ಅಭಿಯಾನದ 17ನೇ ದಿನದ ಲೈವ್ ಬ್ಲಾಗ್
ಕಲ್ಯಾಣಗೀತೆಯೊಂದಿಗೆ ಸಮಾವೇಶ ಮಂಗಳ.
ಆಶೀರ್ವಚನ, ಗಣ್ಯರ ಮಾತು
ಭಾಲ್ಕಿ ಬಸವಲಿಂಗ ಪಟ್ಟದ್ದೇವರಿಂದ, ಹುಲಸೂರು ಶಿವಕುಮಾರ ಶ್ರೀಗಳಿಂದ ಆಶೀರ್ವಚನ. ಉದ್ಯಮಿ, ರಾಜಕಾರಣಿ ಪ್ರಸಾದರಾಜ್ಯ ಕಾಂಚನ, ಉಡುಪಿ ಪುರಸಭೆ ಅಧ್ಯಕ್ಷ ಪ್ರಭಾಕರ ಪೂಜಾರ, ಲಾಲಾಜಿ ಮೆಂಡನ್ ಅವರಿಂದ ಆಶಯ ನುಡಿ.
ಭರತ ನಾಟ್ಯದಲ್ಲಿ ಗಿನ್ನಿಸ್ ದಾಖಲೆ ಮಾಡಿದ ದೀಕ್ಷಾ ಆಚಾರ್ಯ ಅವರನ್ನು ಸತ್ಕರಿಸಲಾಯಿತು.
ಉಡುಪಿ ಶಾಸಕ ಯಶಪಾಲ ಸುವರ್ಣ ಅವರಿಂದ ಅಧ್ಯಕ್ಷೀಯ ಮಾತುಗಳು.
ಶಾಂತನಗೌಡ ದೂರನಹಳ್ಳಿ ಅವರಿಂದ ಶರಣು ಸಮರ್ಪಣೆ.

ರಂಜಾನ್ ದರ್ಗಾ: ‘ಕಲ್ಯಾಣದ ಬೆಳಕು’
ರಂಜಾನ್ ದರ್ಗಾ ಅವರಿಂದ ‘ಕಲ್ಯಾಣದ ಬೆಳಕು’ ವಿಷಯದ ಮೇಲೆ ಅನುಭಾವ.

ಸಾರ್ವಜನಿಕ ಸಮಾವೇಶ
ಪುರಭವನದಲ್ಲಿ ಸಾರ್ವಜನಿಕ ಸಮಾವೇಶ ಆರಂಭ. ಪೂಜ್ಯರು, ಗಣ್ಯರು ಜ್ಯೋತಿ ಬೆಳಗಿಸಿ ಸಮಾವೇಶ ಉದ್ಘಾಟಿಸಿದರು.


ಮಳೆಯಲ್ಲೇ ಸಾಗಿದ ಸಾಮರಸ್ಯ ನಡಿಗೆ
ಸಣ್ಣದಾಗಿ ಬರುತ್ತಿದ್ದ ಮಳೆಯಲ್ಲೇ ಪಾದಯಾತ್ರೆ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಸ್ಮಾರಕದಿಂದ ಪುರಭವನದವರೆಗೆ ಸಾಗಿತು.






ಮಂಗಲ
ಕಲ್ಯಾಣ ಗೀತೆಯೊಂದಿಗೆ ಸಂವಾದ ಮಂಗಲಗೊಂಡಿತು. ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ವಚನ ಪುಸ್ತಕ ನೀಡಿ ಗೌರವಿಸಲಾಯಿತು.
ಬಂದ ಪ್ರಶ್ನೆಗಳು
- ಬಸವ ಧರ್ಮ ಏಕೆ ಪ್ರಗತಿಪರರ ಕಣ್ಮಣಿಯಾಗಿದೆ?
- ಆಸೆ ಏಕೆ ಶರಣ ತತ್ವದ ವಿರೋಧಿಯಾಗಿದೆ?
- ಕಾಯಕ ತತ್ವ ಎಂದರೇನು?
- ಬಸವ ತತ್ವದ ಮೂಲ ಉದ್ದೇಶವೇನು?
- ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಕ್ಕೆ ಇರುವ ಸಾಮ್ಯತೆ ವ್ಯತ್ಯಾಸ ಏನು?
- ಬಸವಣ್ಣನವರ ವಚನಗಳ ಉದ್ದೇಶಗಳೇನು?
- ಕಲ್ಯಾಣ ಕ್ರಾಂತಿ ಏಕಾಯಿತು?
- ದಾಸೋಹ ತತ್ವ ಎಂದರೇನು?
- ಧರ್ಮ ಕೂಡಿಸುವ ಕೆಲಸ ಮಾಡುತ್ತದೆ ಎಂದಿರಿ. ಆದರೆ ಸನಾತನ ಧರ್ಮವನ್ನು ಒಡೆದು ಲಿಂಗಾಯತ ಧರ್ಮವನ್ನು ಮಾಡಿದ್ದಲ್ಲವೇ?
- ಲಿಂಗಪೂಜೆಯಿಂದ ಆತ್ಮಕಲ್ಯಾಣ ಹೇಗಾಗುತ್ತದೆ?
- ದೇಶದಲ್ಲಿ ಹಲವಾರು ಧರ್ಮಗಳಿವೆ. ಲಿಂಗಾಯತ ಸನಾತನ ಧರ್ಮದ, ಹಿಂದೂ ಧರ್ಮದ ಭಾಗವೇ?
- ವೀರಶೈವ ಲಿಂಗಾಯತ ಸ್ವಾಮಿಗಳಲ್ಲಿ ಭೇದ ಸರಿಯೇ? ಅದು ಇದೆಯಾ?
ಕದಡುತ್ತಿರುವ ಸಾಮರಸ್ಯವನ್ನು ಮತ್ತೆ ಸಾಧಿಸಲು ಸ್ವಾಮೀಜಿಗಳ ಪ್ರಯತ್ನವೇನು? - ಬಸವಪೂರ್ವದ ಗ್ರಂಥ ಸಿದ್ಧಾಂತ ಶಿಖಾಮಣಿಯೆ?
- ಮೋಕ್ಷಪ್ರಾಪ್ತಿಗಾಗಿಯೇ ಹುಟ್ಟುವುದಾದರೆ ಏಕೆ ಹುಟ್ಟಬೇಕು?
- ಜೀವನ ಒಂದು ಭ್ರಮೆ ಎನ್ನುವುದರ ಅರ್ಥವೇನು?
ದೃಶ್ಯಗಳಲ್ಲಿ ಸಂವಾದ







ಸಂವಾದ ಉದ್ಘಾಟನೆ
ಪೂಜ್ಯರು, ಗಣ್ಯರು, ವಿದ್ಯಾರ್ಥಿಗಳಿಂದ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ. ಬಸವ ಮೂರ್ತಿಗೆ ಪುಷ್ಪಾರ್ಪಣೆ. ಶೇಗುಣಸಿ ಮಹಾಂತಪ್ರಭು ಸ್ವಾಮಿಗಳಿಂದ ಆಶಯ ನುಡಿ.
ಉಡುಪಿಯಲ್ಲಿ ಎಲ್ಲರಿಗೂ ಶರಣು ಶರಣಾರ್ಥಿ ಹೇಳಿಸಿದ ಶೇಗುಣಸಿ ಶ್ರೀಗಳು.


ಉಡುಪಿ
ಅಭಿಯಾನದ ಲೈವ್ ವಿಡಿಯೋ
ಇಂದಿನ ಕಾರ್ಯಕ್ರಮ
ಸಂವಾದ
ಮುಂಜಾನೆ 11 ಗಂಟೆಗೆ ‘ವಚನ ಸಂವಾದ’ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ, ಆರೂರು ಲಕ್ಷ್ಮೀನಾರಾಯಣ ಪುರಭವನ.
ಮೆರವಣಿಗೆ
ಮಧ್ಯಾಹ್ನ 3:30ಕ್ಕೆ ‘ಸಾಮರಸ್ಯ ನಡಿಗೆ’ ಸರ್ವಿಸ್ ಬಸ್ ನಿಲ್ದಾಣದಿಂದ ಪುರಭವನದವರೆಗೆ.
ಬಹಿರಂಗ ಸಭೆ
ಸಂಜೆ 5 ಗಂಟೆಗೆ ಸಾರ್ವಜನಿಕ ಸಮಾವೇಶ, ಆರೂರು ಲಕ್ಷ್ಮೀ ನಾರಾಯಣ ಪುರಭವನ.
ಅನುಭಾವ:
ಹೊಸದುರ್ಗದ ಪೂಜ್ಯ ಶಾಂತವೀರ ಸ್ವಾಮೀಜಿಗಳಿಂದ ‘ಲಿಂಗಾಯತ ಧರ್ಮದ ನೀತಿಶಾಸ್ತ್ರ’ ವಿಷಯವಾಗಿ ಮತ್ತು ಧಾರವಾಡದ ರಂಜಾನ್ ದರ್ಗಾ ಅವರಿಂದ ‘ಕಲ್ಯಾಣದ ಬೆಳಕು’ ವಿಷಯವಾಗಿ ಉಪನ್ಯಾಸ ನಡೆಯಲಿದೆ.
ನಾಟಕ
ರಾತ್ರಿ 8 ಗಂಟೆಗೆ ‘ಜಂಗಮದೆಡೆಗೆ’ ನಾಟಕ ಶಿವಸಂಚಾರ ತಂಡ ಸಾಣೇಹಳ್ಳಿ ಇವರಿಂದ.