ಮಕ್ಕಳಿಗಾಗಿ ಚೆನ್ನಬಸವಣ್ಣ ವಚನ ಪಾಠಶಾಲೆಗೆ ಚಾಲನೆ

ರಾಯಚೂರು

ನಗರದ ಬಸವ ಕೇಂದ್ರದಲ್ಲಿ ರವಿವಾರ ‘ಚೆನ್ನಬಸವಣ್ಣನವರ ಜಯಂತಿ’ ಮತ್ತು ‘ಮಕ್ಕಳಿಗಾಗಿ ಚೆನ್ನಬಸವಣ್ಣ ವಚನ ಪಾಠಶಾಲೆ’ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಜಯಶ್ರೀ ಮಹಾಜನಶೆಟ್ಟಿ ಅವರು, ಶರಣರು ಚೆನ್ನಬಸವಣ್ಣನನ್ನು ಷಟಸ್ತಲ ಚಕ್ರವರ್ತಿ ಎಂದೇ ಕರೆದರು. ಬಸವಣ್ಣನವರು ಕಲ್ಯಾಣದಿಂದ ನಿರ್ಗಮಿಸಿದ ಬಳಿಕ ಶೂನ್ಯಪೀಠದ ೨-ನೇ ಅಧ್ಯಕ್ಷರಾಗಿದ್ದರು ಎಂದು ಹೇಳಿದರು.

ಮುಂದೆ ಕಲ್ಯಾಣದ ಕ್ರಾಂತಿಯ ನಂತರ ವಚನಗಳ ಸಂರಕ್ಷಣೆಗೆ ಅಕ್ಕನಾಗಮ್ಮ, ಮಡಿವಾಳ ಮಾಚಿದೇವ, ಲಾವಣ್ಯವತಿ ಮುಂತಾದ ಅನೇಕ ಶರಣರೊಡಗೂಡಿ ಉಳವಿಗೆ ಪ್ರಯಾಣ ಬೆಳೆಸಿ ಅತ್ಯಮೂಲ್ಯ ವಚನಗಳನ್ನು ರಕ್ಷಿಸಿದ ಪ್ರಮುಖರು ಚೆನ್ನಬಸವಣ್ಣನವರು ಎಂದರು.

ಮುಕ್ತಾ ನರಕಲದಿನ್ನಿ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರಾಗಿ ಡಾ. ಪ್ರಿಯಾಂಕಾ ಪಾಟೀಲ, ಪೂರ್ಣಿಮಾ ಪಾಟೀಲ ಮಕ್ಕಳಿಂದಲೇ ವಚನ ಪಾಠಶಾಲೆ ಉದ್ಘಾಟಿಸಿದರು.

ಮಕ್ಕಳಿಂದ ವಚನ ಪಠಣ, ಅಷ್ಟಾವರಣ, ಪಂಚಾಚಾರಗಳ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡಿ, ಬಳಿಕ ಮಕ್ಕಳಿಂದಲೇ ಅವುಗಳ ಪಠಣ ಮಾಡಿಸಲಾಯಿತು.

ನಂತರ ವಾರದ ಕಾರ್ಯಕ್ರಮ ನಡೆಯಿತು. ಬಸವ ಪ್ರಾರ್ಥನೆಯನ್ನು ಪೂರ್ಣಿಮಾ ಪಾಟೀಲ ನಡೆಸಿಕೊಟ್ಟರು. ನಾಗೇಶಪ್ಪ ವಚನ ಗಾಯನ ಮಾಡಿದರು. ಮುಕ್ತಾ ನರಕಲದಿನ್ನಿ ಅವರು ಮಾತನಾಡಿ, ವಚನಗಳ ಸಂವಿಧಾನ ಬದ್ಧವಾದ, ತಾರ್ಕಿಕವಾದ, ವೈಚಾರಿಕವಾದ ನಿಲುವನ್ನು ಶರಣ ಬಳಗವೆಲ್ಲಾ ಮೆಚ್ಚಿದ್ದರೆಂದರು.

ಸಿ.ಬಿ. ಪಾಟೀಲ ವಕೀಲರು ಮಾತನಾಡಿ, ಚೆನ್ನಬಸವಣ್ಣನವರ ವಚನ ಪಾಠಶಾಲೆ ಪ್ರಾರಂಭ ಕುರಿತು ಶ್ಲಾಘಿಸಿದರು. ಲಲಿತಾ ಡಾ. ಬಸನಗೌಡರು ಶರಣೆ ಅಕ್ಕಮ್ಮನ ಕುರಿತು ಮಾತನಾಡಿದರು. ಸುಮಂಗಲಾ ಹಿರೇಮಠ ಚನ್ನಬಸವಣ್ಣನವರ ಸಾಧನೆ ಕೊಂಡಾಡಿದರು. ಚಂದ್ರಕಲಾ ಡಾ. ವಿರುಪಾಕ್ಷಿಯವರು ಮಾತನಾಡಿ, ಚೆನ್ನಬಸವಣ್ಣನವರ ಪ್ರತಿಭೆಗೆ, ಜ್ಞಾನಕ್ಕೆ ಸರ್ವರು ತಲೆ ಬಾಗಿದರೆಂದರು.

ಬಸವರಾಜ ಕುರುಗೋಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಾದೇವಪ್ಪ ಏಗನೂರು ಸ್ವಾಗತಿಸಿದರು. ಚೆನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಎ. ವೀರಭದ್ರಪ್ಪ ಶರಣು ಸಮರ್ಪಣೆ ಮಾಡಿದರು.

ಅಕ್ಕನ ಬಳಗದ ಸದಸ್ಯರು, ಸರೋಜಾ ಮಾಲಿಪಾಟೀಲ, ಅನ್ನಪೂರ್ಣಾ ಹರವಿ, ಧನಂಜಯ ಸೇರಿದಂತೆ ಶರಣ ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
Leave a comment

Leave a Reply

Your email address will not be published. Required fields are marked *