ಬಸವ ಮೀಡಿಯಾ
ಬಸವ ಮೀಡಿಯಾ

ಭದ್ರಾವತಿ:

ತರಳಬಾಳು ಹುಣ್ಣಿಮೆ ಮಹೋತ್ಸವ 2026ರ ಅಂಗವಾಗಿ ಭದ್ರಾವತಿ, ಕಡೂರು, ಚನ್ನಗಿರಿ, ತರೀಕೆರೆ, ಶಿವಮೊಗ್ಗ ತಾಲ್ಲೂಕುಗಳ ಭಜನಾ ತಂಡಗಳಿಗೆ ಸ್ಪರ್ಧೆಗೆ ಆಹ್ವಾನಿಸಲಾಗಿದೆ.

ಕಣ್ಮರೆಯಾಗುತ್ತಿರುವ ಜನಪದ ಕಲೆಗಳನ್ನು ಪೋಷಿಸುವ ಉದ್ದೇಶದಿಂದ ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ ಅಣ್ಣನ ಬಳಗವು ಪ್ರತಿವರ್ಷ ಭಜನಾ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಬಂದಿರುತ್ತದೆ.

ಭಜನಾ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಶ್ರದ್ಧಾಭಕ್ತಿ ಸಮರ್ಪಣೆ ಮಾಡಿ ತಮ್ಮ ಭಜನಾ ಕಲೆಯನ್ನು ಪುನಶ್ಚೇತನಗೊಳಿಸಿಕೊಳ್ಳಬೇಕಾಗಿ ಕೋರಲಾಗಿದೆ.

ಭಜನಾ ಸ್ಪರ್ಧೆಯ ನಿಯಮಗಳು

1. ಭಜನಾ ಸ್ಪರ್ಧೆಯು ದಿನಾಂಕ 25-1-2026 ರ ಭಾನುವಾರ ಬೆಳಗ್ಗೆ 9:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತರಳಬಾಳು ಹುಣ್ಣಿಮೆ ಮಹೋತ್ಸವದ ಮಹಾಮಂಟಪದ ಮುಖ್ಯ ವೇದಿಕೆಯಲ್ಲಿ ನಡೆಸಲಾಗುವುದು.

2. ಭಜನಾ ತಂಡದವರು ತಮ್ಮ ತಂಡದ ಹೆಸರನ್ನು ದಿನಾಂಕ: 18-1-2026 ರೊಳಗೆ ನೊಂದಾಯಿಸಿಕೊಳ್ಳಬೇಕು.

3. ಒಂದು ಭಜನಾ ತಂಡದಲ್ಲಿ ಕಲಾವಿದರ ಸಂಖ್ಯೆ ಕನಿಷ್ಟ 6 ಗರಿಷ್ಟ 12 ಇರಬೇಕು.

4. ಭಜನೆಯಲ್ಲಿ ಯಾವುದೇ ದಾಸರ ಪದಗಳನ್ನು, ಕಿರ್ತನೆಗಳನ್ನು, ಶಿವಶರಣರ ವಚನಗಳನ್ನು ಹಾಗೂ ಭಜನಾ ಪದಗಳನ್ನು ಹಾಡಲು ಅವಕಾಶವಿರುತ್ತದೆ.

5. ಈ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದವರಿಗೆ ಎರಡು ಭಜನಾ ಪದಗಳನ್ನು ಹಾಡಲು ಮಾತ್ರ ಅವಕಾಶವಿರುತ್ತದೆ. ಮತ್ತು ಸಮಯಾವಕಾಶ 8 ನಿಮಿಷಗಳು ಮಾತ್ರ.

6. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ಭಜನಾ ತಂಡಕ್ಕೆ ಬಂದು ಹೋಗುವ ಬಸ್ ಚಾರ್ಜನ್ನು ಕೊಡಲಾಗುವುದು.

7. ಒಂದು ತಂಡದಲ್ಲಿ ಭಾಗವಹಿಸಿದ ಕಲಾವಿದರಿಗೆ ಮತ್ತೊಂದು ತಂಡದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

8. ಭಜನಾ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ (10,000/-) ದ್ವಿತೀಯ (8,000/-) ತೃತೀಯ (6,000/-) ರೂ.ಗಳ ನಗದು ಬಹುಮಾನ ಮತ್ತು ಪ್ರಶಸ್ತಿಪತ್ರವನ್ನು ನೀಡಲಾಗುವುದು.

9. ತೀರ್ಪು ನೀಡುವಾಗ ಭಜನೆ ಆರಂಭ, ಭಜನಾ ಸಂಪ್ರದಾಯದ ಸಮವಸ್ತ್ರ, ಭಜನಾ ಹಾಡಿನ ಆಯ್ಕೆ, ರಾಗ, ತಾಳ, ಲಯ, ತಂಡದ ಕ್ರಿಯಾಶೀಲತೆ ಹಾಗೂ ಭಜನೆಯ ಮುಕ್ತಾಯ ಇತ್ಯಾದಿ ಅಂಶಗಳನ್ನು ಗಮನಿಸಿ ಅಂಕಗಳನ್ನು ನೀಡಲಾಗುವುದು.

10. ತೀರ್ಪುಗಾರರ ತೀರ್ಮಾನವೇ ಅಂತಿಮ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಬಹುದು, ಹರೋನಹಳ್ಳಿ ಸ್ವಾಮಿ 7892154695, ನಂದಿನಿ 9538437779, ಯು. ಚಂದ್ರಪ್ಪ 9972531504, ಮಂಜುನಾಥ ಬಿ.ಜಿ 8880275276, ನಾಗರಾಜ ಎಂ.ಎನ್ 8073917706.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *