ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಕೊನೆಯಾಗಲಿ

ಬೆಳಗಾವಿ

ಲಿಂಗಾಯತ ಸಂಘಟನೆ ವತಿಯಿಂದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರ ಸಾಮೂಹಿಕ ಪ್ರಾರ್ಥನೆ, ವಚನಗಳ ವಿಶ್ಲೇಷಣೆ, ರಾಜ್ಯೋತ್ಸವ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ರಾಜ್ಯೋತ್ಸವ ಕುರಿತು ಜಲತ್ಕುಮಾರ ಪುನಜಗೌಡ್ರ ಅವರು ಕನಾ೯ಟಕ ರಾಜ್ಯೋತ್ಸವ ಕುರಿತು ಉಪನ್ಯಾಸ ನೀಡುತ್ತಾ, ಭಾರತ ದೇಶ ಸ್ವತಂತ್ರವಾದ ನಂತರ ಭಾಷಾವಾರು ಪ್ರಾಂತ ವಿಂಗಡನೆಯೊಂದಿಗೆ ರಾಜ್ಯಗಳ ಉದಯವಾಯಿತು. ಆ ಪ್ರಕಾರ, ರಾಜ್ಯದ ಕೇಂದ್ರ ಭಾಗವಾದ ಹಾವೇರಿ ಅಥವಾ ದಾವಣಗೆರೆಯನ್ನು ಕರ್ನಾಟಕದ ರಾಜಧಾನಿಯನ್ನಾಗಿ ಘೋಷಿಸಬೇಕಿತ್ತು. ಆದರೆ ದಕ್ಷಿಣದ ತುದಿಗೆ ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡಿದ್ದರಿಂದ, ದಕ್ಷಿಣ ಕರ್ನಾಟಕ ಅಭಿವೃದ್ಧಿಯಾಯಿತು.

ಆದರೆ ಉತ್ತರ ಕರ್ನಾಟಕದ ಭಾಗಗಳು ಅಭಿವೃದ್ಧಿಯಲ್ಲಿ ಹಿಂದುಳಿದವು. ಈ ಕಾರಣದಿಂದಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಆಗಾಗ ಕೇಳಿ ಬರುತ್ತದೆ. ಆದ್ದರಿಂದ ಸಂಪನ್ಮೂಲಗಳ ಸಮಾನ ಹಂಚಿಕೆಯಾಗುವಂತೆ ಸರ್ಕಾರಗಳು ನೋಡಿಕೊಳ್ಳಬೇಕು. ಇದಕ್ಕಾಗಿ ಎಲ್ಲರೂ ಜಾಗ್ರತೆ ಹೊಂದಬೇಕು ಎಂದು ಸಂದೇಶ ನೀಡಿದರು.

ನ್ಯಾಯವಾದಿ ಸುನೀಲ ಸಾಣಿಕೊಪ್ಪ ಮಾತನಾಡುತ್ತ, ಠೇವಣಿದಾರರ ವಿಶೇಷ ನ್ಯಾಯಾಲಯದಂತಹ ಅನೇಕ ನ್ಯಾಯಾಲಯಗಳು, ಸಕ್ಕರೆ ನಿರ್ದೇಶನಾಲಯದಂತಹ ಹಲವಾರು ಇಲಾಖೆಗಳು, ಅಧಿಕಾರಿಗಳು ಬೆಂಗಳೂರಿನಲ್ಲಿಯೇ ಇರುವ ಕಾರಣ ಇಲ್ಲಿನ ಜನರಿಗೆ ಆಗುತ್ತಿರುವ ತೊಂದರೆ ಅನ್ಯಾಯಗಳ ಕುರಿತು ವಿವರಿಸಿದರು.

ಬೆಳಗಾವಿ ಎರಡನೇ ರಾಜಧಾನಿ ಎಂದು ಘೋಷಿಸಿ ಕೋಟ್ಯಾಂತರ ರೂಪಾಯಿ ಸುರಿದು ಸುವಣ೯ಸೌಧ ಕಟ್ಟಿದ್ದರೂ ಕೇವಲ 15 ದಿನ ಕಾಟಾಚಾರದ ಅಧೀವೇಶನ ನಡೆಸುವರು. ಇಲ್ಲಿನ ಅಭಿವೃದ್ಧಿಯಾಗಬೇಕಾದರೆ, ರಾಜ್ಯ ವಿಭಜನೆಯಾಗುವುದು ಬೇಕಿಲ್ಲ ಆದರೆ ಆಡಳಿತ ವಿಭಜನೆಯಾಗಬೇಕು.

ಅದಕ್ಕಾಗಿ ಬೆಂಗಳೂರಿನಲ್ಲಿರುವ ಸಚಿವಾಲಯದಂತೆ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆಯಾಗಬೇಕು, ಸುವಣ೯ಸೌಧದಲ್ಲಿ ವಿಧಾನಸೌಧದಂತೆ ಎಲ್ಲ ಕಛೇರಿಗಳು ಪ್ರಾರಂಭಗೊಳ್ಳಲಿ ಎಂದರು.

ಅಧ್ಯಕತೆ ವಹಿಸಿದ ಈರಣ್ಣಾ ದೇಯಣ್ಣವರು ಮಾತನಾಡುತ್ತಾ, ಈ ಬಾರಿ ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಿದೆವು ಎಂದರು. ಅದರಲ್ಲಿ ಲಿಂಗಾಯತ ಸಂಘಟನೆ ಮುಂಚೂಣಿಯಲ್ಲಿ ನಿಂತು ಅರ್ಥಪೂರ್ಣ ರಾಜ್ಯೋತ್ಸವ ಆಚರಿಸಿದ್ದು ಹೆಮ್ಮೆಯ ಸಂಗತಿ ಎಂದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಮಾತನಾಡಿ ಇದು ನಮ್ಮ ರಾಜ್ಯದ ಸಮಸ್ಯೆಯಾದರೆ, ರಾಷ್ಟ್ರದ ಸಮಸ್ಯೆಯೂ ಇದೇ ರೀತಿ ಇದೆ. ರಾಷ್ಟ್ರದ ರಾಜಧಾನಿ ದೆಹಲಿಯ ಬದಲು ಮಧ್ಯಪ್ರದೇಶದಲ್ಲಿ ನೆಲೆಗೊಳ್ಳಬೇಕಿತ್ತು. ಅಲ್ಲದೇ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಡಲು ನಾಯಕರು ರೂಪಗೊಳ್ಳುವ ಅವಶ್ಯಕತೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.

ಆರಂಭದಲ್ಲಿ ಬಿ. ಪಿ. ಜೇವಣಿ ಅವರು ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು. ಮಹಾಂತೇಶ ಮೆಣಸಿನಕಾಯಿ ಅವರು ಉಪನ್ಯಾಸಕರ ಪರಿಚಯ ಮಾಡಿದರು. ಆನಂದ ಕರಕಿ ಕಾರ್ಯಕ್ರಮ ನಿರೂಪಿಸಿದರು. ಅಕ್ಕಮಹಾದೇವಿ ತೆಗ್ಗಿ, ವಿ. ಕೆ. ಪಾಟೀಲ, ಬಸವರಾಜ ಬಿಜ್ಜರಗಿ, ಜಯಶ್ರೀ ಚಾವಲಗಿ, ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.

ಬಸವರಾಜ ಬಿಜ್ಜರಗಿ, ಶಿವಾನಂದ ರೂಡಬಸನ್ನವರ, ಶಿವಾನಂದ ನಾಯಕ, ಬಸವರಾಜ ಕರಡಿಮಠ, ಕುಂಬಾರ, ಬಸನಗೌಡ ಪಾಟೀಲ, ಕಮಲಾ ಗಣಾಚಾರಿ, ಬಿ. ಬಿ. ಮಠಪತಿ, ಶಶಿಭೂಷಣ ಪಾಟೀಲ, ಸುಶೀಲಾ ಗುರವ, ಲಕ್ಷೀಕಾಂತ ಗುರವ, ಅನೀಲ ರಘಶೆಟ್ಟಿ, ಶಿವಲೀಲಾ ಶೆಟ್ಟರ ಮುಂತಾದ ಶರಣ ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
Leave a comment

Leave a Reply

Your email address will not be published. Required fields are marked *

ನ್ಯಾಯವಾದಿ, ಲೇಖಕ, ಬೆಳಗಾವಿ, ದೂ-9964546763, 8762492089