ವಚನ ದರ್ಶನ ಪುಸ್ತಕ ಮುಟ್ಟುಗೋಲು ಹಾಕಲು ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ವಿವಾದಾಸ್ಪದ ವಚನ ದರ್ಶನ ಪುಸ್ತಕವನ್ನು ಮುಟ್ಟುಗೋಲು ಹಾಕಲು ಶರಣ ಸಮಾಜದಿಂದ ಅನೇಕರು ಆಗ್ರಹಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಸಚಿವ ಶಿವರಾಜ ತಂಗಡಗಿಯವರಿಗೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಡಾ ಶಶಿಕಾಂತ ಪಟ್ಟಣ ಅವರು ಬಹಿರಂಗ ಪತ್ರ ಬರೆದಿದ್ದಾರೆ.

ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿ
ಮಾನ್ಯ ಸಚಿವರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕರ್ನಾಟಕ ಸರಕಾರ ಬೆಂಗಳೂರು

ವಿಷಯ – ಅಯೋಧ್ಯಾ ಪ್ರಕಾಶನದ ವಚನ ದರ್ಶನ ಪುಸ್ತಕ ಮುಟ್ಟುಗೋಲು ಹಾಕಲು ಆಗ್ರಹ

ಮಾನ್ಯರೇ

ಅಯೋಧ್ಯಾ ಪ್ರಕಾಶನದ ವಚನ ದರ್ಶನ ಪುಸ್ತಕವು ವಚನ ಸಾಹಿತ್ಯ ಚಳುವಳಿಗೆ ಶರಣ ಸಿದ್ಧಾಂತಕ್ಕೆ ಅಪಚಾರವೆಸಗುವ ಮತ್ತು ಮೂಲ ಶರಣರ ಆಶಯಗಳಿಗೆ ದಕ್ಕೆ ತರುವ ರೀತಿಯಲ್ಲಿ ಮೂಡಿ ಬಂದಿದ್ದು ಇದು ಬಸವಾಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಶರಣರ ಬಗೆಗಿರುವ ಪ್ರಕಾಶಕರ ಸಂಪಾದಕರ ಲೇಖಕರ ಅಭಿಪ್ರಾಯಗಳು ಅಭಿಮತಗಳು ಅತ್ಯಂತ ಕಡಿಮೆ ಮಟ್ಟದ್ದಾಗಿದ್ದು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಕಪ್ಪು ಮಸಿ ಹಚ್ಚುವ ಕಾರ್ಯವನ್ನು ಕೆಲ ಮತೀಯ ಸಂಘಟನೆಗಳು ಮಾಡುತ್ತಿದ್ದು ಇದರಿಂದ ಸಾಮಾಜಿಕ ಸೌಹಾರ್ದತೆ ಶಾಂತಿ ಕದಡುವ ಸಾಧ್ಯತೆ ಇದ್ದು ಗೊಂದಲ ವಾತಾವರಣ ನಿರ್ಮಾಣವಾಗಿದೆ.
ಡಾ ಶಶಿಕಾಂತ ಪಟ್ಟಣ
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ
ಈ ಹಿಂದೆ ಧರ್ಮ ಕಾರಣ ಕೃತಿಯನ್ನು ಮತ್ತು ಅನೇಕ ಕೃತಿಗಳ ಮುಟ್ಟುಗೋಲು ಹಾಕಿ ಶರಣರ ಮೌಲ್ಯಗಳನ್ನು ಎತ್ತಿ ಹಿಡಿದ ಹಿಂದಿನ ಸರಕಾರದ ರೀತಿಯಲ್ಲಿ ಈ ಕೂಡಲೇ ತಾವು ಆಸ್ಥೆ ವಹಿಸಿ ಇಂತಹ ವಿವಾದ ಹುಟ್ಟಿಸುವ ಕೃತಿಯನ್ನು ಮುಟ್ಟುಗೋಲು ಹಾಕಬೇಕೆಂದು ಸರ್ವ ಬಸವಾಭಿಮಾನಿಗಳ ಪರವಾಗಿ ವಿನಂತಿಸುತ್ತೇವೆ.

ಶರಣಾರ್ಥಿ

Share This Article
Leave a comment

Leave a Reply

Your email address will not be published. Required fields are marked *