ಬಸವಕಲ್ಯಾಣ:
ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಹಾಗೂ ಮಾಸಿಕ ಶರಣ ಸಂಗಮ ಕಾರ್ಯಕ್ರಮ ರಾಷ್ಟ್ರೀಯ ಬಸವ ದಳದ ವತಿಯಿಂದ ನಡೆಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಪೂಜ್ಯ ಡಾ.ಗಂಗಾದೇವಿ ಮಾತಾಜಿ ಮಾತನಾಡಿ, ಗುರು ಬಸವಣ್ಣನವರ ವಿಶ್ವರೂಪ ದರ್ಶನ ಪಡೆಯಬೇಕಾಗಿದ್ದಲ್ಲಿ ಮಹಾನ್ ದಾರ್ಶನಿಕ ಶಿವಯೋಗಿ ಸಿದ್ದರಾಮೇಶ್ವರರ ವಚನಗಳನ್ನು ಅದ್ಯಯನ ಮಾಡಬೇಕು ಎಂದರು.
ಸಿದ್ದರಾಮೇಶ್ವರರು ಮಹಾಯೋಗಿಯಾಗಿ, ದಾರ್ಶನಿಕ ವಚನ ಸಾಹಿತ್ಯ ದ್ರಷ್ಟಾರ, ಶ್ರೇಷ್ಠ ಸಮಾಜ ಚಿಂತಕ, ಜನಪರ ಸಾಮಾಜಿಕ ಸುಧಾರಣೆ ಅಭಿವೃದ್ದಿಗಳ ಹರಿಕಾರರಾಗಿದ್ದರು. ಅವರ ವಚನಗಳು ಇಂದಿನ ಸಮಾಜಕ್ಕೆ ಧಿವ್ಯೌಷಧಗಳು ಎಂದು ಹೇಳಿದರು.

ಪೂಜ್ಯ ಲಾವಣ್ಯ ಮಾತಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮುಖವನ್ನು ಬೇಲೂರು ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ವಹಿಸಿದ್ದರು.
ವಾಣಿಜ್ಯ ಇಲಾಖೆಯ ಆಯುಕ್ತರಾದ ಡಾ. ಮಹೇಶ ಪಾಟೀಲ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಪೂಜ್ಯ ಮಾತಾಜಿ ಅವರು ನಿರ್ಮಿಸಿದ 108 ಅಡಿಯ ಬಸವಣ್ಣನವರ ಪ್ರತಿಮೆಯಿಂದ ಬಸವಕಲ್ಯಾಣಕ್ಕೆ ಕಳೆ ಬಂದಿದೆ ಎಂದರು.
ಉಪನ್ಯಾಸ ನೀಡುತ್ತ ಪೊ. ಮೀನಾಕ್ಷಿ ಬಿರಾದರ ಅವರು, ಹನ್ನೆಡನೆಯ ಶತಮಾನದಲ್ಲಿ ವರ್ಣ, ವರ್ಗ, ಲಿಂಗಭೇದಗಳಿಲ್ಲದೆ ಶರಣರ ಚಿಂತನ ಮಂಥನದಿಂದ ಹೊರ ಹೊಮ್ಮಿದ ವಚನಗಳು ಮನುಕುಲಕ್ಕೆ ದಾರಿ ದೀಪವಾಗಿವೆ ಎಂದು ಹೇಳಿದರು.
ಪೂಜ್ಯ ಬಸವಯೋಗಿ ಸ್ವಾಮೀಜಿ, ಪೂಜ್ಯ ಮಹದೇಶ್ವರ ಸ್ವಾಮೀಜಿ, ಜ್ಞಾನೇಶ್ವರಿ ಮಾತಾಜಿ ಹಲವಾರು ಪೂಜ್ಯರು ಉಪಸ್ಥಿತರಿದ್ದರು.

ಆರಂಭದಲ್ಲಿ ಸೋಮಶೇಖರ ಗಾದಗಿ ಮಾಡಿದರು. ನಿರೂಪಣೆಯನ್ನು ಅಂಬರೀಶ ಭಿಮಣ್ಣೆ, ಸ್ವಾಗತವನ್ನು ನಿರ್ಮಲಾ ಶಿವಣಕರ ಮಾಡಿದರು.
ಬಸವರಾಜ ಬುಳ್ಳಾ, ಚನ್ನಪ್ಪ ಪ್ರತಾಪುರೆ, ರಾಜೇಂದ್ರ ಗಂದಗೆ, ರವೀಂದ್ರ ಕೋಳಕುರ, ಸುರೇಶ ಸ್ವಾಮಿ, ಸಾಹಿತಿ ಸಂಗಮೇಶ ಜವದೆ, ಆಕಾಶ ಖಂಡಾಳೆ, ದತ್ತಾತ್ರೇಯ ರಾಗಾ, ಶಿವರಾಜ ನರಶೆಟ್ಟಿ, ಜಯಶ್ರೀ ಪಾಟೀಲ, ರಾಜಶ್ರೀ ಖೂಬಾ, ಸೋನಾಲಿ ನೀಲಕಂಠೆ, ಸವಿತಾ ಪ್ರತಾಪುರೆ, ಹಲವಾರು ಶರಣ ಶರಣೆಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪೂಜ್ಯ ಸಿದ್ದರಾಮೇಶ್ವರ ಸ್ವಾಮೀಜಿ ಅವರ 60 ನೇ ವರ್ಷದ ವರ್ಧಂತಿ ಪ್ರಯುಕ್ತ ಅವರನ್ನು ಸನ್ಮಾನಿಸಲಾಯಿತು.
