ಸಾಣೇಹಳ್ಳಿ:
ಜಗತ್ತಿನ ಎಂಬತ್ತು ಭಾಷೆಗಳಲ್ಲಿ ಕನ್ನಡವೂ ಉಳಿಯುತ್ತದೆ. ಇದಕ್ಕೆ ಕಾರಣ ಬಸವಾದಿ ಶರಣರು ಬರೆದ ವಚನಗಳು. ಅವರ ಮೂಲಕ ಕನ್ನಡ ಉಳಿಯುತ್ತದೆ ಎಂದು ಶೇಗುಣಸಿ ವಿರಕ್ತಮಠದ ಮಹಾಂತ ಪ್ರಭು ಸ್ವಾಮಿಗಳು ಹೇಳಿದರು.
ಸಾಣೇಹಳ್ಳಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಭಾನುವಾರ ಅವರು ಮಾತನಾಡಿದರು.

ಜೀವನದ ಸಂದೇಶಗಳನ್ನು ಹಾಗೆಯೇ ಹೇಳಿದರೆ ಜನರು ಕೇಳುವುದಿಲ್ಲವೆಂದು ಸಾಣೇಹಳ್ಳಿ ಸ್ವಾಮೀಜಿ ನಾಟಕಗಳ ಮೂಲಕ ತಿಳಿಸಿದಾಗ ಲಕ್ಷಾಂತರ ಜನರು ನೋಡಿದರು. ಈ ಮೂಲಕ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ರಾಜ್ಯದ ಯಾವುದೇ ಮಠಗಳು ಅನ್ನದಾಸೋಹ ನಡೆಸುತ್ತವೆ. ಆದರೆ ಪ್ರತಿಭೆಯನ್ನು ಧಾರೆ ಎರೆಯುವ ಮಠವೆಂದರೆ ಸಾಣೇಹಳ್ಳಿಯ ಮಠ ಎಂದರು.
							
			