ಬೆಳಗಾವಿ:
ಜಾಗತಿಕ ಲಿಂಗಾಯತ ಮಹಾಸಭಾ ಮಹಾನಗರ ಹಾಗೂ ತಾಲೂಕಾ ಘಟಕಗಳ ಆಶ್ರಯದಲ್ಲಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ, ಗುರು ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 01, 2026 ರವಿವಾರ, ನಗರದ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ, ಶಿವಬಸವ ನಗರ, ಬೆಳಗಾವಿಯಲ್ಲಿ ಮುಂಜಾನೆ 10 ಗಂಟೆಗೆ ಸ್ಪರ್ಧೆ ನಡೆಯಲಿದೆ.
ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ – 3001ರೂ., ದ್ವಿತೀಯ -2001ರೂ., ತೃತೀಯ ಬಹುಮಾನ -1001ರೂ. ನೀಡಲಾಗುವುದು.
ಸ್ಪರ್ಧೆಯ ನಿಯಮಗಳು:
ಬೆಳಗಾವಿ ತಾಲೂಕಿಗೆ ಮಾತ್ರ ಸೀಮಿತವಾಗಿರುತ್ತದೆ. ಗುರು ಬಸವಣ್ಣನವರ ವಚನಗಳನ್ನು ಮಾತ್ರ ಹೇಳುವುದು. ಸ್ಪರ್ಧಾಳುಗಳಿಗೆ ಉಚಿತ ಪ್ರವೇಶ. ಭಾಗವಹಿಸುವ ಸ್ಪರ್ಧಾಳುಗಳಿಗೆ ಯಾವುದೇ ರೀತಿಯ ಖರ್ಚು ಕೊಡಲಾಗುವುದಿಲ್ಲ. ತಾವು ಹೇಳುವ ವಚನಗಳ ಒಂದು ಲಿಖಿತ ಅಥವಾ ಮುದ್ರಿತ ಪ್ರತಿಯನ್ನು ಸಂಘಟಕರಲ್ಲಿ ನೀಡುವುದು. ವಚನಗಳನ್ನು ಹೇಳಲು ಗರಿಷ್ಠ 30 ನಿಮಿಷ ಸಮಯ ಮತ್ತು ಮಧ್ಯದಲ್ಲಿ ನೆನಪಿಸಿಕೊಳ್ಳಲು 60 ಸೆಕೆಂಡ್ ಮಾತ್ರ ಕಾಲಾವಕಾಶ.
ರಾಜ್ಯಮಟ್ಟ, ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಮತ್ತು ಸಂಚಾರಿ ಗುರುಬಸವ ಬಳಗದಿಂದ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಅವಕಾಶ ಇರುವುದಿಲ್ಲ.
ವಯಸ್ಸಿನ ನಿರ್ಬಂಧವಿಲ್ಲದೆ ಎಲ್ಲ ವಯಸ್ಸಿನ ಆಸಕ್ತರು ಭಾಗವಹಿಸಬಹುದು. ತೀರ್ಪುಗಾರರ ನಿರ್ಣಯವೇ ಅಂತಿಮ. ಸ್ಪರ್ಧೆಯಲ್ಲಿ ಭಾಗವಹಿಸುವವರು ಫೆಬ್ರವರಿ 28ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು.
ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರನ್ನು ಸಂಚಾರಿ ಗುರುಬಸವ ಬಳಗ ನಡೆಸುವ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಈ ಕೆಳಗಿನವರನ್ನು ಸಂಪರ್ಕಿಸಬೇಕು.
1) ಸಿ.ಎಂ. ಬೂದಿಹಾಳ-9980385079
ಪ್ರಧಾನ ಕಾರ್ಯದರ್ಶಿ, ನಗರ ಘಟಕ
2) ಆನಂದ ಕೊಂಡಗುರಿ-8861872272
ಪ್ರಧಾನ ಕಾರ್ಯದರ್ಶಿ, ತಾಲೂಕ ಘಟಕ, ಬೆಳಗಾವಿ.
