ಪೂಜ್ಯ ತಿಪ್ಪೇರುದ್ರಸ್ವಾಮಿ ನೇತೃತ್ವದಲ್ಲಿ ‘ಜನಗಳೆಡೆಗೆ ಜಂಗಮರ ನಡಿಗೆ’

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಗೋಕಾಕ:

ಬಸವಾದಿ ಶರಣರ ವಚನ ಸಂದೇಶ ಸಾರುತ್ತ, ಹಸಿರು ಜಾಗೃತಿ ಮೂಡಿಸುವ ಮೂರನೇ ವರ್ಷದ ಕಾರ್ಯಕ್ರಮ ”ಉಳವಿ ಪಾದಯಾತ್ರೆ -2026” ಜನೇವರಿ 19ರಿಂದ 30ರವರೆಗೆ ಹೊಳಲ್ಕೆರೆ ಒಂಟಿಕಂಬದ ಪೂಜ್ಯ ತಿಪ್ಪೇರುದ್ರಸ್ವಾಮಿ ನೇತೃತ್ವದಲ್ಲಿ, ಘಟಪ್ರಭಾದ ಪೂಜ್ಯ ಗುರುಬಸವ ಸ್ವಾಮೀಜಿ ಸಹಭಾಗಿತ್ವದಲ್ಲಿ ನಡೆಯಲಿದೆ.

ಗೋಕಾಕ ತಾಲೂಕಿನ ಬಾಳೋಬಾಳ ಗ್ರಾಮದಲ್ಲಿ 18ರಂದು ಸಂಜೆ 6 ಘಂಟೆಗೆ ಪಾದಯಾತ್ರೆ, ಗ್ರಾಮದ ಬಸವಯೋಗ ಮಂಟಪದ ಲಿಂಗೈಕ್ಯ ಪೂಜ್ಯ ಸಂಗನಬಸವ ಸ್ವಾಮೀಜಿ ನೆನಪಿಗಾಗಿ ಪರಿಸರದೊಂದಿಗೆ, ಧಮ೯ ಜಾಗೃತಿಗಾಗಿ “ಜನಗಳೆಡೆಗೆ ಜಂಗಮರ ನಡಿಗೆ” ಎಂಬ ಘೋಷಣೆಯೊಂದಿಗೆ ಉದ್ಘಾಟನೆಗೊಳ್ಳಲಿದೆ.

ಸುಮಾರು 200ಕಿ. ಮೀ ಅಂತರದ ಪಾದಯಾತ್ರೆ 19ರಂದು ಗೋಕಾಕ ನಗರದಿಂದ ಆರಂಭವಾಗಿ ಬೆಣಚಿನಮರಡಿ, ಕೊರವಿ, ಮೇಕಲಮರಡಿ, ಇಂಚಲ, ಬೈಲಹೊಂಗಲ, ನಯಾನಗರ, ಸಂಗೊಳ್ಳಿ, ಹಿರೇನಂದಿಹಳ್ಳಿ, ಚಿಕ್ಕನಂದಿಹಳ್ಳಿ ಬಸವಣ್ಣ, ಕಿತ್ತೂರು, ಬೈಲೂರು, ಕಕ್ಕೇರಿ, ಲಿಂಗನಮಠ, ಅಳ್ನಾವರ,ಹಳ್ಳವಾರ, ಹಳಿಯಾಳ, ಧನಗರಗೌಳಿವಾಡ, ತಾವಗೇರಾ, ದಾಂಡೇಲಿ, ಪ್ರಧಾನಿ, ಪೋಟೋಳಿ, ಉಳವಿ ಚನ್ನಬಸವೇಶ್ವರ ಮಹಾಮನೆ 30ರಂದು ತಲುಪುವದು. ಒಟ್ಟು 12 ದಿನ ಯಾತ್ರೆ ಜರುಗುವುದು.

ಪ್ರತಿದಿನ ಸಂಜೆ ತಂಗುವ ಸ್ಥಳಗಳಲ್ಲಿ ಪ್ರವಚನ, ಇಷ್ಟಲಿಂಗ ಪೂಜೆ, ಬಸವ ಸ್ತೋತ್ರ, ಪ್ರಸಾದ ದಾಸೋಹ ನಡೆಯುವುದು. ಕಲಘಟಗಿಯ ಶ್ರೀ ಚೆನ್ನಬಸವ ಸ್ವಾಮೀಜಿಯವರಿಂದ ಪ್ರತಿದಿನ ಪ್ರವಚನ ನಡೆಯುವದು.

ಉಳವಿ ಮಹಾಮನೆ ಪಾದಯಾತ್ರೆ ಸಮಿತಿ, ಉಳವಿ ಚನ್ನಬಸವೇಶ್ವರ ಮಹಾಮನೆ ದಾಸೋಹ ಸಮಿತಿ, ಬಸವಯೋಗ ಮಂಟಪ ಬಳೋಬಾಳ, ಬ್ರಹ್ಮವಿದ್ಯಾ ಸಮಾಜ ಚಿತ್ರದುರ್ಗ, ಶ್ರೀ ಕುಂಪಿ ಬಸವೇಶ್ವರ ಪಾದಯಾತ್ರಾ ಕಮಿಟಿ ಬೆಣಚನಮರಡಿ, ಕನಾ೯ಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಗೋಕಾಕ, ಹೊಳಲ್ಕೆರೆ ಶಾಖೆಗಳು ಪಾದಯಾತ್ರೆಗೆ ಕೈಜೋಡಿಸಿವೆ.

ಫೆಬ್ರುವರಿ 3ರಂದು ಮಂಗಳವಾರ ಉಳವಿ ಚನ್ನಬಸವೇಶ್ವರ ರಥೋತ್ಸವ ಜರುಗುವುದು. ಶ್ರೀ ಉಳವಿ ಚನ್ನಬಸವೇಶ್ವರ ಮಹಾಮನೆ ದಾಸೋಹ ಸಮಿತಿಯಿಂದ ಮಹಾಮನೆಯಲ್ಲಿ ಜನೇವರಿ 31ರಿಂದ ಫೆಬ್ರುವರಿ 2ರವರೆಗೆ ಅನ್ನದಾಸೋಹ, ಜ್ಞಾನದಾಸೋಹ ಏಪ೯ಡಿಸಲಾಗಿದೆ.

ಬಸವಾದಿ ಶಿವಶರಣರ ತ್ಯಾಗ ಬಲಿದಾನಗಳಿಂದ ಉಳಿದ ವಚನ ಸಾಹಿತ್ಯವನ್ನು ಜನಮಾನಸದಲ್ಲಿ ಸದಾ ಜೀವಂತ ಉಳಿಸುವ ಪ್ರಯತ್ನಕ್ಕಾಗಿ ಈ ಪಾದಯಾತ್ರೆ ಪ್ರತಿವರ್ಷ ನಡೆಸಲಾಗುತ್ತದೆ. ಪರಿಸರ ಪ್ರೇಮಿಗಳಾದ ಶರಣರ ಆಶಯದಂತೆ ಪಾದಯಾತ್ರೆಗುಂಟ ಹಸಿರು ಜಾಗೃತಿ ಮೂಡಿಸುತ್ತ ಸಾಗಲಾಗುತ್ತದೆ ಎಂದು ಒಂಟಿಕಂಬದ ಪೂಜ್ಯ ತಿಪ್ಪೆರುದ್ರಸ್ವಾಮೀಜಿ ಬಸವ ಮೀಡಿಯಾದೊಂದಿಗೆ ಮಾತನಾಡುತ್ತ ಹೇಳಿದರು.

ಪಾದಯಾತ್ರೆಯ ಹೆಚ್ಚಿನ ಮಾಹಿತಿಗಾಗಿ 8431120312,  9902465060,  998073396 ಈ ಮೊಬೈಲ್ ಸಂಖ್ಯೆಗಳನ್ನು ಸಂಪಕಿ೯ಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *