ವಚನ ದರ್ಶನ ಒಪ್ಪೋಣವೇ?

ಶರಣರ ವಚನಗಳು ಅಪಮೌಲ್ಯ ವಾಗುವುದನ್ನು ತಪ್ಪಿಸಲು ವಚನ ದರ್ಶನ ಪುಸ್ತಕ ಬಿಡುಗಡೆ ಮಾಡಿರುವುದಾಗಿ ಪುಸ್ತಕ ಸಂಪಾದಕರು ಹೇಳಿಕೊಂಡಿದ್ದಾರೆ

ಶರಣರನ್ನು ಪಾಶ್ಚಿಮಾತ್ಯ ಸಿದ್ಧಾಂತದ ಆಧಾರದಲ್ಲಿ ಅರ್ಥೈಸಿಕೊಳ್ಳವ ಪ್ರಯತ್ನ ನಡೆದಿದೆ ಎಂಬುದು ಆ ಪುಸ್ತಕ ಬರೆದ ಲೆಖಕರ ಅಭಿಪ್ರಾಯ

ಬಸವಾದಿ ಶರಣರು ಭಕ್ತಿಯ ಪಥದಲ್ಲಿ ಸಾಗಿದವರು ಅವರದು ಭಕ್ತಿ ಚಳುವಳಿ ಶರಣರು ಶ್ರೇಷ್ಠ ಶಿವ ಭಕ್ತರು ಶ್ರೇಷ್ಠ ಆಧ್ಯಾತ್ಮಿಕ ಸಾಧನೆ ಮಾಡಿದವರು ಎಂಬುದು ಈ ಪುಸ್ತಕದ ಲೇಖಕರ ಅಭಿಪ್ರಾಯ

ಶರಣರು ವೇದ ಪುರಾಣ ಆಗಮ ಉಪನಿಷತ್ ಗಳ ಬಗ್ಗೆ ಅಪಾರ ಜ್ಞಾನ ಇತ್ತು ಎಂಬುದನ್ನು ಶರಣ ದರ್ಶನ ಪುಸ್ತಕ ಒತ್ತಿ ಹೇಳುತ್ತದೆ

ಹಾಗಾಗಿ ವಚನಗಳು ದರ್ಶನಗಳು ಅವುಗಳನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡದೆ ದೇಶಿಯ ಸಂಸ್ಕೃತಿ ಆಧಾರದಲ್ಲಿ ಅಧ್ಯಯನ ಮಾಡಬೇಕು ಎಂಬುದು ವಚನ ದರ್ಶನ ಪುಸ್ತಕದ ಒಟ್ಟಾರೆ ಆಶಯ

ಇವರ ಆಶಯವನ್ನು ನಾವು ಗೌರವಿಸೋಣ
ಶರಣರು ಶ್ರೇಷ್ಠ ಶಿವ ಭಕ್ತರು ಎಂಬುದನ್ನು ಒಪ್ಪೋಣ
ಹಾಗೆಯೇ ಶರಣರು ಪ್ರತಿಪಾದಿಸಿದ ಶಿವನ ಬಗ್ಗೆ ಸ್ವಲ್ಪ ವಿಚಾರ ಮಾಡೋಣ

ಶಿವ ಅಂದ ತಕ್ಷಣ ನಮಗೆ ಕ್ಯಾಲೆಂಡರ್ ನಲ್ಲಿ ಬರುವ ಕೈಲಾಸದಲ್ಲಿ ಶಿವ ಪಾರ್ವತಿ ಗಣಪತಿ ಈ ರೀತಿಯ ಕಲ್ಪನೆ ಬರುತ್ತದೆ
ಆದರೆ ಶರಣರು ಅಸುರ ಮಾಲೆಗಳಿಲ್ಲ ತ್ರಿಶೂಲ ಢಮರುಗ ಇಲ್ಲ ಎಂದು ಕಾಲ್ಪನಿಕ ಶಿವನನ್ನು ತಿರಿಸ್ಕರಿದ್ದಾರೆ

ಕೈಲಾಸ ಕೈಲಾಸ ಎಂದು ಬಡಿದಾಡು ಅಣ್ಣಗಳಿರಾ ಕೈಲಾಸ ಎಂಬುದು ಹಾಳು ಬೆಟ್ಟ ಎಂದು ಕೈಲಾಸವನ್ನೇ ತಿರಸ್ಕರಿಸಿದ್ದಾರೆ

ಸಾವಿಲ್ಲದ ಕೇಡಿಲ್ಲದ ರೂಹು ಇಲ್ಲದ ಭಯ ಇಲ್ಲದ ಭವ ಇಲ್ಲದ ದೇವರನ್ನು ನಮಗೆ ಕಟ್ಟಿಕೊಡುತ್ತಾರೆ ಶರಣರು

ಜಗದಗಲ ಮುಗಿಲಗಲ ಮಿಗೆಯಗಲ ಅಗೋಚರ ಅಪ್ರತಿಮ ಚೈತನ್ಯವೇ ಶಿವ ಎಂದು ಶಿವನ ಸ್ಪಷ್ಟ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಶರಣರು

ನೂರಾರು ದೇವರುಗಳನ್ನು ತಿರಸ್ಕರಿಸಿ ದೇವರು ಒಬ್ಬನೇ ಎಂಬುದನ್ನು ಸಾರಿ ಸಾರಿ ಹೇಳಿದ್ದಾರೆ ಶರಣರು

ಶ್ರೇಷ್ಠ ಶಿವ ಭಕ್ತರಾದ ಶರಣರು ದೇವರ ಬಗ್ಗೆ ನಮಗೆ ಕಾಲ್ಪನಿಕ ದೇವರನ್ನು ತೊರೆದು ಜಗದಗಲ ಮುಗಿಲಗಲ ವ್ಯಾಪಿಸಿರುವ ಚೈತನ್ಯವನ್ನು ದೇವರು ಎಂದು ತೋರಿಸಿರುವಾಗ ನಾವು ಕಾಲ್ಪನಿಕ ದೇವರನ್ನು ನಂಬಿ ಕೂರುವುದು ಎಷ್ಟರಮಟ್ಟಿಗೆ ಸರಿ ಹೇಳಿ ಬನ್ನಿ ನಾವೂ ಸಹ ಶರಣರಂತೆ ಈ ಕಾಲ್ಪನಿಕ ದೇವರನ್ನು ನೂರಾರು ದೇವರನ್ನು ತಿರಸ್ಕರಿಸಿ ಜಗತ್ತಿನ ಚೈತನ್ಯವನ್ನು ದೇವರಾಗಿ ಸ್ವೀಕರಿಸೋಣ

ಶ್ರೇಷ್ಠ ಜ್ಞಾನಿಗಳು ವೇದ ಆಗಮ ಪುರಾಣಗಳ ಬಗ್ಗೆ ಅಪಾರ ಪಾಂಡಿತ್ಯ ಶರಣರಿಗೆ ಇತ್ತು ಎಂಬುದು ವಚನ ದರ್ಶನ ಪುಸ್ತಕದ ಆಶಯ
ಇದನ್ನು ಸಹ ನಾವು ಒಪ್ಪೋಣ

ವೇದ ಶಾಸ್ತ್ರ ಪುರಾಣ ಆಗಮಗಳ ಬಗ್ಗೆ ಅಪಾರ ಪಾಂಡಿತ್ಯ ಇದ್ದ ಶರಣರು
ವೇದಕ್ಕೆ ಹೊರೆಯ ಕಟ್ಟುವೆ
ಶಾಸ್ತ್ರಕ್ಕೆ ನಿಗಳವನಿಕ್ಕುವೆ
ತರ್ಕದ ಬೆನ್ನ ಬಾರತ್ತೆವೆ
ಆಗಮದ ಮೂಗ ಕೊಯ್ಯುವೆ

ವೇದ ಶಾಸ್ತ್ರ ಪುರಾಣಗಳು ಕೊಟ್ಟಣದ ತೌಡು ಎಂದಿದ್ದಾರೆ

ವೇದವೆಬುವುದು ಓದಿನ ಮಾತು
ಪುರಾಣವೆಂಬುದು ಪುಂಡರ ಗೋಷ್ಠಿ
ತರ್ಕ ವೆಂಬುದು ತಗರಾ ಓರಟೆ
ಶಾಸ್ತ್ರ ಸಂತೆಯ ಸುದ್ದಿ

ವೇದ ವಿಪ್ರರ ಬೋದೆ
ವೇದವೆಬುವುದು ಸರಸ್ವತಿಯ ಎಂಜಲು
ವೇದಗಳು ಬ್ರಾಹ್ಮಣರ ಭೋದೆ

ಎಂದು ಸಿಕ್ಕ ಸಿಕ್ಕ ಶಬ್ದಗಳಲ್ಲಿ ವೇದ ಶಾಸ್ತ್ರ ಆಗಮ ಪುರಾಣಗಳನ್ನು ತೀರಸ್ಕರಿಸಿದ್ದಾರೆ

ಅಂತಹ ಶ್ರೇಷ್ಠ ಜ್ಞಾನಿಗಳು ವೇದ ಆಗಮ ಶಾಸ್ತ್ರ ಪುರಾಣಗಳನ್ನು ಚನ್ನಾಗಿ ಅಧ್ಯಯನ ಮಾಡಿದ ಶರಣರು ಅವುಗಳನ್ನು ತಿರಸ್ಕರಿಸಿದ್ದಾರೆ ಅಂದ ಮೇಲೆ ನಾವೂ ನೀವು ತಿರಸ್ಕರಿಸದಿದ್ದರೆ ಹೇಗೆ ಬನ್ನಿ ತಿರಸ್ಕರಿಸೋಣ

ಶ್ರೇಷ್ಠ ಆಧ್ಯಾತ್ಮಿಕ ಸಾಧನೆ ಮಾಡಿದವರು ಶರಣರು ಎಂಬುದು ವಚನ ದರ್ಶನ ಪುಸ್ತಕದ ಮತ್ತೊಂದು ಆಶಯ
ಇದನ್ನು ಸಹ ನಾವು ಒಪ್ಪೋಣ

ಶ್ರೇಷ್ಠ ಆಧ್ಯಾತ್ಮಿಕ ಸಾಧನೆ ಮಾಡಿದ ಶರಣರು
ಅರ್ಚನೆ ಪೂಜೆ ಮಂತ್ರ ತಂತ್ರ ಇವುಗಳಿಗಿಂತ ಆದರ್ಶ ಬದುಕು ಶ್ರೇಷ್ಠ ಎಂದಿದ್ದಾರೆ

ವ್ರತಗಳನ್ನು ತಿರಸ್ಕರಿಸಿ ಹಾಲ ನಮ್ಮವ ಮಾಡಿದವರು ಬೆಕ್ಕಾಗುವರು
ಕಡಲೆಯ ನೇಮ ಮಾಡಿದವರು ಕುದುರೆಯಾಗಿ ಹುಟ್ಟುವರು
ಅಘ್ಘವಣಿಯ ನೇಮವ ಮಾಡಿದವರು ಕಪ್ಪೆಯಾಗಿ ಹುಟ್ಟುವರು ಎಂದು ವ್ರತಗಳನ್ನು ಲೇವಡಿ ಮಾಡಿದ್ದಾರೆ

ಕಾಶಿ ಕೇದಾರ ಶ್ರೀಶೈಲ ಮುಂತಾದ ತೀರ್ಥಕ್ಷೇತ್ರಗಳನ್ನು ತಿರಸ್ಕರಿಸಿ ತನ್ನ ತಾ ಅರಿಯಬೇಕು ಎಂದಿದ್ದಾರೆ

ಕಲ್ಲ ಮನೆಯ ಮಾಡಿ ಕಲ್ಲು ದೇವರ ಮಾಡಿ ಕಲ್ಲು ಕಲ್ಲ ಮೇಲೆ ಬಿದ್ದರೆ ದೇವರು ಎತ್ತ ಹೋದನು ಎಂದಿದ್ದಾರೆ

ಸ್ಥಾವರಕ್ಕೆ ಅಳಿವು ಉಂಟು ಜಂಗಮಕ್ಕೆ ಅಳಿವು ಇಲ್ಲ ಎಂದಿದ್ದಾರೆ

ಬೆಟ್ಟದ ಲಿಂಗಕ್ಕೆ ಹೋಗಿ ಬೀಳುವವರ ಎಡಗಾಲ ಎಕ್ಕಡದಲ್ಲಿ ಲಟಲಟನೆ ಹೊಡೆ ಎಂದಿದ್ದಾರೆ

ಶ್ರೇಷ್ಠ ಆಧ್ಯಾತ್ಮಿಕ ಸಾಧನೆ ಮಾಡಿದ ಶರಣರೇ ಗುಡಿ ಗೋಪುರಗಳನ್ನು ತಿರಸ್ಕರಿಸಿದ ಮೇಲೆ ನಾವು ನೀವು ಯಾವ ಲೆಖ್ಖ ಬನ್ನಿ ನಾವು ಸಹ ಶರಣರ ಆಶಯದಂತೆ ಗುಡಿ ಗುಂಡಾರ ತಿರಸ್ಕರಿಸೋಣ

ವಚನಗಳನ್ನು ದರ್ಶನ ಎಂದಿದ್ದಾರೆ ಇದನ್ನು ಸಹ ನಾವು ಒಪ್ಪೋಣ
ದರ್ಶನ ಅಂದ ಮೇಲೆ ಅವುಗಳನ್ನು ಪಾಲನೆ ಮಾಡಲೇ ಬೇಕಲ್ಲವೇ

ವಿಪ್ರರು (ಬ್ರಾಹ್ಮಣರು) ನುಡಿದಂತೆ ನಡೆಯರು ಎಂದಿದ್ದಾರೆ
ಬ್ರಾಹ್ಮಣರನ್ನು ನಂಬಿ ಕರ್ಣ ಗೌತಮ ಬಲಿ ಮುಂತಾದವರು ಹಾಳಾಗಿದ್ದಾರೆ ಎಂದಿದ್ದಾರೆ ಹಾಗಾಗಿ ನಾವು ನೀವು ಬ್ರಾಹ್ಮಣ್ಯ ತಿರಸ್ಕರಿಸೋಣ

ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ ಎಂದು ಎಲ್ಲರನ್ನೂ ಅಪ್ಪಿಕೊಳ್ಳೋಣ

ಶ್ರೇಷ್ಠ ದರ್ಶನಗಳಾದ ವಚನಗಳ ಆಶಯದಂತೆ ಬಾಳೋಣ

ಶರಣರದು ಭಕ್ತಿ ಚಳುವಳಿ ಎಂದಿದ್ದಾರೆ ಇದನ್ನು ಸಹ ನಾವು ಒಪ್ಪೋಣ

ಭಕ್ತಿ ಚಳುವಳಿಗಾರರಾದ ಶರಣರು ಪೂಜೆಗಿಂತ ಕಾಯಕ ಶ್ರೇಷ್ಠ ಎಂದಿದ್ದಾರೆ

ಪೂಜೆ ಮಾಡುವ ವ್ಯಕ್ತಿಗಳಿಗಿಂತ ಕಾಯಕ ಮಾಡುವವರೇ ಶ್ರೇಷ್ಠ ಅಂದಿದ್ದಾರೆ

ಮೂಢನಂಬಿಕೆ ಕಂದಚಾರ ಶೋಷಣೆ ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ್ದಾರೆ

ಭಕ್ತಿ ಚಳುವಳಿಗಾರರಾದ ಶರಣರೇ ಕಾಯಕ ಶ್ರೇಷ್ಠ ಅಂದ ಮೇಲೆ ನಾವೂ ಸಹ ಕಾಯಕಕ್ಕೆ ಮೊದಲ ಆಧ್ಯತೆ ಕೊಡೋಣ
ಪುರೋಹಿತ ಶಾಹಿ ವ್ಯವಸ್ಥೆ ದಿಕ್ಕರಿಸೋಣ

ಹೀಗೆ ಭಕ್ತಿ ಜ್ಞಾನ ಸಂಪನ್ನರಾದ ಶರಣರು ಭಾರತೀಯ ಸಂಸ್ಕೃತಿ ನೆಲೆಯಲ್ಲಿ ತಿರಸ್ಕರಿಸಿದ ವೇದಗಳನ್ನು ಶಾಸ್ತ್ರಗಳನ್ನು ಪುರಾಣಗಳನ್ನು ಆಗಮಳನ್ನು

ಗುಡಿ ಗುಂಡಾರಗಳನ್ನು ಬಹುದೇವತಾ ಆರಾಧನೆಗಳನ್ನು
ಕಾಲ್ಪನಿಕ ದೇವರುಗಳು ತಿರಸ್ಕರಿಸಿ ವಚನ ದರ್ಶನ ಪುಸ್ತಕದ ಆಶಯದಂತೆ ಬಾಳೋಣ ಮಾನವೀಯತೆ ಬೆಳೆಸೋಣ

Share This Article
4 Comments
  • ಈಗಾಗಲೇ ತಿರಷ್ಕರಿಸಿಯಾಗಿದೆ…. ಇದೇ ಮಹಾನುಭಾವರು ತಗೆದ ಚಲನಚಿತ್ರ ಶರಣ ಶಕ್ತಿ ಯನ್ನೂ ತಿರಷ್ಕರಿಸಿದ್ದಾಯಿತು…

  • ೧೨ ನೇಯ ಶತಮಾನದಿಂದ ಶರಣರನ್ನು ಬೆಳೆಯಲು ಬಿಟ್ಟಿಲ್ಲಾ ಅವರು ಎಷ್ಟೇ ತುಳಿಯಲು ಪ್ರಯತ್ನಿಸಿದರೂ ಜಗತ್ತಿನಾದ್ಯಂತ ಬಸವಾದಿ ಶರಣರ ಸಿದ್ಧಾಂತಗಳು ಹಬ್ಬುತ್ತಿವೆ. ಆದರೂ ಜಂಗಮ ತತ್ವ ನಮ್ಮಲ್ಲಿ ಜೀವಂತವಾಗಿರಬೇಕು

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು