ಹುಬ್ಬಳ್ಳಿ ವಚನ ಬರವಣಿಗೆ ಸ್ಪರ್ಧೆ ಗೆದ್ದ ಶರಣೆಯರಿಗೆ ಬಹುಮಾನ ವಿತರಣೆ

ಕುಮಾರಣ್ಣ ಪಾಟೀಲ್
ಕುಮಾರಣ್ಣ ಪಾಟೀಲ್

IAS ಪರೀಕ್ಷೆ ಬರೆದವರಷ್ಟೇ ಶ್ರದ್ದೆಯಿಂದ ವಚನ ಬರವಣಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಶರಣೆಯರು

ಹುಬ್ಬಳ್ಳಿ

ಅಕ್ಷಯ ಕಾಲನಿಯ ಶರಣೆ ಗಂಗಾಬಿಕಾ ಬಳಗದಿಂದ ಶರಣೆಯರಿಗೆ ಏರ್ಪಡಿಸಿದ್ದ ವಚನ ಬರವಣಿಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಣೆ ಸಮಾರಂಭ ಸೋಮವಾರ ನಡೆಯಿತು.

ಬಳಗವು ಪ್ರತಿ ಸೋಮವಾರ ನಡೆಸುವ ಮಹಾಮನೆ ಕಾರ್ಯಕ್ರಮ 200 ಕಂತುಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗೃಹಿಣಿಯರಿಗಾಗಿ ಈ ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಸ್ಪರ್ಧಾ ವಿಜೇತರು:

ಪ್ರಥಮ, 65 ವಚನಗಳು : ಸೀಮಾ ಮದನಭಾವಿ

ದ್ವಿತೀಯ, 61 ವಚನಗಳು : ಶಾರದಾ ಪಾಟೀಲ

ತೃತೀಯ 58 ವಚನಗಳು : ಶೋಭಾ ಹನಗಂಡಿ ನಿವೃತ್ತ ಪ್ರಾಧ್ಯಾಪಕಿ.

ಸಮಾಧಾನಕರ :
ಶಶಿಕಲಾ ಕೊಡೇಕಲ್ಲ, ಮಂಜುಳಾ ಹಿರೇಮಠ.

ಹಿರಿಯ ನಾಗರಿಕರಿಗೆ ವಿಶೇಷ ಪ್ರಶಸ್ತಿ :
ಶಾಂತಮ್ಮ ಪಟ್ಟಣಶೆಟ್ಟಿ, ಶರಣೆ ಬಣಕಾರ

ಸಮಾರಂಭದಲ್ಲಿ ಗಂಗಾಂಬಿಕಾ ಬಳಗದ ಅಧ್ಯಕ್ಷೆ ಸ್ನೇಹಾ ಭೂಸನೂರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಚಿಕ್ಕಮಕ್ಕಳು ಹೇಗೆ ಪರೀಕ್ಷೆಗೆ ತಯಾರಿ ಮಾಡಿ ಬರೆಯುತ್ತಾರೊ ಹಾಗೆ ಮಹಿಳೆಯರು ಬಹಳ ಉತ್ಸಾಹದಿಂದ ವಚನಗಳನ್ನು ಬರೆದಿದ್ದಾರೆ ಎಂದರು. ವಚನ ಬರವಣಿಗೆ ಸ್ಪರ್ಧೆಯ ಉತ್ತರ ಪತ್ರಿಕೆಯ ಮೌಲ್ಯ ಮಾಪನ ಮಾಡಿದ ಪ್ರೊ. ಕೆ. ಎಸ್. ಕೌಜಲಗಿ ಅವರ ಕಾರ್ಯ ಸ್ಮರಿಸುವಂತಹದು ಎಂದರು.

ಅಧ್ಯಕ್ಷತೆಯನ್ನು ಕೆ. ಎಸ್. ಕೌಜಲಗಿ, ನಿವೃತ್ತ ಕನ್ನಡ ಪ್ರಧ್ಯಾಪಕರು ಇವರು ಮಾತನಾಡುತ್ತ, ಮಹಿಳೆಯರನ್ನು ಟಿವಿ, ಮೊಬೈಲ್ ಸಂಪರ್ಕದಿಂದ ಸ್ವಲ್ಪ ಸಮಯ ದೂರ ಇರಿಸಿ ವಚನಗಳನ್ನು ಬರೆಯಲು ಹಚ್ಚಿದ್ದು ಗಂಗಾಂಬಿಕಾ ಬಳಗದ ಪ್ರಯತ್ನ ಅನುಕರಣೀಯವಾದದ್ದು ಎಂದರು.

ಭಾರತ ರತ್ನ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ಪಂಡಿತರೊಬ್ಬರು ವಚನಗಳನ್ನು ಹಾಡಲು ನಿರಾಕರಿಸಿದಾಗ, ಹಿಂದುಸ್ಥಾನಿ ಗಾಯಕರಾದ ಸಿದ್ಧರಾಮ ಜಂಬಲದಿನ್ನಿ ಹಾಗೂ ಮಲ್ಲಿಕಾರ್ಜುನ ಮನ್ಸೂರ ಅವರು ಅದನ್ನು ಸವಾಲಾಗಿ ಸ್ವೀಕರಿಸಿ ವಚನಗಳನ್ನು ರಾಗಬದ್ಧವಾಗಿ ಹಾಡಿ ತೋರಿಸಿದ್ದು ಇತಿಹಾಸ ಎಂದರು.

ಮುಖ್ಯ ಅತಿಥಿಗಳಾಗಿ ಸಿದ್ಧಲಿಂಗಮ್ಮ ಹಿರೇಮಠ ಕನ್ನಡ ವಿಭಾಗದ ಮುಖ್ಯಸ್ಥರು ಪ್ರೇರಣಾ ವಿಜ್ಞಾನ ಮಹಾವಿದ್ಯಾಲಯ ಇವರು ಮಾತನಾಡುತ್ತ, ಅಂದು ವಚನಗಳನ್ನು ರಕ್ಷಣೆ ಮಾಡುತ್ತ ಗಂಗಾಂಬಿಕಾ ತಾಯಿ ಪ್ರಾಣತ್ಯಾಗ ಮಾಡಿದಳು, ಈ ಮಹಿಳಾ ಸಂಘಟನೆಗೆ ಗಂಗಾಂಬಿಕ ಬಳಗ ಎಂದು ಹೆಸರಿಟ್ಟದ್ದು ಸಾರ್ಥಕವಾಗಿದೆ, ಬಳಗವು ವಚನಗಳನ್ನು ಪ್ರಚಾರ ಮಾಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇತರರಿಗೂ ಮಾದರಿಯಾಗಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡುತ್ತ, ಗಂಗಾಂಬಿಕಾ ಬಳಗವು ಮುಂದೆಯೂ ವಚನಗಳ ಕಾರ್ಯಕ್ರಮ ಹಮ್ಮಿಕೊಂಡರೆ ಸಾಹಿತ್ಯ ಪರಿಷತ್ತು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಕದಳಿ ವೇದಿಕೆ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾ, ನಾವು ಮನೆಯಿಂದ ಹೊರಗೆ ಬಂದು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅವಿಸ್ಮರಣೀಯ, ಲಿಂಗಾಯತ ಸಮಾಜದಲ್ಲಿ ಇಂಥಾ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಜನರ ಮುಂದೆ ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ ಎಂದರು.

ಶಾರದಾ ಪಾಟೀಲ ಮಾತನಾಡಿ ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದು ಶರಣರು ಹೇಳಿದ್ದರೂ ಸಹಿತ ನಮಗೆ ಇನ್ನೂ ಅರ್ಥವಾಗಿಲ್ಲ. ಈ ವಚನ ಬರೆಯುವ ಸ್ಪರ್ಧೆ ನಮ್ಮ ಮನಸ್ಸಿಗೆ ಕವಿದ ಮಲಿನವನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿತು, ಅದಕ್ಕಾಗಿ ಗಂಗಾಂಬಿಕಾ ಬಳಗಕ್ಕೆ ಧನ್ಯವಾದ ಹೇಳುವೆ ಎಂದರು.

ಶಶಿಕಲಾ ಕೊಡೆಕಲ್ಲ ಸ್ವಾಗತಿಸಿದರು. ಸಂಜೋತಾ ಪಾಟೀಲ ವಚನ ಪ್ರಾರ್ಥನೆಯನ್ನು ಮಾಡಿದರು.
ಸೀಮಾ ಮದನಭಾವಿ ಶರಣು ಸಮರ್ಪಣೆ ಮಾಡಿದರು. ದ್ರಾಕ್ಷಾಯಿಣಿ ಕೋಳಿವಾಡ ಕಾರ್ಯಕ್ರಮ ನಿರೂಪಿಸಿದರು.

ಬಂದವರಿಗೆಲ್ಲ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Share This Article
1 Comment
  • ವಚನ ಗಾಯನದ ಜೊತೆಗೆ, ವಚನ ಅರ್ಥ ವಿವರಣೆಯನ್ನು ಕೊಡಬೇಕು. ಈ ತರಹದ ಸ್ಪರ್ದೆಯನ್ನು ಪ್ರಾಥಮಿಕ, ಪ್ರೌಡಶಾಲೆಯ ಶಿಕ್ಷಕ, ಶಿಕ್ಷಕಿಯರಿಗೆ ಏರ್ಪಡಿಸಬೇಕು. ಅವರು ತಾವು ಕಲಿಸುವ ಮಕ್ಕಳಿಗೂ ಸಂಧರ್ಭ ಅನುಸಾರ ಹೇಳಿ ಕೊಡುತ್ತಾರೆ. ಇದರಿಂದ ಲಿಂಗಾಯತ ಧರ್ಮದ ಪ್ರಚಾರದ ಜೊತೆಗೆ ಮೂಡ ನಂಬಿಕೆಯ ಹೋಗಲಾಡಿಸುತ್ತದೆ.

Leave a Reply

Your email address will not be published. Required fields are marked *