ಬಸವಣ್ಣನವರ ಆದರ್ಶದಂತೆ ನಮ್ಮ ಸರ್ಕಾರ ನಡೆಯುತ್ತಿದೆ: ತೆಲಂಗಾಣ ಸಿಎಂ ರೇವಂತ ರೆಡ್ಡಿ

ಮಡಪತಿ ವಿ.ವಿ
ಮಡಪತಿ ವಿ.ವಿ

ಜಹಿರಾಬಾದ್ (ತೆಲಂಗಾಣ)

ವಿಶ್ವಗುರು ಬಸವೇಶ್ವರರ 12ನೇ ಶತಮಾನದ ಕಾರ್ಯಗಳ ಸ್ಫೂರ್ತಿಯಿಂದಲೇ ಸರ್ಕಾರ, ಜನಪ್ರತಿನಿಧಿಗಳು ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಎಂ. ರೇವಂತ ರೆಡ್ಡಿ ಹೇಳಿದರು.

ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದನಲ್ಲಿ ವಿಶ್ವಗುರು ಬಸವೇಶ್ವರ ಪ್ರತಿಮೆಯನ್ನು ಅನಾವರಣ ಮಾಡಿ ಅವರು ಮಾತನಾಡಿದರು.

ಬಸವೇಶ್ವರರು ಸಾಮಾಜಿಕ ನ್ಯಾಯವನ್ನು ಒದಗಿಸಲು ಅಪಾರ ಶ್ರಮಪಟ್ಟು ಹೋರಾಡಿದ ಮಹಾನ್ ವ್ಯಕ್ತಿ ಎಂದು ಸ್ಮರಿಸುತ್ತ, ಗುರು ಬಸವಣ್ಣನವರ ಆದರ್ಶದಂತೆ ನಮ್ಮ ಸರ್ಕಾರ ಸಾಗುತ್ತಿದೆ ಮತ್ತು ಅವರ ಸಂದೇಶವೇ ನಮ್ಮ ಆಡಳಿತಕ್ಕೆ ದಿಕ್ಸೂಚಿಯಾಗಿದೆ.

ಬಡವರಿಗೆ ನ್ಯಾಯ ದೊರಕಬೇಕೆಂದು ಅವರು ಅನುಭವ ಮಂಟಪ ಸ್ಥಾಪಿಸಿದರು. ಬಸವಣ್ಣನವರ ಆದರ್ಶದಂತೆಯೇ ಪ್ರಸ್ತುತ ಸಂಸತ್ತು ಮತ್ತು ವಿಧಾನಸಭೆಗಳು ಕಾರ್ಯವಿಧಾನವನ್ನು ನಿರ್ವಹಿಸುತ್ತಿವೆಯೆಂದು ಸಿಎಂ ರೇವಂತರೆಡ್ಡಿ ಅಭಿಪ್ರಾಯಪಟ್ಟರು.

ಪೂಜ್ಯ ಡಾ. ಗಂಗಾಮಾತಾಜೀ ಬಸವ ಧರ್ಮಪೀಠ ಕೂಡಲಸಂಗಮ‌, ಪೂಜ್ಯ ಶಿವಾಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಬಿಚಕುಂದಾಮಠ, ಪೂಜ್ಯ ದತ್ತಗಿರಿ ಮಹಾರಾಜ್, ಮಠಂ ರಾಚಯ್ಯ ಸ್ವಾಮಿ ರಂಜೋಲ್, ರಾಜ್ಯದ ಸಚಿವರಾದ ದಾಮೋದರ ರಾಜನರಸಿಂಹ, ಕೊಂಡಾ ಸುರೇಖಾ, ಸರ್ಕಾರದ ಸಲಹೆಗಾರರಾದ ಮಹಮ್ಮದ್ ಅಲಿ ಶಬ್ಬೀರ್, ಶಾಸಕ ಡಾ. ಸಂಜೀವ್ ರೆಡ್ಡಿ, ಮದನ್ ಮೋಹನ್, ಕಾಂತಾರಾವ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಶೆಟ್ಟಿಕಾರ್, ಪಿಸಿಸಿ ಸದಸ್ಯರಾದ ಕೆ. ಶ್ರೀನಿವಾಸ್, ಲಿಂಗಾಯತ ಸಮಾಜದ ಮುಖಂಡರಾದ ರಾಜಶೇಖರ್ ಶೇಟ್ಕರ್ರ್, ಸುಭಾಷ ರೇಕುಳಗಿ, ಡಾ. ಬಸವರಾಜ ಮಠಪತಿ, ಸೋಮಶೇಖರ ಪಾಟೀಲ, ಶಂಕರಪ್ಪ ಪಾಟೀಲ ಮತ್ತು ಲಿಂಗಾಯತ ಸಮಾಜ ಹಾಗೂ ರಾಷ್ಟ್ರೀಯ ಬಸವದಳದ ಪ್ರಮುಖರು ಇದ್ದರು.

ನೂರಾರು ಶರಣ ಶರಣೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
2 Comments
  • ತೆಲಂಗಾಣದ ಭಾಗದಲ್ಲಿ ಬಸವೇಶ್ವರ ಮೂರ್ತಿ ಅನಾವರಣ ಮಾಡಿ ಅಲ್ಲಿಯೂ ಬಸವ ತತ್ವ ಪ್ರಸಾರ ಮಾಡುವ ಪೂಜ್ಯ ಮಾತಾಜಿಯವರಿಗೆ ಮತ್ತು ಸಮಸ್ತ ಶರಣರಿಗೆ ಶರಣು ಶರಣಾರ್ಥಿಗಳು, ಹೊರ ರಾಜ್ಯದಲ್ಲಿ ಬಸವ ತತ್ವ ಪ್ರಚಾರ ಮಾಡುವದು ಅಷ್ಟು ಸರಳವಲ್ಲ, ಭಾಷೆಯ ತೊಡಕು, ಸಂಸ್ಕ್ರತಿಯ ತೊಡಕಿನ ಮಧ್ಯೆಯೂ ನಿಮ್ಮ ಉತ್ಸಾಹ ಶ್ರಮ‌ ನೋಡಿದರೆ , ಕರ್ನಾಟಕದ ಮನೆ ಮನೆಗೂ ನಾವು ಬಸವ ತತ್ವ ತಲುಪಿಸಬಹುದು ಎಂದು ಉತ್ಸಾಹ ಹೆಚ್ಚಿಸುತ್ತೆ, ತಮಗೆಲ್ಲರಿಗೂ ಅಭಿನಂದೆನಗಳು ಶರಣು ಶರಣಾರ್ಥಿಗಳು.

  • ಮಠಪತಿ ವಿ ವಿ ಅವರಿಗೆ ತುಂಬು ಹೃದಯದ ಅಭಿನಂದನೆಗಳು. ತಮ್ಮ ಬಸವ ಜಯಂತಿ ಆಚರಣೆ ನಿಜಕ್ಕೂ ಪ್ರಶಂಸನೀಯ. ಸರಕಾರದ ವೇಗ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿದ್ದು ಈ ಮೂಲಕ ಸುಂದರ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾದ ವರದಿ ನೋಡಿ ಸಂತೋಷವಾಯಿತು. ಶರಣು ಶರಣಾರ್ಥಿ.

Leave a Reply

Your email address will not be published. Required fields are marked *

ಲಿಂಗಾಯತ ಸಮಾಜ, ಜಹಿರಾಬಾದ್