ಆಶೀರ್ವಚನ ನೀಡಿದ ಶ್ರೀಗಳು ಪಂಚ ಪೀಠದ ಜಗದ್ಗುರುಗಳೊಬ್ಬರ ಸಮ್ಮುಖದಲ್ಲಿ, ಅವರ ಮೂಲಕವೇ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಅನಾವರಣಗೊಂಡಿದೆ. ಇದು ಬಸವ ತತ್ವದ ಮತ್ತು ಪಂಚ ಪೀಠಗಳ ನಡುವೆ ಯಾವುದೇ ಕಂದಕವಿಲ್ಲ ಎಂದು ತೋರಿಸುತ್ತದೆ ಎಂದು ಹೇಳಿದರು.
ತುಂಗಳ (ಜಮಖಂಡಿ)

ಜಮಖಂಡಿ ಬಳಿಯ ತುಂಗಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಬಸವೇಶ್ವರರ ಪುತ್ಥಳಿಯನ್ನು ಶ್ರೀಶೈಲ ಪಂಚಾಚಾರ್ಯ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶ್ರೀಗಳು ರವಿವಾರ ಅನಾವರಣಗೊಳಿಸಿದರು.
ಕಾರ್ಯಕ್ರಮದ ಅಂಗವಾಗಿ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆಯೂ ಗ್ರಾಮದಲ್ಲಿ ನಡೆಯಿತು. ಶ್ರೀಗಳ ಅಡ್ಡಪಲ್ಲಕ್ಕಿ ಮುಂದೆ ಹೋದಂತೆ ಅವರ ಹಿಂದೆ ಸ್ವಲ್ಪ ದೂರದಲ್ಲಿ ಬಸವಣ್ಣನವರ ಭಾವಚಿತ್ರವನ್ನೂ ಕೂಡ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು.
ವಿಜಯಪುರ ಶಾಸಕ ಬಸನ ಗೌಡ ಯತ್ನಾಳ್ ಸೇರಿದಂತೆ ಹಲವಾರು ಸ್ಥಳೀಯ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಆಶೀರ್ವಚನ ನೀಡಿದ ಶ್ರೀಗಳು ಪಂಚ ಪೀಠದ ಜಗದ್ಗುರುಗಳೊಬ್ಬರ ಸಮ್ಮುಖದಲ್ಲಿ, ಅವರ ಮೂಲಕವೇ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಅನಾವರಣಗೊಂಡಿದೆ. ಇದು ಬಸವ ತತ್ವದ ಮತ್ತು ಪಂಚ ಪೀಠಗಳ ನಡುವೆ ಯಾವುದೇ ಕಂದಕವಿಲ್ಲ ಎಂದು ತೋರಿಸುತ್ತದೆ ಎಂದು ಹೇಳಿದರು.

ಆದರೆ ಕೆಲವರು ಬಸವಣ್ಣನವರ ಹೆಸರಿನಲ್ಲಿ ಒಂದು ಗುಂಪನ್ನು ಹೀಯಾಳಿಸಿಕೊಂಡು ಒಂದು ಕಂದಕ ಸೃಷ್ಟಿಸುತ್ತಿದ್ದಾರೆ. ಆ ಕಂದಕವಿಲ್ಲದಿದ್ದರೆ ಅವರ ಅಸ್ತಿತ್ವವೇ ನಾಶವಾಗುತ್ತದೆ. ಬಸವೇಶ್ವರರ ಪುತ್ಥಳಿ ಅನಾವರಣ ಮತ್ತು ಪಂಚ ಪೀಠದವರ ಅಡ್ಡ ಪಲ್ಲಕ್ಕಿ ಉತ್ಸವವನ್ನು ನಡೆಸುವುದರ ಮೂಲಕ ತುಂಗಳ ಗ್ರಾಮಸ್ಥರು ಅವರಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದರು.
ಬಸವಣ್ಣನವರು ಎಲ್ಲರನ್ನು ಸೇರಿಸಿ ಒಂದು ಸಮಾಜವನ್ನು ಕಟ್ಟಿದರು ಇಂದು ಅವರ ಹೆಸರಿನಲ್ಲಿಯೇ ಅದನ್ನು ಒಡೆಯುವ ಕೆಲಸವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದು ನಾವೆಲ್ಲ ನಮ್ಮ ಒಳ ಪಂಗಡಗಳನ್ನು ಮರೆತು ಒಗ್ಗಟ್ಟಾಗಿ ನಿಲ್ಲಬೇಕು. ಇಲ್ಲದಿದ್ದರೆ ಶತ್ರುಗಳ ಮುಂದೆ ಶೋಚನೀಯವಾಗಿ ನಿಲ್ಲಬೇಕಾಗುತ್ತದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಶ್ರೀಗಳು ಲಿಂಗಾಯತ ಮತ್ತು ವೀರಶೈವ ಸಮುದಾಯಗಳನ್ನು ಒಂದುಗೂಡಿಸಲು ಹಲವಾರು ಹೇಳಿಕೆಗಳನ್ನು ನೀಡಿದ್ದಾರೆ.
ತೇರದಾಳದ ಕಾರ್ಯಕ್ರಮದಲ್ಲಿ ಗುರು ಹಾಗೂ ವಿರಕ್ತ ಪರಂಪರೆಗಳು ಬೇರೆ ಬೇರೆಯಲ್ಲ ಎಂದು ಹೇಳಿದ್ದರು. ಅದಕ್ಕೂ ಮುನ್ನ ಗಜೇಂದ್ರಗಡದಲ್ಲಿ ಬಸವಣ್ಣನವರು, ಪಂಚಪೀಠಗಳು ಶತ್ರುಗಳಲ್ಲ ಎಂದು ಹೇಳಿದ್ದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಬಸವಣ್ಣನವರ ಪುತ್ಥಳಿಯ ಅನಾವರಣ ಕಾರ್ಯಕ್ರಮಕ್ಕೂ ಹಾಜರಾಗಿದ್ದಾರೆ.

ಇವರದು ಅತಿಯಾಯ್ತು, ಯಾಕೀ ಗೋಳಾಟ
ಶೈವ ಪರಂಪರೆ ಮತ್ತು ಬಸವ ಧರ್ಮ ಎರಡು ಭಿನ್ನವೇ ಅವೆರಡು ಒಂದಲ್ಲ
ಇವರ ಮಾತುಗಳು, ಜನರು ಹೆಗಲ ಮೇಲೆ ಹೊರುವ ಅಡ್ಡ ಪಲ್ಲಕ್ಕಿ ಉತ್ಸವ ಇವೆಲ್ಲವನ್ನೂ ನೋಡಿದರೆ ಇವರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.