ಉಡುಪಿ
ಶರಣ ಮಾಸದಂಗವಾಗಿ, ಅರೂಹಿನ ಮಹಾಮನೆಯ ಶರಣರ ಅನುಭಾವ ಸಂಗಮ 12ನೇ ದಿನದ ಕಾರ್ಯಕ್ರಮ ಕರಂಬಳ್ಳಿಯಲ್ಲಿ ಮಂಗಳವಾರ ನಡೆಯಿತು.
ದಾಸೋಹಿಗಳಾದ ದೇವೇಂದ್ರ ಬಸನಗೌಡ ಬಿರಾದಾರ ತಮ್ಮ ನಿವಾಸದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಓಂಕಾರದೊಂದಿಗೆ ಪ್ರಸ್ತಾವನೆಗೈದರು.
ಸಂಗಪ್ಪ ತಡವಾಲ ಅವರು ಬಸವಾದಿ ಶರಣ ವೈದ್ಯ ಸಂಗಣ್ಣ ಚರಿತ್ರೆ ಕುರಿತು ಪ್ರವಚನ ನೀಡಿದರು.
ಜಗನ್ನಾತಪ್ಪ ಪನಸಾಲೆ ಪ್ರಾರ್ಥನೆ ಸಲ್ಲಿಸಿದರು. ಪ್ರಸನ್ನ ಹಿರೇಮಠ ಸಹಕರಿಸಿದರು.
ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಅವರು ದಾಸೋಹ ದಂಪತಿಗಳನ್ನು ಅಭಿನಂದಿಸಿದರು.
ಮಹಾಮನೆಯಲ್ಲಿ ಮಕ್ಕಳು ಮನೆಯ ಮತ್ತು ನೆರೆಮನೆಯ ಶರಣ, ಶರಣೆಯರು ಪಾಲ್ಗೊಂಡರು. ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.