ಬೆಳಗಾವಿ
ಆರ್ಥಿಕ ದುರ್ಬಲ ವರ್ಗಗಳಿಗೆ (EWS) ಕೇಂದ್ರ ಸರಕಾರ ಜಾರಿಗೆ ತಂದಿರುವ ಶೇ.10 ಮೀಸಲಾತಿಯಲ್ಲಿ ಶೇ.2ರಷ್ಟನ್ನು ಪಂಚಮಸಾಲಿಗಳಿಗೆ ವರ್ಗಾಯಿಸಲು ಪ್ರಯತ್ನಿಸಿ ಎಂದು ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಸವದಿ ಗುರುವಾರ ಹೇಳಿದರು.
ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡುತ್ತ ಬಗ್ಗೆ ಈ ಬಗ್ಗೆ ರಾಜ್ಯ ಸರಕಾರದಿಂದ ಪ್ರಸ್ತಾವನೆ ಕಳುಹಿಸಿ, ಕೇಂದ್ರದ ಮೇಲೆ ಒತ್ತಡ ಹೇರೋಣ ಎಂದು ಅವರು ಮನವಿ ಮಾಡಿದರು.
ಈ ಅಧಿವೇಶನ ಮುಕ್ತಾಯವಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧ್ಯಕ್ಷತೆಯಲ್ಲಿ ಸಮುದಾಯದ ಎಲ್ಲ ಶಾಸಕರ ಸಭೆ ನಡೆಸಿ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ನಾವು ಈ ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂದು ಬಯಸುತ್ತೇವೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪಂಚಮಸಾಲಿಗಳನ್ನು ಪ್ರವರ್ಗ 2ಎಗೆ ಸೇರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತ್ಯೇಕ ಪ್ರವರ್ಗ ಮಾಡಿ ನೀಡಬೇಕಾಗುತ್ತದೆ ಎಂದು ಹೇಳಿದ್ದರು.
ಪ್ರವರ್ಗ 2ಎ ಅಡಿಯಲ್ಲಿ 104 ಸಮಾಜಗಳಿವೆ. ಅವರಿಗೆ ಅನ್ಯಾಯ ಆಗಬಾರದು. ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ತಲಾ ಶೇ.2ರಷ್ಟು ಮೀಸಲು ನೀಡಲು ಬಸವರಾಜ ಬೊಮ್ಮಾಯಿಗೆ ಸಲಹೆ ನೀಡಿದ್ದರು. ಅದರಂತೆ, ಅವರು ಮೀಸಲಾತಿ ಅನುಷ್ಠಾನ ತರಲು ಪ್ರಯತ್ನ ಮಾಡಿದ್ದರು. ಸುಪ್ರೀಂಕೋರ್ಟ್‍ನಲ್ಲಿ ಈ ಬಗ್ಗೆ ಪಿಐಎಲ್ ದಾಖಲು ಮಾಡಿದ್ದರಿಂದ ತಡೆಯಾಜ್ಞೆ ಬಂತು. ಅದಕ್ಕಾಗಿ, ಈ ಎಲ್ಲ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.
ಹೋರಾಟಗಾರರ ಮೇಲೆ ನಡೆದಂತಹ ಲಾಠಿಚಾರ್ಜ್ ದುರಂತ. ಅದಕ್ಕಾಗಿ ವಿಷಾದವಿದೆ. ಸರಕಾರದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ, ಎಂದು ಲಕ್ಷ್ಮಣ ಸವದಿ ಹೇಳಿದರು.
ಪಂಚಮಸಾಲಿಗಳಿಗೆ
EWS 10 % ನಲ್ಲಿ
ಮೀಸಲಾತಿ ಕೊಡುವ
ಅಧಿಕಾರ ಕೇಂದ್ರಕ್ಕೆ ಇದೆ.
ಅದರಲ್ಲಿ 2 % ಕೊಟ್ಟರೂ
ಸಾಕು ಬಡ ವಿದ್ಯಾರ್ಥಿಗಳಿಗೆ
ಅನುಕೂಲವಾಗುತ್ತದೆ.
EWS ಅಡಿಯಲ್ಲಿ ನೇರವಾಗಿ ಮಾಡಲು ಬರಲಿಕ್ಕಿಲ್ಲ. ಆದರೆ ಅಂತಹ ವಿಶೇಷ ತಿದ್ದುಪಡಿಯನ್ನು ತಂದು ಮಾಡಲಿ. ಅಥವಾ EWS ಅಡಿಯಲ್ಲಿನ 10% ನಲ್ಲಿ 2% ಕಡಿಮೆ ಮಾಡಿ ಪಂಚಮಸಾಲಿ ಸಮಾಜಕ್ಕೆ ಕೊಡಲಿ.