ಅಲ್ಲಮರ ಅದ್ಭುತ: 21,000 ಭಕ್ತರಿಂದ ಏಕಕಾಲಕ್ಕೆ 11 ವಚನಗಳ ಗಾಯನ

ಬಸವ ಮೀಡಿಯಾ
ಬಸವ ಮೀಡಿಯಾ

ತೇರದಾಳ

ಅಲ್ಲಮಪ್ರಭುದೇವರ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮಕ್ಕೆ 21 ಸಾವಿರ ಭಕ್ತರಿಂದ 11 ವಚನಗಳನ್ನು ಏಕಕಾಲಕ್ಕೆ ಹೇಳುವ ಮೂಲಕ ಸೋಮವಾರ ರಾತ್ರಿ ತೆರೆ ಬಿದ್ದಿತು.

ಶೇಗುಣಸಿಯ ಮಹಾಂತಪ್ರಭು ಶ್ರೀ ನೆರೆದಿದ್ದ ಭಕ್ತ ಸಮೂಹಕ್ಕೆ ಅಲ್ಲಮಪ್ರಭುದೇವರ ವಚನಗಳನ್ನು ಹೇಳಿಕೊಟ್ಟರು. ರಾಜ್ಯ, ಅಂತಾರಾಜ್ಯದಿಂದ ಬಂದಿದ್ದ ಸಹಸ್ರಾರು ಭಕ್ತರು ವಿಶ್ವಗುರು ಬಸವಣ್ಣನವರ ಮತ್ತು ಕ್ಷೇತ್ರಾಧಿಪತಿ ಅಲ್ಲಮ ಪ್ರಭುಗಳನ್ನು ಜಯಘೋಷಗಳ ಮೂಲಕ ಸ್ಮರಿಸಿಕೊಳ್ಳುತ್ತಾ ವಚನ ವಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇತಿಹಾಸ ಸೃಷ್ಟಿಸಿದರು.

“21 ಸಾವಿರ ಭಕ್ತರು ಅಲ್ಲಮಪ್ರಭುದೇವರ 11 ವಚನಗಳನ್ನು ಏಕಕಾಲಕ್ಕೆ ಹೇಳಿ ಧಾಖಲೆ ಬರೆದಿದ್ದಾರೆ. ಇದು ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ನಡೆಯಿತು ಎನ್ನುವುದನ್ನು ಯಾರೂ ಎಂದಿಗೂ ಮರೆಯುವ ಹಾಗೆಯೆ ಇಲ್ಲ,” ಎಂದು ಡಾ.ಮಹಾಂತ ಪ್ರಭು ಶ್ರೀಗಳು ಹೇಳಿದರು.

ಅಲ್ಲಮಪ್ರಭು ದೇವರ ನೂತನ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ಅಕ್ಟೋಬರ್ 14ರಿಂದ ನ.11ರವರೆಗೆ ಹಲವಾರು ಕಾರ್ಯಕ್ರಮಗಳು ನಡೆದವು. ಯುವಜನೋತ್ಸವ, ಜನಪದ ಸಂಭ್ರಮ, ಅಲ್ಲಮಪ್ರಭುದೇವರ ವಚನಗ್ರಂಥಗಳ ಮೆರವಣಿಗೆ, 111 ಮಠಾಧೀಶರ ಪಾದಪೂಜೆ, ಮಹಿಳಾ ಸಮಾವೇಶ, ಕಳಸಾರೋಹಣ, ಲೋಕಾರ್ಪಣೆ, ಧರ್ಮಸಭೆ ಮುಂತಾದ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಜರುಗಿದವು.

28 ದಿನಗಳ ಕಾಲ ಜರುಗಿದ ಬಸವ ಪುರಾಣ ಆಲಿಸಲು ಸಾವಿರಾರು ಸಂಖ್ಯೆಯ ಭಕ್ತರು ವೇದಿಕೆಯ ಮುಂಭಾಗ ವಿರಾಜಮಾನರಾಗುವ ಮೂಲಕ ಭಕ್ತಿ ಸಾದರಪಡಿಸಿದ್ದರು. ರೊಟ್ಟಿ, ಶೇಂಗಾ ಹೋಳಿ, ಶೇಂಗಾ ಉಂಡಿ, ಕರಗಡಬು ಜಾತ್ರೆಗಳು ರಾಜ್ಯದ ಗಮನ ಸೆಳೆದಿರುವುದನ್ನು ಭಕ್ತರು ಸ್ಮರಿಸಿದರು.

ಹಳೇಹುಬ್ಬಳ್ಳಿಯ ನೀಲಕಂಠಮಠದ ಶಿವಶಂಕರ ಶಿವಾಚಾರ್ಯ ಶ್ರೀ ಮಾತನಾಡಿ, ‘ಭಾವಿ ಪ್ರಜೆಗಳಾಗಿರುವ ಮಕ್ಕಳ ನಾಲಿಗೆ ತುದಿಯ ಮೇಲೂ ವಚನಗಳು ಕೇಳುವಂತಾಗಬೇಕು. ಅಲ್ಲಮರ ವಚನಗಳನ್ನು ನಿರ್ವಚನ ಮಾಡುವ ಮೂಲಕ ಸಿದ್ಧೇಶ್ವರ ಶ್ರೀ ನಮಗೆಲ್ಲ ಬಹುದೊಡ್ಡ ಕಾಣಿಕೆ ನೀಡಿದ್ದಾರೆ. ಇದರಿಂದ ಭಕ್ತರಿಗೆ ಈ ಹಿಂದೆ ಅರ್ಥವಾಗದಿದ್ದ ಅವರ ವಚನಗಳು ತಿಳಿಯುವಂತಾಗಿದೆ,’ ಎಂದರು.

ಹಂದಿಗುಂದದ ಶಿವಾನಂದ ಶ್ರೀ, ಚಿಮ್ಮಡದ ಪ್ರಬು ಶ್ರೀ, ತೇರದಾಳ ಹಿರೇಮಠದ ಗಂಗಾಧರ ದೇವರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಸಂತೋಷ ಕಾಮಗೊಂಡ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ದೇವಲ ದೇಸಾಯಿ, ಸಿದ್ದು ಕೊಣ್ಣುರ, ಬಸವರಾಜ ಬಾಳಿಕಾಯಿ ಉಪಸ್ಥಿತರಿದ್ದರು.

Share This Article
3 Comments
  • ಕಾರ್ಯಕ್ರಮದಲ್ಲಿ ಭಾಗಿಯಾದ ಮತ್ತಉ ಆಯೋಜನೆ ಮಾಡಿದ ಎಲ್ಲಾ ಶರಣ ಬಸವಭಕ್ತರಿಗೆ ಶರಣುಶರಣಾರ್ಥಿಗಳು

  • ನಿಜಕ್ಕೂ ರೋಮಾಂಚನ ಯೋನಕಾಯ ಅಲ್ಲಮನ ಚಿಂತನೆಗಳು ಬಸವಾದಿ ಶರಣರ ಚಂತನೆ ಹೆಚ್ಚು ಹೆಚ್ಚು ಮನೆ ಮನಗಳನ್ನು ತಲುಪಲಿ ಇೆಂಥಹ ಕಾಯ೯ಕ್ರಮ ಆಯೋಜಿಸಿದ ಸವ೯ರಿಗೂ ಅನಂತ ಶರಣುಗಳು.

  • My fear is that jin the list of Swaminis who attended this programme not become servents of RSS and Kukumsdhari Ydiyoirappa. Let us be beware.

Leave a Reply

Your email address will not be published. Required fields are marked *