ತಾವರಗೇರಾ
ಕೊಪ್ಪಳ ಜಿಲ್ಲೆಯ ತಾವರಗೇರಾದಲ್ಲಿ ಲಿಂಗಾಯತ ಧರ್ಮದ ಇತಿಹಾಸ, ಸಿದ್ಧಾಂತ ಹಾಗೂ ಸಂಘಟನೆ ಕುರಿತು ಸಂಪನ್ಮೂಲ ವ್ಯಕ್ತಿಗಳ ಮೂರು ದಿನಗಳ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರ ಜನೇವರಿ 4, 5 ಮತ್ತು 6 ಪಟ್ಟಣದ ಸಿಂಧನೂರ ರಸ್ತೆಯಲ್ಲಿರುವ ಸತೀಶ ಜಾರಕಿಹೊಳಿ ಫೌಂಡೇಶನ್ನಿನ ಬುದ್ಧ ವಿಹಾರದಲ್ಲಿ ನಡೆಯಲಿದೆ.
ಮಾನವ ಬಂಧುತ್ವ ವೇದಿಕೆ ಕರ್ನಾಟಕ, ಬಸವಪರ ಸಂಘಟನೆಗಳು ಕೊಪ್ಪಳ, ರಾಯಚೂರ, ಬಳ್ಳಾರಿ, ವಿಜಯನಗರ ಜಿಲ್ಲೆ, ಇವರುಗಳ ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ.
ತರಬೇತಿದಾರರಾಗಿ ವಿಜಯಪುರದ ಶರಣ ಚಿಂತಕ ಡಾ. ಜೆ.ಎಸ್.ಪಾಟೀಲ ಕಾರ್ಯ ನಿರ್ವಹಿಸಲಿದ್ದಾರೆ. ತರಬೇತಿ ಪಡೆಯಲಿಚ್ಚಿಸುವವರು ಈ ಕೆಳಗಿನ ಅಹ೯ತೆ ಹಾಗೂ ನಿಯಮಗಳಿಗೆ ಬದ್ಧರಾಗಿರಬೇಕು. ವಸತಿ ಹಾಗೂ ಊಟದ ವ್ಯವಸ್ಥೆ ಇರುತ್ತದೆ. ವಸತಿ ಬೇಕಾಗಿದ್ಧರೆ ಮುಂಚಿತವಾಗಿ ತಿಳಿಸಬೇಕು.
ನಿಯಮಗಳು:
1) ದಿ. 2-1-2025 ಬುಧವಾರದೊಳಗೆ ನಿಮ್ಮ ಆಧಾರ ಕಾರ್ಡನೊಂದಿಗೆ ನೊಂದಣಿ ಮಾಡಿಸುವುದು ಕಡ್ಡಾಯ.
2) ತರಬೇತಿ ಸಮಯ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ, ಪೂರ್ಣ ಹಾಜರಿರಬೇಕು.
3) ಲಿಂಗಾಯತ ಧಮ೯ದ ಬಗ್ಗೆ ಆಸಕ್ತಿ ಹಾಗೂ ಪ್ರಾಥಮಿಕ ಮಾಹಿತಿ ಇದ್ದವರು ಮಾತ್ರ ಈ ತರಬೇತಿಗೆ ಸೇರಿಕೊಳ್ಳಬೇಕು.
4) ತರಬೇತಿಯ ಸಮಯದಲ್ಲಿ ನೀವು ಭಾಗವಹಿಸುವ ವಿಧಾನ, ಕೇಳುವ ಪ್ರಶ್ನೆಗಳು, ನಿಮ್ಮಲ್ಲಿರುವ ಜ್ಞಾನವನ್ನು ಪರಿಕ್ಷೆಗೆ ಒಳಪಡಿಸಲಾಗುವುದು ಹಾಗೂ ನಿಮ್ಮಲ್ಲಿರುವ ಕೌಶಲ್ಯವನ್ನು ಗುರುತಿಸಲಾಗುವುದು.
5) ಮುಂದಿನ ದಿನಗಳಲ್ಲಿ ಇಂತಹ ಆಯೋಜಿತ ಶಿಬಿರ, ಕಾಯ೯ಕ್ರಮಗಳಲ್ಲಿ ಲಿಂಗಾಯತ ಧಮ೯ದ ಬಗ್ಗೆ ಉಪನ್ಯಾಸ, ತರಬೇತಿ ನೀಡಲು ತಯಾರಿರಬೇಕು.
5) ಇಷ್ಟಲಿಂಗಧಾರಣೆ ಕಡ್ಡಾಯವಾಗಿದೆ. (ಇಲ್ಲದವರಿಗೆ ಲಿಂಗದೀಕ್ಷೆಯನ್ನು ಮುಂದಿನ ದಿನಗಳಲ್ಲಿ ಕೊಡಲಾಗುವುದು, ಆಗ ಲಿಂಗದೀಕ್ಷೆ ಪಡೆಯಲು ತಯಾರಿರಬೇಕು)
ನೋಂದಣಿ ಮಾಡಿಸಲು ಈ ಕೆಳಗಿನವರ ಮೊಬೈಲ್ ಸಂಖ್ಯೆಗಳನ್ನು ಸಂಪಕಿ೯ಸುವದು.
ಕೊಪ್ಪಳ ತಾ.
ಹನಮೇಶ ಕಲ್ಮಂಗಿ 8762258736,
ಶರಣಬಸನಗೌಡ ಪಾಟೀಲ 9986390114
ಗಂಗಾವತಿ ತಾ.
ಮಹೇಶ 9986211991
ಹೊಸಪೇಟೆ
ಪ್ರೊ. ಬಸವರಾಜ 9449019133
ಕುಷ್ಟಗಿ ತಾ.
ಕಿರಣ ಸರನಾಡಗೌಡ್ರ 8095789701
ಲಕ್ಷ್ಮಣಸಿಂಗ್ ವಗರನಾಳ 8105018452
ಯಲಬುರ್ಗಾ ತಾ.
ಅಮರೇಶಪ್ಪ ಬಳ್ಳಾರಿ 9880580324
ಕುಕನೂರ ತಾ.
ಬಸವರಾಜ ಅಂಗಡಿ 9741636417

ಲಿಂಗಾಯತ ಧರ್ಮದ ಇತಿಹಾಸ ಅಥವಾ ಅದ್ಯಯನ ತರಬೇತಿ ಶಿಬಿರ ಮಾಡುವುದು ಸರಿ. ಆದರೆ ಬ್ಯಾನರಿನಲ್ಲಿ ಬುದ್ಧ ಮತ್ತು ಅಂಬೇಡ್ಕರವರ ಭಾವಚಿತ್ರ ಹಾಕಿರುವ ಉದ್ದೇಶವೇನು??
ಈ ಕಾಯ೯ಕ್ರಮವು ಮಾನವ ಬಂಧುತ್ವ ವೆಧಿಕೆಯ ಸಹಕಾರದಿಂದ ನಡೆಯುತ್ತಿದೆ .
Ashok kukanoor