ನಂಜನಗೂಡು
ಪಟ್ಟಣದ ಶ್ರೀಮತಿ ರೂಪ ಮಂಜುನಾಥ್ ಅವರ ಕುಟುಂಬದ ಸದಸ್ಯರು ಸಹಜ ಶಿವಯೋಗ ಮತ್ತು ಇಷ್ಟಲಿಂಗ ಧೀಕ್ಷೆಯನ್ನು ಶರಣ ಮಂಜುನಾಥ ನೇಗಿಹಾಳ ರವರಿಂದ ಸೋಮವಾರ ಪಡೆದರು.

ಬೈಲಹೊಂಗಲದ ಮಂಜುನಾಥ ನೇಗಿಹಾಳ ಅವರು ಆಸ್ತಮಸ್ತಕ ಸಂಯೋಗ ಮಾಡಿ ರೂಪ, ರುದ್ರೇಶ್, ವೇದ ರುದ್ರೇಶ್, ರಾಜು, ಸಂದೃಧ್ ರವರಿಗೆ ದೀಕ್ಷೆಯನ್ನು ನೀಡಿ, ಇಷ್ಟಲಿಂಗ ಪೂಜೆ ಮತ್ತು ಯೋಗವನ್ನು ಮಾಡುವುದನ್ನು ವಿವರವಾಗಿ ತಿಳಿಸಿ ಕೊಟ್ಟರು.

ಎರಡು ತಿಂಗಳ ಹಿಂದೆ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಮೈಸೂರಿನ ಪಂಚಗವಿ ಮಠದಲ್ಲಿ ಜರುಗಿದ ಒಂದು ದಿನದ ವಚನ ಕಮ್ಮಟ ಕಾರ್ಯಗಾರದಲ್ಲಿ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ನಂತರ ಒಟ್ಟಾಗಿ ಇಷ್ಟಲಿಂಗ ದೀಕ್ಷೆ ಪಡೆದುಕೊಳ್ಳಲು ನಿರ್ಧರಿಸಿದರು.

ನಾವು ಮೊದಲು ವಚನಗಳನ್ನು ಓದುತ್ತಿದ್ದರೂ ನಮಗೆ ಶರಣರ ಹಾಗೂ ಇಷ್ಟಲಿಂಗದ ಬಗ್ಗೆ ಸರಿಯಾದ ಸ್ಪಷ್ಟತೆ ಇರಲಿಲ್ಲ. ಕಮ್ಮಟದಲ್ಲಿ ಸ್ಪಷ್ಟತೆ ಬಂದು ದೀಕ್ಷೆ ತೆಗೆದುಕೊಂಡೆವು. ಈಗ ನಮಗೆ ಸಂತೃಪ್ತ ಭಾವ ಬಂದಿದೆ ಎಂದು ಕುಟುಂಬದವರು ಹೇಳಿದರು.

ದೀಕ್ಷಾ ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿ ಪ್ರಸಾರ ವೇದಿಕೆ ಪ್ರಚಾರಕರಾದ ಶರಣ ಕಾ.ಸು.ನಂಜಪ್ಪರವರು ಉಪಸ್ಥಿತರಿದ್ದರು.