ಹನ್ನೆರಡನೇ ಶತಮಾನದ ಕ್ರಾಂತಿಯಲ್ಲಿ ಪಂಚಪೀಠಗಳು ಬೇರೆ ಬೇರೆ ರೀತಿ ಭಾಗಿಯಾಗಿವೆ. ಶ್ರೀಶೈಲ ಪೀಠದ ಅಂದಿನ ಜಗದ್ಗುರು ಮಲ್ಲಿಕಾರ್ಜುನ ಮಹಾಸ್ವಾಮೀಜಿಯ ಪ್ರಸಂಗಗಳೇ ಅದಕ್ಕೆ ಸಾಕ್ಷಿ.
ತೇರದಾಳ
ಲಿಂಗಾಯತ ಪರಂಪರೆಯ ಗುರು ಹಾಗೂ ವಿರಕ್ತರು ಬೇರೆಯಲ್ಲ. ಅವರನ್ನು ವಿಭಜಿಸುವವರಿಗೆ ಇತಿಹಾಸದ ಅರಿವಿಲ್ಲ… ಗುರು ಮತ್ತು ವಿರಕ್ತ ಪರಂಪರೆಗಳು ಕಾಲಾಂತರದಲ್ಲಿ ವಿಭಿನ್ನವಾಗಿರುವುದು ನೋವಿನ ಸಂಗತಿ ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶ್ರೀ ಹೇಳಿದರು.
ತೇರದಾಳ ಅಲ್ಲಮಪ್ರಭು ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಮಂಡಲ ಪೂಜೆ ಮಂಗಲೋತ್ಸವಕ್ಕೆ ಡಾ.ಚನ್ನಸಿದ್ದರಾಮ ಸ್ವಾಮೀಜಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ನಮ್ಮೆಲ್ಲ ಬೇಧಭಾವವನ್ನು ಮರೆತು ವೀರಶೈವ ಲಿಂಗಾಯತರು ನಾವೆಲ್ಲ ಒಂದು, ವಿಶ್ವವೇ ನಮ್ಮ ಧರ್ಮ ಎಂಬ ವಿಶಾಲ ಮನೋಭಾವನೆ ಬೆಳೆಸಿಕೊಳ್ಳಬೇಕು. ದಿನಗಳಲ್ಲಿ ಸಾಮಾಜಿಕವಾಗಿ ವೀರಶೈವ ಲಿಂಗಾಯತರು ಒಂದಾಗದಿದ್ದರೆ ಭವಿಷ್ಯವಿಲ್ಲ. ವೀರಶೈವ ಸಮಾಜವರು ಅಲ್ಪಸಂಖ್ಯಾತರಾಗುವ ಹಂತಕ್ಕೆ ತಲುಪಿದ್ದಾರೆ, ಎಂದರು.
ಹನ್ನೆರಡನೇ ಶತಮಾನದ ಕ್ರಾಂತಿಯಲ್ಲಿ ಪಂಚಪೀಠಗಳು ಬೇರೆ ಬೇರೆ ರೀತಿ ಭಾಗಿಯಾಗಿವೆ. ಶ್ರೀಶೈಲ ಪೀಠದ ಅಂದಿನ ಜಗದ್ಗುರು ಮಲ್ಲಿಕಾರ್ಜುನ ಮಹಾಸ್ವಾಮೀಜಿಯ ಪ್ರಸಂಗಗಳೇ ಅದಕ್ಕೆ ಸಾಕ್ಷಿ.
ಕಲ್ಯಾಣದಲ್ಲಿ ಎರಡು ಕ್ರಾಂತಿಗಳು ಜರುಗಿದವು. ಸಾಮಾಜಿಕ ಕ್ರಾಂತಿಯ ನೇತೃತ್ವ ಬಸವಣ್ಣ ವಹಿಸಿದರೆ, ಅಲ್ಲಮಪ್ರಭು ಆಧ್ಯಾತ್ಮಿಕ ಕ್ರಾಂತಿಯ ಮುಂಚೂಣಿಯಲ್ಲಿದ್ದರು. ಕಲ್ಯಾಣ ತೊರೆದ ಅಲ್ಲಮಪ್ರಭು ಶ್ರೀಶೈಲ ಬಯಲಲ್ಲಿ ಬಯಲಾದರು. ಅದಕ್ಕೆಂದೆ ಶಿಥಿಲಗೊಂಡ ತೇರದಾಳದ ಅಲ್ಲಮಪ್ರಭು ದೇವಸ್ಥಾನ ಉರುಳಿಸಲು ಹಾಗೂ ನೂತನ ದೇವಸ್ಥಾನದ ಕೊನೆಯ ಕಾರ್ಯಕ್ರಮ ಮಂಡಲ ಪೂಜೆಗೆ ಶ್ರೀಶೈಲ ಪೀಠದಿಂದ ಶ್ರೀಗಳನ್ನು ಅಲ್ಲಮಪ್ರಭು ಅಲ್ಲಿಂದ ಕಳಿಸಿಕೊಟ್ಟಂತಿದೆ ಎಂದರು.

ಜಮಖಂಡಿ ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಮಾತನಾಡಿ, ಅಲ್ಲಮಪ್ರಭು ದೇವಸ್ಥಾನ ಜಾಗೃತಿ ಕ್ಷೇತ್ರವಾಗಿದ್ದು, ಲೋಕಾರ್ಪಣೆಯ 48 ದಿನಗಳ ಜರುಗುವ ಮಂಡಲ ಪೂಜೆ ಮೂಲಕ ಈ ಕ್ಷೇತ್ರಕ್ಕೆ ಮತ್ತಷ್ಟು ದೈವಿ ಕಳೆ ಬಂದಿದೆ, ಎಂದರು.
ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ತೇರದಾಳ ಶಾಸಕ ಸಿದ್ದು ಸವದಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನ ನಿರ್ಮಾಣದ ಹಂತಗಳನ್ನು ವಿವರಿಸಿದರು. ತೇರದಾಳ ಹಿರೇಮಠದ ಮರಿದೇವರಿಗೆ ಪಟ್ಟಾಧಿಕಾರ ಕಾರ್ಯಕ್ರಮ ನೆರವೇರಿಸಲು, ದೇವಸ್ಥಾನ ಅದ್ದೂರಿ ಕಾರ್ಯಕ್ರಮ ಆಯೋಜಿಸೋಣ ಎಂದರು.

ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಶ್ರೀ, ಬನಹಟ್ಟಿಯ ಶರಣಬಸವ ಶಿವಾಚಾರ್ಯ ಶ್ರೀ, ಕೊಣ್ಣುರ ಹೊರಗಿನಮಠದ ವಿಶ್ವಪ್ರಭು ಶ್ರೀ, ರುದ್ರಮುನಿ ಶ್ರೀ, ಸಿದ್ದಲಿಂಗ ಶಿವಾಚಾರ್ಯ ಶ್ರೀ, ಅಡವಿಸಿದ್ದೇಶ್ವರ ಶ್ರೀ, ವೀರಸಂಗಮೇಶ್ವರ ಶ್ರೀ, ಪ್ರವೀಣ ನಾಡಗೌಡ, ಗುಹೇಶ್ವರ ಪುರಾಣಿಕಮಠ, ಪರಯ್ಯ ಮೇಲಿನಮನಿ, ರಾಜೇಂದ್ರ ಗುಡಗುಂಟಿ, ನಾಗಪ್ಪ ಸನದಿ, ದೇವಲ ದೇಸಾಯಿ ಇದ್ದರು.
ಎಲ್ಲಿಯತನಕ ವೀರಶೈವರು ನಮಗೆ ವೇದ, ಆಗಮ, ಪುರಾಣ ಮುಂತಾದವುಗಳಲ್ಲಿ ನಂಬಿಕೆ ಇದೆ ಮತ್ತು ಬಹು ದೇವತಾ ಆರಾಧನೆಯಲ್ಲಿ ನಂಬಿಕೆಯಿದೆ ಎಂದು ಆಚರಿಸುತ್ತಿರುತ್ತಾರೋ ಅಲ್ಲಿಯವರೆಗೆ ವೀರಶೈವರು ಮತ್ತು ಲಿಂಗಾಯತರು ಒಂದೇ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಸವಾದಿ ಶರಣರ ಲಿಂಗಾಯತ ಧರ್ಮ ಮತ್ತು ಆಚರಣೆಗಳು ಹಾಗೂ ವೀರಶೈವ ಆಚರಣೆಗಳು ಒಟ್ಟಿಗೆ ಇರಲು ಮತ್ತು ಮುಂದುವರಿಯಲು ಸಾಧ್ಯವಿಲ್ಲ. ಹಾಗೂ ವೀರಶೈವ ಲಿಂಗಾಯತ ಎಂಬ ಯಾವುದೇ ಹೈಬ್ರಿಡ್ ಧರ್ಮವೂ ಇಲ್ಲ.
ಗುರುವಿಲ್ಲದ ಗುಡ್ಡ ಬಸವಣ್ಣ ಅವರನ್ನು ನಮ್ಮ ಶಿಷ್ಯಂದಿರು ಪ್ರತಿಪಾದಿಸುವ ಪಂಚಪೀಠಗಳ ಹೊಸ ನಾಟಕವಿದು ,ಜಾಗೃತಗೊಳ್ಳುತ್ತಿರುವ ಲಿಂಗಾಯತ ಪರಂಪರೆಯನ್ನು ಇವರೆಲ್ಹೆಲಾ ,ಹೆದರಿಸಿದರು,ಸುಳ್ಳುಗಳನ್ನು ಬಿತ್ತಿದರು ,ಪಿತೂರಿಗಳನ್ನು ಮಾಡಿದರು, ಅವೆಲ್ಲವುಗಳನ್ನು ಮೆಟ್ಟಿನಿಂತು ಲಿಂಗಾಯತ ಧಮ೯ಗ್ರಂಥ ವಚನಸಾಹಿತ್ಯ ಬೆಳೆಯುತ್ತಿರುವ ವೇಗವನ್ನು ಸಹಿಸದೆ ಈಗ ಸೌಹಾದ೯ತೆಯನೆಪದಲ್ಲಿ ಒಳನುಸುಳಿ ಯಲ್ಲವನ್ನು ಕೆಡಿಸುವ ಹುನ್ನಾರಗಳನ್ನು ಅಲ್ಲಗಳೆಯುವೀತಿಲ್ಲಾ.