ಗುಂಡ್ಲುಪೇಟೆ
ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಅಂತರಕಾಲೇಜು ವಚನಗಾಯನ ಸ್ಪರ್ಧೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ವಚನ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಐದು ತಂಡಗಳಾಗಿ ವಿಂಗಡಿಸಿ ಪ್ರಥಮ, ದ್ವಿತೀಯ, ತೃತೀಯ ಹಾಗು ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.
ಬೊಮ್ಮಲಾಪುರ ಬಸವಣ್ಣ ಮತ್ತು ಬಸವರಾಜಪ್ಪನವರು ವಚನಗಳನ್ನ ರೀತಿ ತಿಳಿಸಿ ಕೊಟ್ಟು ವಚನಗಳ ಮಹತ್ವ ತಿಳಿಸಿದರು. ಎಲ್ ಬಸವರಾಜಪ್ಪ ಮತ್ತು ಕನ್ನಡ ಪ್ರಾಧ್ಯಾಪಕರಾದ ಸಿದ್ಧಮಲ್ಲಿಕಾರ್ಜುನ ಸ್ವಾಮಿ ತೀರ್ಪುಗಾರರಾಗಿ ಬಂದಿದ್ದರು.

ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್ ಪದವಿ ಪೂರ್ವ ವಿಭಾಗದ ಪ್ರಾಚಾರ್ಯರಾದ ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು.
ಗುಂಡ್ಲುಪೇಟೆ ಜೆ.ಎಸ್.ಎಸ್ ಕಾಲೇಜು ಪ್ರಾಚಾರ್ಯರಾದ ಡಾ॥ ಮಹದೇವಮ್ಮನವರು ಗಿಡಕ್ಕೆ ನೀರು ಎರೆಯುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉದ್ಘಾಟನ ಬಾಷಣ ಮಾತನಾಡಿದ ಅವರು ಶರಣರ ತತ್ವ ಆದರ್ಶಗಳನ್ನು ಪಾಲಿಸುವ ಮಾನವತ ಸಮಾಜವನ್ನು ಸೃಷ್ಟಿ ಮಾಡಬೇಕು. ಅಸಮಾನತೆ, ಜಾತೀಯತೆ, ತಾರತಮ್ಯೆಗಳನ್ನು ಹೋಗಲಾಡಿಸಿ ಪ್ರತಿಯೊಬ್ಬರು ವಿಶ್ವಪಥದೆಡೆಗೆ ಸಾಗಬೇಕು ಈ ನಿಟ್ಟಿನಲ್ಲಿ ಶಿವಶರಣರು ನೀಡಿರುವ ವಚನ ಸಂಸ್ಕೃತಿಯನ್ನ ಬಿತ್ತುವ ಮೂಲಕ ಪ್ರಸ್ತುತ ಯುವಜನರನ್ನು ಸುಸಂಸ್ಕೃತಿಯೆಡೆಗೆ ಕೊಂಡೊಯ್ಯುವ ಕೆಲಸ ನಮ್ಮೆಲ್ಲರ ಜವಾಬ್ದಾರಿಯಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಸಂಚಾಲಕರಾದ ಕಾಳಿಂಗಸ್ವಾಮಿ ಸಿದ್ದಾರ್ಥ ಪ್ರಾಸ್ತಾವಿಕ ನುಡಿದರು. KSN ಕಾಲೇಜಿನ ಉಪನ್ಯಾಸಕರಾದ ರಮೇಶ್ ಹಾಜರಿದ್ದರು.