ವಚನ ದರ್ಶನ: ಶರಣರ ಭಾವಚಿತ್ರ ಹಾಕಲು ನಿಮ್ಮನ್ನು ಯಾರು ತಡೆದರು?

ಇಲ್ಲಿ ತೋರಿಸಿರುವ ಭಾರತ ದರ್ಶನ ಕೃತಿಯ ಮುಖಪುಟದಲ್ಲಿರುವ ಜಲಪಾತವನ್ನು ಯಾರು ನೋಡಿದರೂ, ಇದು “ಭಾರತ ಭೂಪಟ” ಎಂದು ತಿಳಿದುಕೊಳ್ಳುವುದು ಸಹಜ.

ಹಾಗೆಯೇ, ‘ವಚನ ದರ್ಶನ’ ಕೃತಿಯ ಮುಖಪುಟದ ಮೇಲಿರುವ ಚಿತ್ರ ಬಸವಣ್ಣನವರದು ಎಂದು ಎಲ್ಲರೂ ತಿಳಿಯುವುದು ಸಹಜ. ಆದರೆ ಇದರ ಗೌರವ ಸಂಪಾದಕರು, “ಇದು ಬಸವಣ್ಣನವರ ಭಾವಚಿತ್ರವಲ್ಲ, ನಾವು ಹಾಗೆ ಎಲ್ಲಿಯೂ ಹೇಳಿಯೇ ಇಲ್ಲ,” ಎನ್ನುತ್ತಾರೆ.

ಹೇಳಬೇಕಾದ ಅಗತ್ಯ ಇಲ್ಲ. ನೋಡಿದವರು ಭಾವಿಸಿಕೊಳ್ಳಬೇಕು, ಕೇಳಿದರೆ ತಪ್ಪಿಸಿಕೊಳ್ಳಬೇಕು, ಎನ್ನುವ ಕುತಂತ್ರ ಇದು. “ಲಿಂಗಾಯತ ಸಮಾಜ”ದ ಬುದ್ಧಿಗೇಡಿ ಜನರ ದಿಕ್ಕು ತಪ್ಪಿಸುವ ಕೆಲಸವಿದು. ಒಂದನ್ನು ತೋರಿಸಿ, ಬೇರೆಯದನ್ನು ಹೇಳಿದರೂ ತಿಳಿಯದ ಮೂರ್ಖ ಲಿಂಗಾಯತರು ಇದ್ದಾರೆಂದು ಅವರಿಗೆ ಗೊತ್ತಿದೆ.

ಹೀಗಾಗಿಯೇ, ಲಿಂಗಾಯತದ ಮೇಲೆ ನಿರಂತರ “ಧಾರ್ಮಿಕ ದಾಳಿ” ಮುಂದುವರೆಯುತ್ತಿದೆ.

ಮುಖ ಪುಟದ ಮೇಲಿರುವ ಯಾವ‌ ಶರಣರದೂ ಅಲ್ಲ, ಕೇವಲ “ಕಾಲ್ಪನಿಕ” ಎಂದಾದರೆ, ಒಳಗಿನ ಕಾಲ್ಪನಿಕವೋ?

“ವಾಸ್ತವಿಕ” ಎನ್ನುವುದಾದರೆ, ಪುಸ್ತಕಕ್ಕೆ ಒಂದಿಷ್ಟೂ ಹೋಲಿಕೆಯಾಗದ “ಕಾಲ್ಪನಿಕ ಚಿತ್ರ” ದ ಅವಶ್ಯಕತೆ ಏನಿತ್ತು. ನಿಜ ಶರಣರ ಭಾವಚಿತ್ರ ಹಾಕಲು ನಿಮ್ಮನ್ನು ಯಾರು ತಡೆದರು?

ವಾರದ ಎಲ್ಲ ದಿನಗಳು ಭಾನುವಾರ ಇರಲಾರವು, ಇದು ತಿಳಿದಿರಲಿ.

Share This Article
Leave a comment

Leave a Reply

Your email address will not be published. Required fields are marked *

ನಂದಿಕುಮಾರ ಪಾಟೀಲ್ ಅವರು ಚಿಂಚೋಳಿಯಲ್ಲಿ ವಕೀಲರಾಗಿ ಕಾಯಕ ಮಾಡುತ್ತಿದ್ದಾರೆ.