ತಾಯಿ ಮಾದಲಾಂಬಿಕೆಯವರ ಸ್ಮಾರಕದ ರಸ್ತೆಯಲ್ಲಿ ಚರಂಡಿ ನೀರು

ಬಿ. ಚನ್ನಪ್ಪ
ಬಿ. ಚನ್ನಪ್ಪ

ನಂಜನಗೂಡು

ಇತ್ತೀಚೆಗೆ ಬಸವ ಕಲ್ಯಾಣದ ಪ್ರವಾಸ ಮಾಡುವಾಗ ಶರಣರ ಸ್ಮಾರಕಗಳ ಶುಚಿತ್ವ ಕಾಪಾಡುವಲ್ಲಿ ಸರಕಾರದ ಹಾಗೂ ಜನರ ನಿರ್ಲಕ್ಷ್ಯ ಧೋರಣೆ ಬೇಸರ ಮತ್ತು ದುಃಖ ತರಿಸಿದ್ದವು.

ಅದರಲ್ಲಿಯೂ ಅಕ್ಟೋಬರ್ 31ರಂದು ಇಂಗಳೇಶ್ವರದಲ್ಲಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ತಾಯಿ ಮಾದಲಾಂಬಿಕೆಯವರ ಮನೆಯ ಸ್ಮಾರಕಕ್ಕೆ ಹೋಗುವ ರಸ್ತೆಯಲ್ಲಿನ ದುಃಸ್ಥಿತಿ ಕಂಡು ಮನನೊಂದಿತು. ಚರಂಡಿಯ ಗಲೀಜು ನೀರು ಸ್ಮಾರಕಕ್ಕೆ ಹೋಗಲು ಸಹ ಆಗದಂತೆ ರಸ್ತೆಯ ಮಧ್ಯಕ್ಕೆ ಬಂದು ನಿಂತಿತ್ತು.

ಬಸವಣ್ಣನವರ ಅರಿವಿನ ಮನೆ, ಮಡಿವಾಳ ಮಾಚಿದೇವರ ಗದ್ದಿಗೆ, ಕೂಡಲಸಂಗಮದಲ್ಲಿನ ನೀಲಾಂಬಿಕೆ ತಾಯಿಯ ಐಕ್ಯ ಸ್ಥಳ, ಬಸವ ಕಲ್ಯಾಣ ವ್ಯಾಪ್ತಿಯ ಒಕ್ಕಲಿಗ ಮುದ್ದಣ್ಣನವರ ಗದ್ದಿಗೆ, ಶಂಕರದಾಸಿಮಯ್ಯನವರ ದೇವಸ್ಥಾನ ಈಗೇ ಹಲವು ಶರಣರ ಸ್ಮಾರಕ ಸ್ಥಳಗಳೂ ಹೇಳಿಕೊಳ್ಳುವಷ್ಟು ಅಭಿವೃದ್ಧಿಯಾಗಿಲ್ಲ.

ದೇಶ ವಿದೇಶದಿಂದ ಬಸವಣ್ಣನವರ ತತ್ವ ತಿಳಿದ ಜನರು, ಸಾಹಿತಿಗಳು, ಸಂಶೋಧಕರು, ಇತಿಹಾಸ ತಜ್ಞರು ಇಲ್ಲಿಗೆ ಅಧ್ಯಯನಕ್ಕೆ ಬರುತಿದ್ದಾರೆ. ಅವರೆಲ್ಲಾ ಇಲ್ಲಿನ ಅವ್ಯವಸ್ಥೆಯನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸ್ಥಳಗಳ ನಿರ್ಲಕ್ಷ್ಯ ನೋಡಿದರೆ ಜನಪ್ರತಿನಿಧಿಗಳು ಬೇಕಂದಲೇ ನಿರ್ಲಕ್ಷ್ಯ ಮಾಡಿದಂತೆ ಕಾಣಿಸುತ್ತದೆ. ಈ ಭಾಗಗಳ ಬಸವ ಭಕ್ತರು ಸರಕಾರವನ್ನು ಎಚ್ಚರಿಸಬೇಕಿದೆ.

ಇತ್ತೀಚಿಗೆ ಕಲ್ಯಾಣ ಅಭಿವೃದ್ಧಿ ನಿಗಮ ಮಾಡಿರುವುದು ಸಂತೋಷದ ವಿಷಯವಾದರೂ ಸಹ ಮುಂದಿನ ದಿನಗಳಲ್ಲಿ ತುರ್ತಾಗಿ ಶರಣರ ಸ್ಥಳಗಳನ್ನ ಪ್ರವಾಸೋದ್ಯಮ ಕಾರಣದಿಂದ ಅಭಿವೃದ್ಧಿಪಡಿಸಬೇಕಿದೆ.

Share This Article
Leave a comment

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು