ಗದಗ
ಮಹಾರಾಷ್ಟ್ರದ ಮಹಾಡ್ ನಗರ 1927ರಲ್ಲಿ ಎರಡು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗುತ್ತದೆ, ಒಂದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಹಾಡ್ ಕೆರೆ ನೀರನ್ನು ಮುಟ್ಟುವ ಹೋರಾಟ, ಇನ್ನೊಂದು ಮನುಸ್ಮೃತಿ ದಹನದ ಘಟನೆ. ಈ ಎರಡು ಘಟನೆಗಳಿಗೆ ಸಾಕ್ಷಿಯಾಗುತ್ತದೆ.
1927 ಡಿಸೆಂಬರ್ 25 ರಂದು ಸಾರ್ವಜನಿಕವಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಇಡೀ ಸಮಾಜಕ್ಕೆ ಹಾಗೂ ದೇಶದ ಮಹಿಳೆಯರಿಗೆ ಮಾರಕವಾಗಿದ್ದ ಮನುಸ್ಮೃತಿಯನ್ನು ಸುಟ್ಟು ಹಾಕುತ್ತಾರೆ, ಈ ದಿನವನ್ನು ಡಿಸೆಂಬರ್ 25 ರಂದು “ಮನುಸ್ಮೃತಿ ದಹನದ ದಿನ” ಎಂದು ಆಚರಿಸಿಕೊಂಡು ಬರಲಾಗುತ್ತಿದೆ.

ಮನುಸ್ಮೃತಿ ಸುಟ್ಟ ದಿನವನ್ನು ವಿಶೇಷವಾಗಿ ಆಚರಿಸುವ ಉದ್ಧೇಶದಿಂದ ಗದಗ ನಗರದ ಅಂಬೇಡ್ಕರವಾದಿ ಹೋರಾಟಗಾರ, ಶರೀಫ ಬಿಳೆಯಲಿ ಕುಟುಂಬ ತಮ್ಮ ಮನೆಯಲ್ಲಿ ಮೌಢ್ಯವನ್ನು ಬಿತ್ತಿಕೊಂಡು ಬಂದಂತ ಹುಲಿಗೆಮ್ಮ, ಎಲ್ಲಮ್ಮ, ಲಕ್ಷ್ಮಿ, ಮತ್ತಿತರ ದೇವರ ಫೋಟೋಗಳನ್ನು ತಮ್ಮ ಮನೆಯ ಜಗುಲಿಯಿಂದ ತೆರವುಗೊಳಿಸಿ, ಆ ಜಾಗದಲ್ಲಿ ಬುದ್ಧ ಬಸವ ಅಂಬೇಡ್ಕರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಿದರು.

1927 ರಲ್ಲಿ ಘೋಷಣೆಯ ಕೇಂದ್ರವಾಗಿದ್ದ ಮನುಸ್ಮೃತಿಯನ್ನು ಧಹಿಸಿದ ದಿನದಂದೇ ನಾವೂ ದೇವರುಗಳನ್ನ ಹೊರಹಾಕಿದ್ದೇವೆ. ಅವರ ಮಾರ್ಗದರ್ಶನದಂತೆ ಬೌದ್ಧ ಧಮ್ಮ ಸ್ವೀಕಾರ ಮಾಡಿದ್ದೇವೆ ಎಂದರು ಶರೀಫ. ಶರೀಫ ಅವರ ಪತ್ನಿ ಗಾಯತ್ರಿ ಮಾತನಾಡಿ, ಪೂಜಾರಿ ಮನೆತನದಿಂದನೇ ಬಂದವರು ನಾವು. ಆದ್ರೆ ನಂತರದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳ ಅರಿವು ಬಂದಾಗಿನಿಂದ ಪರಿವರ್ತನೆಯಾಗಿದ್ದೇವೆ.
ಹಿರಿಯರು ವಿರೋಧ ಮಾಡಿದ್ರೆ ಅವರಿಗೂ ತಿಳಿ ಹೇಳುತ್ತೇವೆ. ಹೆಣ್ಣಿಗೆ ಗೌರವ ಸಿಕ್ಕಿದ್ದು ಅಂಬೇಡ್ಕರ್ ಅವರಿಂದ. ದೈವಪೂಜೆಯಿಂದ ಹೆಚ್ಚು ಹಣ ಖರ್ಚು ಆಗ್ತಿದೆ ಹೊರತು ಅದರಿಂದ ಯಾವುದೇ ಲಾಭವಿಲ್ಲ ಎಂದರು.
ಪತ್ನಿ ಗಾಯಿತ್ರಿ ಜೊತೆ ಸೇರಿ ಮನೆಯ ಜಗುಲಿಯಲ್ಲಿದ್ದ ದೇವರುಗಳನ್ನು ಪ್ರಗತಿಪರ ಹೋರಾಟಗಾರ ಶರೀಫ ಹೊರಹಾಕಿದರು. ನಂತರ ಪ್ರಗತಿಪರ ಸ್ನೇಹಿತರು ಶರೀಫ್ ಕುಟುಂಬಕ್ಕೆ ಬುದ್ಧ ಬಸವ ಅಂಬೇಡ್ಕರ್ ಮೂರ್ತಿಯನ್ನು ನೀಡಿದರು. ಮೂರ್ತಿಯನ್ನು ತೆಗೆದುಕೊಂಡು ಮನೆ ತುಂಬಿಸಿಕೊಂಡ ಶರೀಫ ಕುಟುಂಬ, ಇನ್ನು ಮುಂದೆ ಬುದ್ಧ ಬಸವ ಅಂಬೇಡ್ಕರ್ ಅವರುಗಳ ಮನುಷ್ಯ ಪ್ರೀತಿಯ ದಾರಿಯಲ್ಲಿ ನಡೆಯೋದಾಗಿ ಸಂಕಲ್ಪ ಮಾಡಿದರು.

ಶರೀಫ್, ಗಾಯಿತ್ರಿ ಕುಟುಂಬಕ್ಕೆ ಹಿರಿಯ ಸಾಹಿತಿ ಬಸವರಾಜ ಸೂಳಿಭಾವಿ ಸೇರಿದಂತೆ ಅನೇಕ ಪ್ರಗತಿಪರರು ಸಾಥ್ ನೀಡಿದರು. ದೇವರ ಫೋಟೋ ಹೊರಹಾಕಿ ಮಾತನಾಡಿದ ಶರೀಫ್ ಬಿಳೆಯಲಿ ಅವರು, ನಮ್ಮ ತಾಯಿ ನಿತ್ಯ ದೇವರ ಪೂಜೆ ಮಾಡಿದರು ಏನೂ ಪ್ರಯೋಜನವಾಗಲಿಲ್ಲ. ಅನಾರೋಗ್ಯಕ್ಕೆ ತುತ್ತಾದಾಗ ಅವಳು ನಂಬಿದ ದೇವರು ಸಹಾಯಕ್ಕೆ ಬರಲಿಲ್ಲ, ಅದೆಲ್ಲವನ್ನೂ ನೋಡಿ ಅನುಭವಿಸಿದ ನಾವು, ಹೊಸ ಆಲೋಚನೆ ಇಟ್ಟುಕೊಂಡು ಬುದ್ಧ, ಬಸವ, ಅಂಬೇಡ್ಕರ್ ಅವರನ್ನ ಸ್ವೀಕರಿಸಿದ್ದೇವೆ. ಜ್ನಾನದ ಹಾದಿಯಲ್ಲಿ ನಡೆಯುವ ನಿರ್ಧಾರ ಮಾಡಿದ್ದೇವೆ ಎಂದರು.

ಇನ್ನು ಕಾರ್ಯಕ್ರಮಕ್ಕೆ ಬಂದಿದ್ದ ಹಿರಿಯ ಸಾಹಿತಿ ಬಸವರಾಜ ಸೂಳಿಭಾವಿ ಮಾತನಾಡಿ, 33 ಕೋಟಿ ದೇವರಿದ್ದರೂ ದೇಶದಲ್ಲಿ ಅಸಮಾನತೆ, ಬಡತನ, ಶೋಷಣೆ ತುಂಬಿದೆ. ದೇವರು ಅನ್ನೋದು ಒಂದು ಕಲ್ಪನೆ, ಜನರ ದೌರ್ಬಲ್ಯ ದುರುಪಯೋಗ ಮಾಡಿಕೊಳ್ಳುವುದ್ದಾಗಿದೆ. ಮೌಢ್ಯ ತುಂಬಿದ ದೇವರನ್ನ ಕಿತ್ತುಹಾಕಿದಾಗ ಜನರಿಗೆ ಒಳ್ಳೆಯದಾಗುತ್ತೆ ಎಂದರು.

ಶರೀಫ ಹಾಗೂ ಗಾಯತ್ರಿ ಅವರುಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಕಾರ್ಯಕ್ರಮಕ್ಕೆ ಅಶೋಕ ಕಟ್ಟಿಮನಿ, ಗುರುಬಸಪ್ಪ ಬಿಳೆಯಲಿ, ಡಾ.ರಾಮಚಂದ್ರ ಹಂಸನೂರ, ಪೂಜಾ ಸಿಂಗೆ, ರೇಣುಕಾ ಹಂಸನೂರ,ಬಸವ ಅನುಯಾಯಿಗಳಾದ ಎಸ್.ಎ. ಮುಗದ, ಪ್ರಕಾಶ ಅಸುಂಡಿ, ಆನಂದ ಶಿಂಗಾಡಿ, ಬಸವ್ವ ಶಿಂಗಾಡಿ, ಮಲ್ಲೇಶ ಹೊಸಮನಿ, ಸತೀಶ್ ಚಲವಾದಿ, ಹುಚ್ಚಪ್ಪ ಚಲವಾದಿ, ಬಸವರಾಜ ಬೇವಿನಮರದ, ಅನಿಲ್ ಕಾಳೆ, ಪರಶು ಕಾಳೆ, ಶಿವಾನಂದ ತಮ್ಮಣ್ಣವರ, ಯುಸುಫ್ ಮಜ್ಜಗಿ ಮತ್ತಿತರ ಹೋರಾಟದ ಗೆಳೆಯರು ಉಪಸ್ಥಿತರಿದ್ದರು.
ಜಾಗೃತ ಮನಸ್ಸುಗಳಿಗೆ ಕೋಟಿ ಶರಣು
ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ ಎನ್ನುವ ಹಾಗೆ ಜಾಗೃತರಾದ ದಂಪತಿಗಳಿಗೆ ಅನಂತ ಶರಣುಗಳು🙏🙏
ನಿಜವನ್ನ ಒಪ್ಪಿಕೊಂಡ ದಂಪತಿಗಳಿಗೆ ನೂರು ನೂರು ನಮನಗಳು.
ಶರಣು ಶರಣಾರ್ಥಿಗಳು 🙏